ಎಸ್.ಬಿ.ಆರ್ ‘ಜೆ.ಇ.ಇ. ಮೇನ್ಸ್’ನಲ್ಲಿ ಉತ್ತಮ ಫಲಿತಾಂಶ

| Published : Feb 14 2024, 02:23 AM IST

ಸಾರಾಂಶ

ವಿನಯಕುಮಾರ ಸಂಗನಬಸಪ್ಪ ಕಸಬೇಗೌಡರ್- 99.6753605 ಪರ್ಸೆಂಟೈಲ್ ಪ್ರಥಮ, 3 ವಿದ್ಯಾರ್ಥಿಗಳು 99 ಪರ್ಸೆಂಟೈಲ್‍ಗಿಂತ ಅಧಿಕ, 35 ವಿದ್ಯಾರ್ಥಿಗಳು 95 ಪರ್ಸೆಂಟೈಲ್‍ಗಿಂತ ಅಧಿಕ, ಒಟ್ಟು 97 ವಿದ್ಯಾರ್ಥಿಗಳು 90 ಪರ್ಸೆಂಟೈಲ್‍ಗಿಂತ ಅಧಿಕ.

ಕನ್ನಡಪ್ರಭ ವಾರ್ತೆ ಕಲಬುರಗಿ

ಶರಣಬಸವೇಶ್ವರ ವಸತಿ ಸಂಯುಕ್ತ ಪದವಿ ಪೂವ ಕಾಲೇಜಿನಲ್ಲಿ ಅಭ್ಯಾಸ ಮಾಡುತ್ತಿರುವ ದ್ವಿತೀಯ ಪಿ.ಯು.ಸಿ. ವಿದ್ಯಾರ್ಥಿಗಳು ಜನೇವರಿ/ಪೆಬ್ರುವರಿ ತಿಂಗಳಿನಲ್ಲಿ ನಡೆದ ಜೆಇಇ ಮೇನ್ಸ್ ಪ್ರಥಮ ಹಂತದ ಪರೀಕ್ಷೆಯಲ್ಲಿ ವಿನಯಕುಮಾರ ಸಂಗನಬಸಪ್ಪ ಕಸಬೇಗೌಡರ- 99.6753605 ಪರ್ಸೆಂಟೈಲ್, ಪ್ರಥಮ ಸ್ಥಾನ, ಅಂಬರೀಷ ಪ್ರಮೋದಕುಮಾರ ಹಿಬಾರೆ- 99.4666009 ಪರ್ಸೆಂಟೈಲ್ ದ್ವಿತೀಯ ಸ್ಥಾನ, ಮಲ್ಲಿಕಾರ್ಜುನ ಚಂದ್ರಶೇಖರ- 99.2132770 ಪರ್ಸೆಂಟೈಲ್ ತೃತೀಯ ಸ್ಥಾನವನ್ನು ಪಡೆದುಕೊಂಡು ಕಾಲೇಜಿನ ಕೀರ್ತಿಗೆ ಪಾತ್ರರಾಗಿದ್ದಾರೆ.

ಜೆಇಇ ಮೇನ್ ಪರೀಕ್ಷೆಯು ಎರಡು ಹಂತಗಳಲ್ಲಿ ನಡೆಯುತ್ತಿದ್ದು,. ಈ ಎರಡೂ ಹಂತಗಳಲ್ಲಿಯ ಪರ್ಸೆಂಟೈಲ್‍ಗಳನ್ನು ಪರಿಶೀಲಿಸಿ, ಎರಡೂ ಹಂತಗಳಲ್ಲಿನ ಅತಿ ಹೆಚ್ಚಿನ ಪರ್ಸೆಂಟೈಲ್‍ನ್ನು ಪರಿಗಣಿಸಿ ಜೆ.ಇ.ಇ: ಅಡ್ವಾನ್ಸಡ್ ಪರೀಕ್ಷೆ ಬರೆಯಲು ಪ್ರವೇಶ ನೀಡಲಾಗುತ್ತದೆ ಹಾಗೂ ದೇಶದ ಪ್ರತಿಷ್ಟಿತ ಎನ್.ಐ.ಟಿ ಕಾಲೇಜುಗಳಲ್ಲಿ ಪ್ರವೇಶ ಪಡೆಯಲು ಅರ್ಹರಾಗಿರುತ್ತಾರೆ. ಎಸ್.ಬಿ.ಆರ್ ಕಾಲೇಜಿನ 1ನೇ ಹಂತದ ಜೆ.ಇ.ಇ. ಮೇನ್ ಫಲಿತಾಂಶವನ್ನು ಗಮನದಲ್ಲಿಟ್ಟುಕೊಂಡು ಈ ವರ್ಷ ಸುಮಾರು 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಜೆ.ಇ.ಇ. ಅಡ್ವಾನ್ಸಡ್ ಪರೀಕ್ಷೆಗೆ ಅರ್ಹತೆಯನ್ನು ಪಡೆಯುವ ನೀರಿಕ್ಷೆಯಿದೆ. ಎರಡನೇ ಹಂತದ ಪರೀಕ್ಷೆಯು ಏಪ್ರಿಲ್ ತಿಂಗಳಲ್ಲಿ ನಡೆಯುವುದು.

ಕಾಲೇಜಿನ ಹಂತ-1 ರ ಫಲಿತಾಂಶದ ವಿವರ- ವಿನಯಕುಮಾರ ಸಂಗನಬಸಪ್ಪ ಕಸಬೇಗೌಡ 99.675360, ಅಂಬರೀಷ ಮೋದಕುಮಾರ ಹಿಬಾರ 99.466600, ಮಲ್ಲಿಕಾರ್ಜುನ ಚಂದ್ರಶೇಖ 99.213277, ಭರತ್ ಸುರೇಂದ್ರ ಪಾವಲ 98.956952, ಸುದನ್ವ ಅಚ್ಯುತ್ ಡಂಬ 98.354032, ರೋಹನ್ ರಾಜಶೇಖರ 98.350911, ಸಮರ್ಥ ಶಿವರಾಜ ಭಾಕರ 97.991133, ವಚಿದನಾ ಶಾಚಿತಸಾಗರ ಸ್ವಾಮ 97.948460, ಮೇಘನಾ ಬಸವರಾ 97.764134, ವಿಠಲರಾವ್ 97.609386, ಓಂಕಾರ ಮಲ್ಲಿಕಾರ್ಜು 97.450790, ಭೂಮಿಕಾ ರಾಜೇಂದ್ರ ಪಾಟೀಲ 97.449015, ದಿನೇಶ ಸಂಜೀವ ರಾಠೋಡ 97.407702, ಸಚ್ಚಿದಾನಂದ ಧರ್ಮೇಂದ್ 97.388038, ಪಂಚಾಕ್ಷರಿ ರಾಜಶೇಖರ 97.086768, ಮೊಹಮ್ಮದ್ ಫೈಸಲ 97.069513, ವೀರೇಶ ಗುರುಲಿಂಗಸ್ವಾಮಿ ಮಠಪತ 96.981199 ಅಂಕ ತೆಗೆದುಕೊಂಡಿದ್ದಾರೆ.

ವಿದ್ಯಾರ್ಥಿಗಳ ಈ ಸಾಧನೆಗೆ ಶರಣಬಸವೇಶ್ವರ ವಿದ್ಯಾವರ್ಧಕ ಸಂಘ ಅಧ್ಯಕ್ಷರಾದ ಡಾ. ಶರಣಬಸವಪ್ಪ ಅಪ್ಪ, ಅವರು ವಿದ್ಯಾರ್ಥಿಗಳು ಸತತ ಅಭ್ಯಾಸ ಮಾಡಿ ಸಂಸ್ಥೆಯ ಗೌರವ ಹೆಚ್ಚಿಸಿದ್ದಾರೆ. ಗುರು-ಶಿಷ್ಯರ ಶ್ರಮ ಸಂಸ್ಕøತಿಗೆ ದೊರೆತ ಫಲಿತಾಂಶ ಇದಾಗಿದೆ ಎಂದು ಸಂತೋಷ ವ್ಯಕ್ತಪಡಿಸಿದ್ದಾರೆ. ಭವಿಷ್ಯದಲ್ಲಿ ನಡೆಯುವ ಪರೀಕ್ಷೆಗಳಲ್ಲಿ ಅತಿ ಹೆಚ್ಚಿನ ಅಂಕಗಳನ್ನು ಪಡೆಯಲೆಂದು ವಿದ್ಯಾರ್ಥಿಗಳಿಗೆ ಆಶೀರ್ವಾದ ಮಾಡಿದ್ದಾರೆ.

ಮಾತೋಶ್ರೀ ಡಾ. ದಾಕ್ಷಾಯಿಣಿ ಅವ್ವಾಜಿ, ಬಸವರಾಜ ದೇಶಮುಖ ಇವರು ಎಸ್.ಬಿ.ಆರ್ ರಾಷ್ಟ್ರಮಟ್ಟದ ಜೆಇಇ ಪರೀಕ್ಷೆಯಲ್ಲಿ ಅದ್ವಿತೀಯ ಸಾಧನೆ ಮಾಡಿದ್ದು ಇದು ಅಲ್ಲಿನ ಶಿಕ್ಷಕರ ಪರಿಶ್ರಮ ಹಾಗೂ ಗುಣಮಟ್ಟದ ಶಿಕ್ಷಣಕ್ಕೆ ಸಾಕ್ಷಿಯಾಗಿದೆ. ವಿದ್ಯಾರ್ಥಿಗಳ ಸಾಧನೆಗೆ ಹರ್ಷ ವ್ಯಕ್ತಪಡಿಸಿ, ಮುಂದೆ ನಡೆಯುವ ಪರೀಕ್ಷೆಯನ್ನು ಚನ್ನಾಗಿ ಬರೆಯಲು ಆಶೀರ್ವದಿಸಿದ್ದಾರೆ.

ಕಾಲೇಜಿನ ಪ್ರಾಚಾರ್ಯ ಎನ್.ಎಸ್. ದೇವರಕಲ್, ಮೇಲ್ವಿಚಾರಕರಾದ ಡಾ. ಶ್ರೀಶೈಲ್ ಹೊಗಾಡೆ, ಎಲ್ಲಾ ವಿಭಾಗಗಳ ಮುಖ್ಯಸ್ಥರು, ಉಪನ್ಯಾಸಕ ವೃಂದದವರು ಸಾಧಕರಿಗೆ ಶುಭ ಹಾರೈಸಿದ್ದಾರೆ.