ಪರಿಶಿಷ್ಟ ಜಾತಿ ಸಮೀಕ್ಷೆ 25ರ ವರೆಗೆ ವಿಸ್ತರಣೆ

| Published : May 19 2025, 12:03 AM IST

ಸಾರಾಂಶ

ಕೋಲಾರ ಜಿಲ್ಲೆಯಲ್ಲಿ ಒಟ್ಟು ೩೦೪೭೩೮ ಕುಟುಂಬಗಳ ಸಮೀಕ್ಷೆ ದಾಖಲಿಸಲಾಗಿದ್ದು, ಇದರಲ್ಲಿ ಪರಿಶಿಷ್ಠ ಜಾತಿಯ ಕುಟುಂಬಗಳು ೮೩೩೭೧ ಮತ್ತು ಇತರೆ ಕುಟುಂಬಗಳ ೨೨೧೩೬೭ ಸಮೀಕ್ಷೆಯಾಗಿದ್ದು, ಒಟ್ಟಾರೆ ಶೇ೬೮.೫೯ರ ಸಮೀಕ್ಷೆ ಪೂರ್ಣಗೊಳಿಸಲಾಗಿದೆ. ಬಾಕಿ ಉಳಿದ ೧೩೯೫೩೨ ಕುಟುಂಬಗಳನ್ನು ೨೫.೦೫.೨೦೨೫ ಒಳಗೆ ಪೂರ್ಣಗೊಳಿಸಲಾಗುವುದು.

ಕನ್ನಡಪ್ರಭ ವಾರ್ತೆ ಕೋಲಾರಪರಿಶಿಷ್ಟ ಜಾತಿ ಸಮೀಕ್ಷೆಗಾಗಿ ಮನೆ ಮನೆಗೆ ಭೇಟಿ ಕಾರ್ಯಕ್ರವನ್ನು ಮೇ ೨೫ ರವರೆಗೆ ವಿಸ್ತರಿಸಲಾಗಿದೆ, ಬ್ಲಾಕ್ ವ್ಯಾಪ್ತಿಯಲ್ಲಿ ವಿಶೇಷ ಶಿಬಿರ ಮೇ ೨೬ ರಿಂದ ೨೮ ಹಾಗೂ ಆನ್‌ಲೈನ್ ಮೂಲಕ ಸ್ವಯಂ ಘೋಷಣೆ ಸಲ್ಲಿಕೆ ಮೇ ೧೯ ರಿಂದ ೨೮ರವರೆಗೆ ನಿಗದಿಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಮಾಹಿತಿ ನೀಡಿದರು.ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಅನೇಕ ಸಂಘಟನೆಗಳು ಮನೆ ಮನೆಗೆ ಭೇಟಿ ನೀಡಿ ಸಮೀಕ್ಷೆ ನಡೆಸಲು ಇನ್ನೂ ಹೆಚ್ಚು ಕಾಲಾವಕಾಶ ನೀಡಬೇಕೆಂದು ಕೋರಿದ ಹಿನ್ನೆಲೆಯಲ್ಲಿ ಅವಧಿ ವಿಸ್ತರಿಸಲಾಗಿದೆ ಎಂದರು.ಶೇ.೬೮.೫೯ ಸಮೀಕ್ಷೆ ಪೂರ್ಣ

ಕೋಲಾರ ಜಿಲ್ಲೆಯಲ್ಲಿ ಒಟ್ಟು ೩೦೪೭೩೮ ಕುಟುಂಬಗಳ ಸಮೀಕ್ಷೆ ದಾಖಲಿಸಲಾಗಿದ್ದು, ಇದರಲ್ಲಿ ಪರಿಶಿಷ್ಠ ಜಾತಿಯ ಕುಟುಂಬಗಳು ೮೩೩೭೧ ಮತ್ತು ಇತರೆ ಕುಟುಂಬಗಳ ೨೨೧೩೬೭ ಸಮೀಕ್ಷೆಯಾಗಿದ್ದು, ಒಟ್ಟಾರೆ ಶೇ೬೮.೫೯ರ ಸಮೀಕ್ಷೆ ಪೂರ್ಣಗೊಳಿಸಲಾಗಿದೆ. ಬಾಕಿ ಉಳಿದ ೧೩೯೫೩೨ ಕುಟುಂಬಗಳನ್ನು ೨೫.೦೫.೨೦೨೫ ಒಳಗೆ ಮನೆಮನೆ ಭೇಟಿ ಮಾಡಿ ಸಮೀಕ್ಷೆ ಪೂರ್ಣಗೊಳಿಸಲಾಗುವುದು ಎಂದು ಅ‍ವರು ಹೇಳಿದರು.

ಈ ಹಿಂದೆ ನಿಗದಿಪಡಿಸಲಾದ ವಿಶೇಷ ಶಿಬಿರದ ಅವಧಿಯನ್ನು ಸಹ ವಿಸ್ತರಿಸಿ ಮೇ ತಿಂಗಳ ೨೬ ರಿಂದ ೨೮ ರ ವರೆಗೂ ಮರು ನಿಗದಿ ಪಡಿಸಲಾಗಿದೆ. ಅಂತೆಯೆ ಆನ್‌ಲೈನ್ ಮೂಲಕ ಸ್ವಯಂ ಘೋಷಣೆ ಮಾಡುವ ಅವಧಿಯನ್ನು ಮೇ ತಿಂಗಳ ೧೯ ರಿಂದ ೨೮ರ ವರೆಗೆ ವಿಸ್ತರಿಸಲಾಗಿದೆ. ಸಮೀಕ್ಷಾ ಕಾರ್ಯಾಕ್ಕಾಗಿ ಜಿಲ್ಲೆಯಲ್ಲಿ ೧೬೯೯ ಗಣತಿದಾರರನ್ನು ಮತಗಟ್ಟೆವಾರು ನಿಯೋಜಿಸಲಾಗಿದೆ ಎಂದು ವಿವರಿಸಿದರು.

ನಿಖರ ಮಾಹಿತಿ ನೀಡಿ

ಈ ಸಮೀಕ್ಷೆಗೆ ಪರಿಶಿಷ್ಟ ಸಮುದಾಯದ ಮುಖಂಡರು, ಪ್ರಜಾಪ್ರತಿನಿಧಿಗಳು ಗಣತಿದಾರರಿಗೆ ನಿಖರವಾದ ಮಾಹಿತಿ ಒದಗಿಸಿ ಸಮೀಕ್ಷೆಗೆ ಸಹಕರಿಸುವಂತೆ ಮನವಿ ಮಾಡಿದರು.