ಕನ್ನಡಪ್ರಭ ವಾರ್ತೆ ಮಡಿಕೇರಿ

ಒಲಂಪಿಯಡ್ ಪರೀಕ್ಷೆಯಲ್ಲಿ ಪ್ರಥಮ, ದ್ವಿತೀಯ, ತೃತೀಯ ರ್‍ಯಾಂಕ್ ಬಂದ ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್ ವಿತರಣಾ ಕಾರ್ಯಕ್ರಮ ಮಡಿಕೇರಿಯಲ್ಲಿ ನಡೆಯಿತು.ಮಡಿಕೇರಿಯಲ್ಲಿರುವ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಯೋಜನಾ ಕಚೇರಿಯಲ್ಲಿ ನಡೆದ ಕಾರ್ಯಕ್ರಮವನ್ನು ಜಿಲ್ಲಾ ನಿರ್ದೇಶಕರು ಹಾಗೂ ಸಿಎಸ್‌ಸಿ ಯೋಜನಾಧಿಕಾರಿಗಳು ಉದ್ಘಾಟಿಸಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಸಿ,ಎಸ್,ಸಿ ಕೇಂದ್ರದ ಮೂಲಕ ಸರ್ಕಾರಿ ಸೇವೆಯನ್ನು ಜನರಿಗೆ ತಲುಪಿಸುವ ಕೆಲಸ ಮಾಡುತ್ತಿದೆ ಎಂದು ಪ್ರಮುಖರು ಮಾಹಿತಿ ನೀಡಿದರು.

ಭಾರತ ಸರ್ಕಾರದ ಐಟಿ ಸಚಿವಾಲಯದಿಂದ ಸಿ,ಎಸ್,ಸಿ ಈ ಗವರ್ನೆನ್ಸ್ ಮೂಲಕ ನಡೆಸಲ್ಪಡುವ ಸ್ಪರ್ಧಾತ್ಮಕ ಪರೀಕ್ಷೆಯಾದ ಒಲಂಪಿಯಾಡ್ ಪರೀಕ್ಷೆಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿಸಿ ಟ್ರಸ್ಟ್ ಮಡಿಕೇರಿಯ ಸಿ,ಎಸ್‌,ಸಿ ಕೇಂದ್ರಗಳಲ್ಲಿ ಒಲಂಪಿಯಾಡ್ ನೊಂದಾವಣೆ ಮಾಡಿ ಪರೀಕ್ಷೆ ಬರೆದಿರುವ ವಿದ್ಯಾರ್ಥಿಗಳಿಗೆ ಇದೇ ವೇಳೆ ಸರ್ಟಿಫಿಕೇಟ್ ವಿತರಣೆಯನ್ನು ಮಾಡಲಾಯಿತು.

ಒಲಂಪಿಯಾಡ್ ಪರೀಕ್ಷೆಯ ಜನರಲ್ ನಾಲೇಜ್‌ ವಿಷಯದಲ್ಲಿ ರಾಷ್ಟ್ರಮಟ್ಟದಲ್ಲಿ ದ್ವಿತೀಯ ರ್‍ಯಾಂಕ್ ಪಡೆಯುವ ಮೂಲಕ 20 ಸಾವಿರ ಮೊತ್ತದ ಸ್ಕಾಲರ್ಶಿಪ್ ಗೆ ಅರ್ಹರಾದ ಸುಂಟಿಕೊಪ್ಪ ವಲಯದ ಕಾನ್ಬೈಲ್ ಕಾರ್ಯಕ್ಷೇತ್ರಕ್ಕೆ ಸೇರಿದ ವಿದ್ಯಾರ್ಥಿ ಕೃತಿಕ್ ಅವರನ್ನು ಗೌರವಿಸಲಾಯಿತು.


ಈ ಸಂದರ್ಭ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕರಾದ ವಿಠಲ್ ಶಾಲಿಯನ್ ಹಾಗೂ ಉಡುಪಿ ಪ್ರಾದೇಶಿಕ ಕಚೇರಿಯ ಸಿ,ಎಸ್‌,ಸಿ ಯೋಜನಾಧಿಕಾರಿಗಳಾದ ದಿಲೀಪ್ ಕುಮಾರ್ ಜೈನ್, ಎಂಐಎಸ್‌ ಯೋಜನಾಧಿಕಾರಿಗಳಾದ ಪ್ರವೀಣ್, ಮಡಿಕೇರಿ ತಾಲೂಕಿನ ಯೋಜನಾಧಿಕಾರಿಗಳಾದ ಪುರುಷೋತ್ತಮ್, ಹಣಕಾಸು ಪ್ರಬಂಧಕರಾದ ದೀಪ್ತಿ, ನಗದು ಮೇಲ್ವಿಚಾರಕರಾದ ದಾಕ್ಷಾಯಣಿ, ತಾಲೂಕು ನೋಡಲ್ ಅಧಿಕಾರಿ ದರ್ಶನ್ ಹಾಗೂ ಮಡಿಕೇರಿ ತಾಲೂಕಿನ ಎಲ್ಲಾ ಸಿಎಸ್,ಸಿ ಸೇವದಾರರು ಮತ್ತಿತರರು ಉಪಸ್ಥಿತರಿದ್ದರು.