ಮುದರಂಗಡಿ ಸಂತ ಪ್ರಾನ್ಸಿಸ್ ದೇವಾಲಯದ ವಾರ್ಷಿಕೋತ್ಸವ ಶುಭಾವಸರದಲ್ಲಿ ಕಂಪ್ಯಾಶನೇಟ್ ಫ್ರೆಂಡ್ಸ್ ಎಸೋಸಿಯೇಶನ್ ಮುದರಂಗಡಿ ವತಿಯಿಂದ ಸಾರ್ವಜನಿಕ ಆಟದ ಮೈದಾನದಲ್ಲಿ ಜರುಗಿದ ೯ನೇ ವರ್ಷದ ಸಹಾಯಧನ ವಿತರಣಾ ಕಾರ್ಯಕ್ರಮ
ಕಾಪು: ಯಾವುದೇ ಜಾತಿ, ಮತ., ಪಂಥಗಳ ಭೇದವಿಲ್ಲದೆ ಸಂಕಷ್ಟಕ್ಕೊಳಗಾದ ಅಸಾಹಾಯಕರಿಗೆ ಸಹಾಯ ಮಾಡಿ ಸಾಂತ್ವನ ನೀಡುವ ಕಾರ್ಯವೇ ದೇವರ ಸೇವೆ. ಮನುಷ್ಯರಾಗಿ ಹುಟ್ಟಿದ ಮೇಲೆ ದೇಶ ಸೇವೆ, ಜನ ಸೇವೆ, ಕಲಾ ಸೇವೆ ಮೂಲಕ ಜನರಿಗೆ ಹತ್ತಿರವಾಗುತ್ತೇವೆಯೋ ಆಗ ದೇವರಿಗೂ ಹತ್ತಿರವಾಗುತ್ತೇವೆ. ಕಷ್ಟದಲ್ಲಿರುವವರ ಸಂಕಷ್ಟಕ್ಕೆ ತಕ್ಷಣ ಸಹಾಯ ಮಾಡುವುದೇ ಈಶ ಸೇವೆ ಎಂದು ಮೂಡುಬಿದಿರೆ ಸಂಪಿಗೆ ನಗರದ ಹೋಲಿ ಸ್ವಿರಿಟ್ ಧರ್ಮ ಕೇಂದ್ರದ ಪ್ರಧಾನ ಧರ್ಮಗುರು ರೆ.ಫಾ. ವಿನ್ಸೆಂಟ್ ಡಿಸೋಜ ನುಡಿದರು.
ಅವರು ಮುದರಂಗಡಿ ಸಂತ ಪ್ರಾನ್ಸಿಸ್ ದೇವಾಲಯದ ವಾರ್ಷಿಕೋತ್ಸವ ಶುಭಾವಸರದಲ್ಲಿ ಕಂಪ್ಯಾಶನೇಟ್ ಫ್ರೆಂಡ್ಸ್ ಎಸೋಸಿಯೇಶನ್ ಮುದರಂಗಡಿ ವತಿಯಿಂದ ಸಾರ್ವಜನಿಕ ಆಟದ ಮೈದಾನದಲ್ಲಿ ಜರುಗಿದ ೯ನೇ ವರ್ಷದ ಸಹಾಯಧನ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು. ಮುಖ್ಯ ಅತೀಥಿಗಳಾಗಿ ಕಾಪು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಬಿ. ಪುಂಡಲೀಕ ಮರಾಠೆ ಶುಭ ಹಾರೈಸಿದರು. ಸಂಸ್ಥೆಯ ಗೌರವಾಧ್ಯಕ್ಷರೂ ಹಾಗೂ ಕರ್ನಾಟಕ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಮಾತನಾಡಿ ಸಮಾಜದಿಂದ ಪಡೆದುದನ್ನು ಸಮಾಜಕ್ಕೆ ಕೊಡುವ ಒಳ್ಳೆಯ ಕಾರ್ಯಕ್ಕೆ ಸಮಾಜದ ಸ್ಪಂದನವೂ ಸಿಗುತ್ತದೆ. ನಮ್ಮ ಭಾಷೆ, ಸಂಸ್ಕೃತಿ, ಪರಂಪರೆ ಜಗತ್ತಿಗೆ ಮಾದರಿಯಾಗಿದೆ, ಇಂತಹ ಕಾರ್ಯ ಬೆಳೆಯಬೇಕು, ಬೆಳೆಸಬೇಕು ಎಂದರು. ಮುದರಂಗಡಿ ಗ್ರಾ.ಪಂ.ಉಪಾಧ್ಯಕ್ಷ ಶರತ್ ಶೆಟ್ಟಿ, ಉಡುಪಿ ಶೋಕಮಾತಾ ಚರ್ಚ್ ಪಾಲನಾ ಮಂಡಳಿ ಉಪಾಧ್ಯಕ್ಷ ರೋಬರ್ಟ್ ಮ್ಯಾಕ್ಸಿಮ್ ಡಿಸೋಜ, ಪಿಲಾರು ಉದ್ಯಮಿ ವಿಶ್ವನಾಥ್ ಶೆಟ್ಟಿ, ಉದ್ಯಮಿ ಕುತ್ಯಾರು ಸಾಯಿನಾಥ್ ಶೆಟ್ಟಿ, ಫೆಲಿಕ್ಸ್ ಡಿಸೋಜ, ಸ್ಟೀವನ್ ಕೊಲಾಸೋ ಉದ್ಯಾವರ ಭಾಗವಹಿಸಿದ್ದರು.ಸಮಾರಂಭದ ಅಧ್ಯಕ್ಷತೆ ವಹಿಸಿದ ಸಂಸ್ಥೆಯ ಉಪಾಧ್ಯಕ್ಷ ಮೈಕಲ್ ರಮೇಶ್ ಡಿಸೋಜ ಪ್ರಾಸ್ತಾವಿಕ ಮಾತುಗಳೊಮದಿಗೆ ಸ್ವಾಗತಿಸಿದರು.
ಶಿಕ್ಷಕ ಸುಧಾಕರ ಶೆಣೈ ನಿರೂಪಿಸಿ ಧನ್ಯವಾದವಿತ್ತರು. ಅನಿತಾ, ಗ್ರೆಟ್ಟಾ ಪ್ರಾರ್ಥಿಸಿದರು. ನಂತರ ಮಂಗಳೂರು ಲಕುಮಿ ತಂಡದವರಿಂದ "ಆಂಟಿ ಬೊಕ್ಕ ಅಂಕಲ್ " ತುಳು ನಾಟಕ ನಡೆಯಿತು.