ದಾನಿಗಳಿಂದ ನೀಡುವ ಸೌಲಭ್ಯಗಳನ್ನು, ಸಮಯಕ್ಕೆ ಸರಿಯಾಗಿ ಬಳಸಿಕೊಂಡು ತಮ್ಮ ವಿದ್ಯಾರ್ಥಿ ಜೀವನವನ್ನು ಉತ್ತಮವಾಗಿ ಬೆಳೆಸಿಕೊಳ್ಳ
ಕನ್ನಡಪ್ರಭ ವಾರ್ತೆ ಸುತ್ತೂರುಡಾ. ಯತೀಂದ್ರ ಸಿದ್ದರಾಮಯ್ಯ ಅವರು ಅಭಿವೃದ್ಧಿ ಸಚಿವರಾಗಿ ಅಧಿಕಾರ ಪ್ರಮಾಣ ವಚನ ಸ್ವೀಕರಿಸಿದ ಹಿನ್ನೆಲೆ ಚಿನ್ನಂಬಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಲ್ಲ ಮಕ್ಕಳಿಗೂ ಡಾ. ಯತಿಂದ್ರ ಸಿದ್ದರಾಮಯ್ಯ ಅಭಿಮಾನಿ ಬಳಗದ ವತಿಯಿಂದ ಸ್ಕೂಲ್ ಬ್ಯಾಗ್ ಗಳನ್ನು ಮೃಗಾಲಯ ಅಧ್ಯಕ್ಷ ಹಾಡ್ಯ ರಂಗಸ್ವಾಮಿ ವಿತರಿಸಿದರು. ನಂತರ ಅವರು ಮಾತನಾಡಿ, ವಿದ್ಯಾರ್ಥಿಗಳಿಗೆ ಬ್ಯಾಗ್ ವಿತರಿಸಿ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಜೀವನವನ್ನು ಉತ್ತಮವಾಗಿ ನಿರ್ವಹಿಸಿಕೊಳ್ಳಲು ಸರ್ಕಾರದಿಂದ ಬರುವ ಸೌಲಭ್ಯಗಳು ಹಾಗೂ ದಾನಿಗಳಿಂದ ನೀಡುವ ಸೌಲಭ್ಯಗಳನ್ನು, ಸಮಯಕ್ಕೆ ಸರಿಯಾಗಿ ಬಳಸಿಕೊಂಡು ತಮ್ಮ ವಿದ್ಯಾರ್ಥಿ ಜೀವನವನ್ನು ಉತ್ತಮವಾಗಿ ಬೆಳೆಸಿಕೊಳ್ಳಲು. ಶಾಲೆಯಲ್ಲಿ ಸಿಗುವ ಸೌಲಭ್ಯಗಳು ಅಲ್ಲದೆ ಗುರುಗಳು ಕಲಿಸಿದ ಪಾಠವನ್ನು ತಿಳಿದುಕೊಂಡು. ತಮ್ಮ ತಂದೆ-ತಾಯಿಗಳ ಪಾಲನೆಗಳನ್ನು ಪಾಲಿಸಿಕೊಂಡು ಉತ್ತಮ ವಿದ್ಯಾರ್ಥಿಯನ್ನಾಗಿ ಹಾಗೂ ಕಲಿತ ಶಾಲೆಗೆ ಉತ್ತಮ ಶಾಲೆ ಎನಿಸಿಕೊಳ್ಳಲು ವಿದ್ಯಾರ್ಥಿಗಳ ಪಾತ್ರ ಮುಖ್ಯವಾಗಿದೆ, ವಿದ್ಯಾರ್ಥಿಗಳು ತಪ್ಪದೆ ಶಾಲೆಗೆ ಬರಬೇಕು ಎಂದು ಸಲಹೆ ತಿಳಿಸಿದರು.ಬಳಗದ ಗೌರವಾಧ್ಯಕ್ಷ ಸಿ.ಆರ್. ಮಹದೇವ್, ಅಧ್ಯಕ್ಷ ಕುಮಾರ್, ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಶಿವಕುಮಾರ್, ಗ್ರಾಪಂ ಉಪಾಧ್ಯಕ್ಷ ಕಾವ್ಯ ಶೇಷಾದ್ರಿ, ಜಗದೀಶ್. ಸೋಮಸುಂದರ್, ಕುಮಾರ್, ಮಹೇಶ್, ಶಾಲೆ ಮುಖ್ಯ ಶಿಕ್ಷಕ ವೈ.ಎನ್. ಮಹೇಶ್, ಪೋಷಕರು, ಶಿಕ್ಷಕ ವೃಂದ ಇದ್ದರು.