ಶಾಲಾ ಬಸ್ ಡಿಕ್ಕಿ: 5 ವರ್ಷದ ಬಾಲಕ ಸಾವು

| Published : Aug 07 2024, 01:01 AM IST

ಸಾರಾಂಶ

ಆಲಮಟ್ಟಿ: ಸರ್ಕಾರಿ ಅಂಗನವಾಡಿಗೆ ಹೊರಟಿದ್ದ ಬಾಲಕನಿಗೆ ಖಾಸಗಿ ಶಾಲಾ ಬಸ್ ಡಿಕ್ಕಿ ಹೊಡೆದು ಐದು ವರ್ಷದ ಬಾಲಕ ಸಾವನ್ನಪ್ಪಿದ ಘಟನೆ ನಿಡಗುಂದಿ ತಾಲೂಕಿನ ಅರಳದಿನ್ನಿ ಗ್ರಾಮದಲ್ಲಿ ಮಂಗಳವಾರ ಜರುಗಿದೆ. ಅರಳದಿನ್ನಿ ಗ್ರಾಮದ ಬಸವರಾಜ ಮಂಜುನಾಥ ಚೋಪಡೆ (5) ಮೃತ ಬಾಲಕ. ಅಂಗನವಾಡಿಯಲ್ಲಿ ಕಲಿಯುತ್ತಿದ್ದ ಬಾಲಕ ಎಂದಿನಂತೆ ಶಾಲೆಗೆ ಮಂಗಳವಾರ ಬೆಳಗ್ಗೆ ಹೊರಟಿದ್ದ.

ಆಲಮಟ್ಟಿ: ಸರ್ಕಾರಿ ಅಂಗನವಾಡಿಗೆ ಹೊರಟಿದ್ದ ಬಾಲಕನಿಗೆ ಖಾಸಗಿ ಶಾಲಾ ಬಸ್ ಡಿಕ್ಕಿ ಹೊಡೆದು ಐದು ವರ್ಷದ ಬಾಲಕ ಸಾವನ್ನಪ್ಪಿದ ಘಟನೆ ನಿಡಗುಂದಿ ತಾಲೂಕಿನ ಅರಳದಿನ್ನಿ ಗ್ರಾಮದಲ್ಲಿ ಮಂಗಳವಾರ ಜರುಗಿದೆ. ಅರಳದಿನ್ನಿ ಗ್ರಾಮದ ಬಸವರಾಜ ಮಂಜುನಾಥ ಚೋಪಡೆ (5) ಮೃತ ಬಾಲಕ. ಅಂಗನವಾಡಿಯಲ್ಲಿ ಕಲಿಯುತ್ತಿದ್ದ ಬಾಲಕ ಎಂದಿನಂತೆ ಶಾಲೆಗೆ ಮಂಗಳವಾರ ಬೆಳಗ್ಗೆ ಹೊರಟಿದ್ದ. ಆದರೆ, ಅದೇ ಸಮಯಕ್ಕೆ ಗ್ರಾಮಕ್ಕೆ ಬಂದ ನಿಡಗುಂದಿ ಪಟ್ಟಣದ ಖಾಸಗಿ ಸಂಸ್ಥೆಯ ಶಾಲಾಬಸ್ ಆ ಮಗುವಿಗೆ ಡಿಕ್ಕಿ ಹೊಡೆದಿದೆ. ನೆಲಕ್ಕುರುಳಿದ ಬಾಲಕನ ತಲೆ ಮೇಲೆ ಗಾಲಿ ಹಾಯ್ದು ಸ್ಥಳದಲ್ಲಿಯೇ ಮೃತಪಟ್ಟಿದೆ. ಮಗು ಸಾವಿನಿಂದ ಆಕ್ರೋಶಗೊಂಡ ಗ್ರಾಮಸ್ಥರು ಬಸ್ ಎದುರು ಮಗುವಿನ ಶವವಿಟ್ಟು ಪ್ರತಿಭಟಿಸಿದರು. ನಿಡಗುಂದಿ ಪೊಲೀಸರು ಸ್ಥಳಕ್ಕೆ ಬಂದು ಪ್ರತಿಭಟನಾಕಾರರನ್ನು ಸಮಾಧಾನಪಡಿಸಿದರು. ಸಂಬಂಧಿಗಳ ಆಕ್ರಂದನ ಮುಗಿಲುಮುಟ್ಟಿತ್ತು. ತಾಯಿಯ ರೋಧನ ಹೇಳತೀರದಾಗಿತ್ತು.ಕೋಟ್‌...

ನಿಡಗುಂದಿ ಭಾಗದಲ್ಲಿ 50ಕ್ಕೂ ಹೆಚ್ಚು ಖಾಸಗಿ ಶಾಲೆಗಳಿದ್ದು, ಹಲವಾರು ಶಾಲಾ ಬಸ್‌ಗಳಿವೆ. ಆಯಾ ಶಾಲಾ ವಾಹನಗಳ ಚಾಲಕರ ಪೊಲೀಸ್ ತಪಾಸಣೆ, ವಾಹನ ಚಾಲನಾ ಲೈಸನ್ಸ್ ನಿಡಗುಂದಿ ಪೊಲೀಸರು ಕಾಲ ಕಾಲಕ್ಕೆ ತಪಾಸಣೆ ನಡೆಸುತ್ತಿಲ್ಲ. ಚಾಲಕರಿಗೆ, ಶಾಲಾ ಮುಖ್ಯಸ್ಥರ ಸಭೆ ನಡೆಸಿ ಅವರಿಗೆ ಸುರಕ್ಷತೆ, ಮಕ್ಕಳ ಹಕ್ಕುಗಳ ಬಗ್ಗೆ ಯಾವುದೇ ತಿಳುವಳಿಕೆ ಸಭೆ ನಡೆಸುವುದಿಲ್ಲ. ಪ್ರತಿ ಶಾಲಾ ವಾಹನ ಯಾವಾಗಲಾದರೊಮ್ಮೆ ನಿಲ್ಲಿಸಿ ತಪಾಸಣೆ ನಡೆಸಿ ಮಕ್ಕಳ ಸುರಕ್ಷತೆಯ ಬಗ್ಗೆ ಪರಿಶೀಲನೆ ನಡೆಸುವುದಿಲ್ಲ, ಶಾಲಾ ಸುರಕ್ಷತೆ ಪಾಲಿಸದ ಶಾಲಾ ವಾಹನಗಳನ್ನು ಜಪ್ತಿ ಮಾಡಬೇಕು.

ಬಸವರಾಜ ಹೆರಕಲ್, ಅರಳದಿನ್ನಿ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷರು.