ಹಳಿಯಾಳದಲ್ಲಿ ಖಾಕಿಗೆ ರಾಖಿ ಕಟ್ಟಿದ ಶಾಲಾ ಮಕ್ಕಳು

| Published : Aug 12 2025, 12:30 AM IST

ಸಾರಾಂಶ

ಇಲಾಖೆಯಿಂದ ಕಾನೂನು ಸುವ್ಯವಸ್ಥೆಗೆ ಕೈಗೊಳ್ಳಲಾಗುವ ಕ್ರಮಗಳು, ಮಕ್ಕಳು ಪಾಲಿಸಬೇಕಾದ ಸುರಕ್ಷತಾ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.

ಹಳಿಯಾಳ: ಪಟ್ಟಣದ ಪೊಲೀಸ್‌ ಠಾಣೆಯಲ್ಲಿ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗೆ ರಾಖಿ ಕಟ್ಟುವ ಮೂಲಕ ವಿ.ಆರ್.ಡಿ.ಎಂ ಟ್ರಸ್ಟ್‌ನ ವಿಮಲ ದೇಶಪಾಂಡೆ ಸ್ಕೂಲ್ ಆಫ್‌ ಎಕ್ಸಲೆನ್ಸ್ ಶಾಲೆಯ ಮಕ್ಕಳು ರಕ್ಷಾ ಬಂಧನವನ್ನು ಅರ್ಥಪೂರ್ಣವಾಗಿ ಆಚರಿಸಿದರು.ದೇಶದ 79ನೇ ಸ್ವಾತಂತ್ರ್ಯೋತ್ಸವ ಅಂಗವಾಗಿ ಹರಘರ್ ತಿರಂಗಾ ಎಂಬ ಕೇಂದ್ರ ಸರ್ಕಾರದ ಯೋಜನೆಯಡಿ ಸೋಮವಾರ ವಿಮಲ ದೇಶಪಾಂಡೆ ಶಾಲೆಯವರು ಈ ರಕ್ಷಾಬಂಧನ ಕಾರ್ಯಕ್ರಮವನ್ನು ಆಯೋಜಿಸಿದ್ದರು.

ಠಾಣೆಯಲ್ಲಿದ್ದ 60ಕ್ಕೂ ಹೆಚ್ಚು ಪೊಲೀಸ್‌ ಸಿಬ್ಬಂದಿಗೆ ಮಕ್ಕಳು ತಿರಂಗಾ ರಾಖಿ ಕಟ್ಟಿ ಸಂಭ್ರಮಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಪಿಎಸೈ ಬಸವರಾಜ ಮಬನೂರ, ಪೋಲಿಸ್ ಠಾಣೆಯ ಮಾಹಿತಿ, ಇಲಾಖೆಯಿಂದ ಕಾನೂನು ಸುವ್ಯವಸ್ಥೆಗೆ ಕೈಗೊಳ್ಳಲಾಗುವ ಕ್ರಮಗಳು, ಮಕ್ಕಳು ಪಾಲಿಸಬೇಕಾದ ಸುರಕ್ಷತಾ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.

ನಂತರ ಮಕ್ಕಳೊಂದಿಗೆ ಪೊಲೀಸ್ ಆಧಿಕಾರಿಗಳು ಸಂವಾದ ನಡೆಸಿದರು. ಸಂವಾದದಲ್ಲಿ ಪಾಲ್ಗೊಂಡ ಮಕ್ಕಳು ಪೊಲೀಸ್‌ ಅಧಿಕಾರಿಯಾಗಲು ಪಡೆಯಬೇಕಾದ ಶಿಕ್ಷಣ ತರಬೇತಿ ಇತ್ಯಾದಿ ಬಗ್ಗೆ ಚರ್ಚಿಸಿದರು.