ಶಾಲಾರಂಭೋತ್ಸವ : ವಿದ್ಯಾರ್ಥಿಗಳಿಗೆ ಹೂಮಳೆ ಸ್ವಾಗತ

| Published : Jun 01 2024, 12:46 AM IST

ಸಾರಾಂಶ

ಹುಣಸಗಿ ಪಟ್ಟಣದ ಯುಕೆಪಿ ಕ್ಯಾಂಪಿನಲ್ಲಿ ನಡೆದ ಸರಕಾರಿ ಮಾದರಿಯ ಪ್ರಾಥಮಿಕ ಶಾಲಾ ಪ್ರಾರಂಭೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಿಸಲಾಯಿತು.

ಶಾಲೆಗಳಿಗೆ ತಳಿರು-ತೋರಣಗಳಿಂದ ಶೃಂಗಾರ । ಅಂಗಳದಲ್ಲಿ ರಂಗೋಲಿ ಬಿಡಿಸಿ ಹಬ್ಬದ ವಾತಾವರಣ ಕನ್ನಡಪ್ರಭ ವಾರ್ತೆ, ಹುಣಸಗಿ

ಪ್ರಸ್ತುತ ಶೈಕ್ಷಣಿಕ ವರ್ಷದ ಶಾಲಾ ತರಗತಿಗಳು ಶುಕ್ರವಾರದಿಂದ ಆರಂಭವಾಗಿದ್ದು, ಬೇಸಿಗೆ ರಜೆ ಮುಗಿಸಿ ಶಾಲೆಗೆ ಆಗಮಿಸಿದ ವಿದ್ಯಾರ್ಥಿಗಳನ್ನು ಪಟ್ಟಣದ ಯುಕೆಪಿ ಕ್ಯಾಂಪಿನ ಸರಕಾರಿ ಮಾದರಿಯ ಪ್ರಾಥಮಿಕ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ವಿಧ್ಯಾರ್ಥಿಗಳಿಗೆ ಶಿಕ್ಷಕರು ಹೂವಿನ ಮಳೆ ಸುರಿಸುವುದರ ಮೂಲಕ ಸ್ವಾಗತಿಸಿದರು.

ಬಿರು ಬಿಸಿಲಿನ ಬೇಸಿಗೆ ರಜೆ ಮಜಾ ಅನುಭವಿಸಿದ್ದ ಮಕ್ಕಳು ಮತ್ತೆ ಶಾಲೆಯತ್ತ ಮರಳುತ್ತಿದ್ದಾರೆ. ಅವರಿಗಾಗಿ ಶಾಲೆಗಳನ್ನು ತಳಿರು-ತೋರಣಗಳಿಂದ ಶೃಂಗರಿಸಲಾಗಿದೆ. ಅಂಗಳದಲ್ಲಿ ರಂಗೋಲಿ ಬಿಡಿಸಿ ಹಬ್ಬದ ವಾತಾವರಣ ನಿರ್ಮಿಸಿ ಅವರನ್ನು ಸ್ವಾಗತಿಸಲಾಯಿತು.

ಈ ವೇಳೆ ಮುಖ್ಯಗುರು ಬಸನಗೌಡ ಚೌದ್ರಿ ಮಾತನಾಡಿ, "ಕಲಿಕಾ ಬಲವರ್ಧನೆ ವರ್ಷ " ಎಂಬ ಘೋಷ ವಾಕ್ಯದೊಂದಿಗೆ ಮಕ್ಕಳನ್ನು ಶಾಲೆಗೆ ಸ್ವಾಗತಿಸಲಾಗಿದ್ದು, ಮಕ್ಕಳು ಕೂಡ ಅತೀ ಹುಮ್ಮಸ್ಸಿನಿಂದ ಶಾಲೆಗೆ ಆಗಮಿಸಿದ್ದಾರೆ.

ಮಕ್ಕಳು ದೇಶದ ಭವಿಷ್ಯ, ಅವರ ಶೈಕ್ಷಣಿಕ ಪ್ರಗತಿ ಹಾಗೂ ವ್ಯಕ್ತಿತ್ವ ವಿಕಾಸನಕ್ಕಾಗಿ ಸರಕಾರ ಹಲವು ಸಂಕಲ್ಪ ಕೈಗೊಂಡಿವೆ. ಪೋಷಕರು ಹಾಗೂ ವಿದ್ಯಾರ್ಥಿಗಳ ಆಶಾದಾಯಕ ಸಹಕಾರದಿಂದ ಮೊದಲ ದಿನವೇ ನಿರೀಕ್ಷೆ ಮೀರಿ ಮಕ್ಕಳ ಹಾಜರಾತಿ ಖುಷಿ ನೀಡಿದೆ ಎಂದರು.

ಚನ್ನಪ್ಪ ಬಡಿಗೇರ ಮುಖ್ಯ ಅತಿಥಿಯಾಗಿ ಭಾಗವಸಿದ್ದರು. ಮಕ್ಕಳಿಗೆ ಪಠ್ಯ ಪುಸ್ತಕ ಮತ್ತು ಸಮವಸ್ತ್ರಗಳನ್ನು ಅತಿಥಿ ಮಹೋದ್ಯಯರು ಶಾಲೆಯ ಶಿಕ್ಷಕರು ಮತ್ತು ಪಾಲಕರು ವಿತರಿಸಿದರು.

ಈ ವೇಳೆ ಶಾಲೆಯ ಸಿಬ್ಬಂದಿಗಳಾದ ಶಾರದಾ ಬಾಯಿ, ಸಖೂಬಾಯಿ, ವಾಣಿಶ್ರೀ, ಗೀತಾ . ನಿಂಗಮ್ಮ, ಕವಿತಾ, ಲಕ್ಷ್ಮೀ, ಕಾಳಮ್ಮ್ರ, ರಮೆಶ, ಮಲ್ಲಣ್ಣ, ರಮೇಶ ಪಾಟೀಲ್ ಇತರರಿದ್ದರು.