ಕೆ. ಅಮರನಾಥ ಶೆಟ್ಟಿ ಸ್ಮಾರಕ ಆವರಣದ ರೋಟರಿ ಪದವಿಪೂರ್ವ ಕಾಲೇಜಿನ ಅಮರಾವತಿ ಆಡಿಟೋರಿಯಂನಲ್ಲಿ ಜರುಗಿದ ರೋಟರಿ ವಿದ್ಯಾ ಸಂಸ್ಥೆಗಳ ವಾರ್ಷಿಕೋತ್ಸವ ಸಮಾರಂಭ
ಕನ್ನಡಪ್ರಭ ವಾರ್ತೆ ಮೂಡುಬಿದಿರೆ
ನಮ್ಮ ಹೃದಯದ ಹಾಡು ಭಾಷೆಗೆ ಮಧುರವಾದ ಹಿನ್ನೆಲೆಗಳಿವೆ. ಶಾಲಾ ದಿನಗಳು ನೆನಪಿನ ಬುತ್ತಿ ಕಟ್ಟಿ ಕೊಡುತ್ತವೆ. ಇಂದು ಮಕ್ಕಳಲ್ಲಿ ಜ್ಞಾನ ವಿಕಾಸವಾಗುತ್ತಿದೆ. ಆದರೆ ಹೃದಯ ಶ್ರೀಮಂತಿಕೆ ಕಡಿಮೆಯಾಗುತ್ತಿದೆ. ಇದನ್ನು ಪರಿಗಣಿಸಿ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡುವಲ್ಲಿ ಹೆತ್ತವರ ಜತೆ ಶಿಕ್ಷಣ ಸಂಸ್ಥೆಗಳೂ ಗಮನ ಹರಿಸಬೇಕು ಎಂದು ಮಂಗಳೂರು ವಿವಿ ಕಾಲೇಜಿನ ವಿಶ್ರಾಂತ ಪ್ರಾಂಶುಪಾಲ ಪ್ರೊ. ಉದಯ್ ಕುಮಾರ್ ಇರ್ವತ್ತೂರು ಹೇಳಿದ್ದಾರೆ.ಇಲ್ಲಿನ ಕೆ. ಅಮರನಾಥ ಶೆಟ್ಟಿ ಸ್ಮಾರಕ ಆವರಣದ ರೋಟರಿ ಪದವಿಪೂರ್ವ ಕಾಲೇಜಿನ ಅಮರಾವತಿ ಆಡಿಟೋರಿಯಂನಲ್ಲಿ ಜರುಗಿದ ರೋಟರಿ ವಿದ್ಯಾ ಸಂಸ್ಥೆಗಳ ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.ರೋಟರಿ ಎಜುಕೇಶನ್ ಸೊಸೈಟಿ ಅಧ್ಯಕ್ಷ ನಾರಾಯಣ ಪಿ.ಎಂ. ಅಧ್ಯಕ್ಷತೆ ವಹಿಸಿ ಮಾತನಾಡಿ, ಶಿಕ್ಷಣ ಜತೆಗೆ ಕ್ರೀಡೆ, ಸಾಂಸ್ಕೃತಿಕ ರಂಗದಲ್ಲಿಯೂ ರೋಟರಿ ಶಿಕ್ಷಣ ಸಂಸ್ಥೆಗಳ ಬೆಳವಣಿಗೆ ಗಮನಾರ್ಹವಾಗಿದೆ ಎಂದು ಹೇಳಿದರು.
ಮೂಡುಬಿದಿರೆ ರೋಟರಿ ಅಧ್ಯಕ್ಷ ನಾಗರಾಜ ಹೆಗ್ಡೆ ಮುಖ್ಯ ಅತಿಥಿಯಾಗಿ ಶುಭ ಹಾರೈಸಿದರು.ಕಾರ್ಯದರ್ಶಿ ಅನಂತ ಕೃಷ್ಣ ರಾವ್ ಸ್ವಾಗತಿಸಿದರು. ಮುಖ್ಯೋಪಾಧ್ಯಾಯಿನಿ ತಿಲಕಾ ಅನಂತ ವೀರ್ ಜೈನ್ ಶಾಲಾ ಶೈಕ್ಷಣಿಕ ವರದಿ ವಾಚಿಸಿದರು .ಶಾಲೆಯ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು, ಕಳೆದ ಸಾಲಿನ ಎಸ್ಸೆಸ್ಸೆಲ್ಸಿ ಸಾಧಕರನ್ನು , ಉತ್ತಮ ಎನ್ ಸಿಸಿ ಸಾಧಕರು, ಕ್ರೀಡಾ ಪ್ರತಿಭಾನ್ವಿತರನ್ನು ಗೌರವಿಸಲಾಯಿತು.
ಸಾಂಸ್ಕೃತಿಕ ವಿಭಾಗದ ಸಂಯೋಜಕ ಮೋಹನ್ ಹೊಸ್ಮಾರ್ ಅವರನ್ನು ಸನ್ಮಾನಿಸಲಾಯಿತು. ಶಿಕ್ಷಕಿ ನವೀನಾ ಸಾಧಕ ವಿದ್ಯಾರ್ಥಿಗಳ ವಿವರ ನೀಡಿದರು. ಕ್ಲಾಸ್ ಸಾಥಿ ತರಗತಿಯನ್ನು ಉತ್ತಮವಾಗಿ ನಡೆಸುತ್ತಿರುವ ರೇಖಾ ವೆಂಕಟೇಶ್, ಲೋನಾ, ಹಾಗೂ ಭಾರತಿ ಜಿ. ಅವರಿಗೆ ಕ್ಲಾಸ್ ಸಾಥಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಪಿಯು ಸಿಬಿಎಸ್ ಸಿ ಸಂಚಾಲಕ ಜೆ. ಡಬ್ಲೂ ಪಿಂಟೋ, ರೋಟರಿ ಪಿಯುಸಿ ಪ್ರಾಂಶುಪಾಲ ರವಿ ಕುಮಾರ್, ರೋಟರಿ ಸೆಂಟ್ರಲ್ ಶಾಲೆ ಮುಖ್ಯ ಶಿಕ್ಕಕಿ ಲಕ್ಷ್ಮಿ ಮರಾಠೆ, ಹಿರಿಯ ಸಂಯೋಜಕ ಗಜಾನನ ಮರಾಠೆ, ವಿವಿಧ ವಿಭಾಗಗಳ ಸಂಯೋಜಕರಾದ ಪ್ರಫುಲ್ಲಾ, ಡೀಲನ್ ಮಸ್ಕರೇನಸ್, ಗಾಯಿತ್ರಿ, ವಿದ್ಯಾರ್ಥಿ ನಾಯಕರಾದ ಪ್ರಶ್ನಾ, ಧನ್ವಿ ಶೆಟ್ಟಿ, ವಿಖ್ಯಾತ್ ಪಿ. ಶೆಟ್ಟಿ, ರೋಟರಿ ಸದಸ್ಯರು ಉಪಸ್ಥಿತರಿದ್ದರು. ರೋಟರಿ ಆಂಗ್ಲ ಮಾಧ್ಯಮ ಶಾಲಾ ಆಡಳಿತಾಧಿಕಾರಿ ಪ್ರಫುಲ್ ಡಿಸೋಜ ವಂದಿಸಿದರು. ಶಿಕ್ಷಕರಾದ ಪ್ರೇಮಲತಾ ಹಾಗೂ ವಿದೀಪ್ \ನಿರೂಪಿಸಿದರು.