ಸಾರಾಂಶ
ಕವಿತಾಳ ಪಟ್ಟಣ ಸೇರಿದಂತೆ ವಿವಿಧೆಡೆ ಶಾಲಾ ಪ್ರಾರಂಭೋತ್ಸವ ಹಿನ್ನೆಲೆ ಮಕ್ಕಳನ್ನು ಅದ್ಧೂರಿಯಾಗಿ ಸ್ವಾಗತಿಸಲಾಯಿತು.
ಕವಿತಾಳ: ಬೇಸಿಗೆ ದೀರ್ಘ ಅವಧಿ ರಜೆ ಕಳೆದ ನಂತರ ಪಟ್ಟಣ ಸೇರಿ ವಿವಿಧೆಡೆ ಶುಕ್ರವಾರ ಶಾಲೆಗಳು ಆರಂಭವಾಗಿದ್ದು ಮೊದಲ ದಿನ ಮಕ್ಕಳು ಉತ್ಸಾಹದಿಂದ ಶಾಲೆಗೆ ಆಗಮಿಸಿದ್ದರು.
ಇಲ್ಲಿನ ಕನ್ಯಾ ಶಾಲೆಯಲ್ಲಿ ಮಕ್ಕಳಿಗೆ ಹೂವುಗೂಚ್ಛ ನೀಡಿ ಸ್ವಾಗತಿಸಿದ ಶಿಕ್ಷಕರು ಸಮವಸ್ತ್ರ ಮತ್ತು ಪಠ್ಯ ಪುಸ್ತಕ ವಿತರಣೆ ಮಾಡಿದರು. ಇಲ್ಲಿನ ಬಾಲಕರ ಪ್ರಾಥಮಿಕ ಶಾಲೆ, ಬಾಲಕರ ಪ್ರೌಢಶಾಲೆ ಮತ್ತು ಬಾಲಕಿಯರ ಸರ್ಕಾರಿ ಪ್ರೌಢಶಾಲೆಯಲ್ಲಿ ಮಕ್ಕಳಿಗೆ ಹೂಗುಚ್ಚ ನೀಡಿ ಸ್ವಾಗತಿಸಿ ಸಮವಸ್ತ್ರ ಮತ್ತು ಪಠ್ಯ ಪುಸ್ತಕ ವಿತರಣೆ ಮಾಡಿದರು. ಮಧ್ಯಾಹ್ನ ಮಕ್ಕಳಿಗೆ ಸಿಹಿ ಊಟ ವ್ಯವಸ್ಥೆ ಮಾಡಲಾಗಿತ್ತು,ಸಮೀಪದ ವಟಗಲ್ ಸರ್ಕಾರಿ ಉನ್ನತೀಕರಿಸಿ ಪ್ರಾಥಮಿಕ ಶಾಲೆ, ಹಿರೇದಿನ್ನಿ ಸರ್ಕಾರಿ ಶಾಲೆ ಹಾಗೂ ಹಿರೇಬಾದರದಿನ್ನಿ ಶಾಲೆಗಳಲ್ಲಿ ಮಕ್ಕಳನ್ನು ಸ್ವಾಗತಿಸಿಲಾಯಿತು. ಮೊದಲ ದಿನ ಕಡಿಮೆ ಸಂಖ್ಯೆಯಲ್ಲಿ ಮಕ್ಕಳು ಬಂದಿದ್ದರೂ ಉತ್ಸಾಹದಿಂದ ಪಠ್ಯಪುಸ್ತಕ ಮತ್ತು ಸಮವಸ್ತ್ರ ಸ್ವೀಕರಿಸಿ ಭೋಜನ ಸವಿದರು. ಬಹುತೇಕ ಶಾಲೆಗಳಲ್ಲಿ ತೋರಣ ಕಟ್ಟಿ ಸಿಂಗರಿಸಲಾಗಿತ್ತು.