ಸಾರಾಂಶ
ಟೇಕಲ್ : ಟೇಕಲ್‌ನ ಆನೇಪುರ ಶಾಲಾ ಸಂಕೀರ್ಣದ ಕೊಂಡಶೆಟ್ಟಹಳ್ಳಿ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಬಡ್ತಿ ಮುಖ್ಯಶಿಕ್ಷಕಿ ಎಸ್.ವರಲಕ್ಷ್ಮೀರವರು ವಯೋನಿವೃತ್ತಿ ಹೊಂದಿದ ಹಿನ್ನೆಲೆಯಲ್ಲಿ ಅವರನ್ನು ಬುಧವಾರ ತಮ್ಮ ಶಾಲೆಯಲ್ಲಿ ಶಾಲಾ ಶಿಕ್ಷಕ ವೃಂದ, ಶಾಲಾಭಿವೃದ್ಧಿ ಸಮಿತಿ ಹಾಗೂ ಸರ್ಕಾರಿ ನೌಕರರ ಸಂಘದವರು ಪ್ರಾಥಮಿಕ ಶಾಲಾ ಶಿಕ್ಷಕರ ವೃಂದದವರು ಆತ್ಮೀಯವಾಗಿ ಸನ್ಮಾನಿಸಿ ಬೀಳ್ಕೊಟ್ಟರು.
ಸರ್ಕಾರಿ ನೌಕರ ಸಂಘದ ನಿರ್ದೇಶಕ ನರಸಿಂಹ ಆರ್. ರವರು ಮಾತನಾಡಿ, ಶಿಕ್ಷಕರ ವೃತ್ತಿ ಪವಿತ್ರವಾದದ್ದು. ಅದನ್ನು ವರಲಕ್ಷ್ಮೀಯವರು ಉತ್ತಮವಾಗಿ ನಿಭಾಯಿಸಿ ತಮ್ಮದೇ ಆದ ವ್ಯಕ್ತಿತ್ವವನ್ನು ಹೊಂದಿದ್ದಾರೆ, ಅವರ ನಿವೃತ್ತಿ ಜೀವನ ಸುಖಕರವಾಗಿರಲಿ ಎಂದು ಹಾರೈಸಿದರು.ಬಡ್ತಿ ಮುಖ್ಯಶಿಕ್ಷಕ ಸಂಘದ ಆಶಾಲತಾರವರು ಮಾತನಾಡಿ, ವರಲಕ್ಷ್ಮೀಯವರು ಹಸನ್ಮುಖಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಇಲಾಖೆಯಲ್ಲಿ ಶಿಸ್ತಿನ ಸಿಪಾಯಿಯಾಗಿದ್ದರು ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ನಿವೃತ್ತಿ ಹೊಂದಿದ ಮುಖ್ಯ ಶಿಕ್ಷಕಿ ಎಸ್.ವರಲಕ್ಷ್ಮೀಯವರು, ಸತತ ೩೩ ವರ್ಷಗಳ ನನ್ನ ಸೇವಾ ಅವಧಿಯಲ್ಲಿ ಶಿಕ್ಷಣ ಇಲಾಖೆಯಲ್ಲಿ ಉತ್ತಮ ಸೇವೆ ಸಲ್ಲಿಸಿದ ತೃಪ್ತಿ ಇದೆ, ಇದಕ್ಕೆ ಸಹಕರಿಸಿದ ನನ್ನ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಶಿಕ್ಷಕ ಸಂಘಗಳು, ನನ್ನ ಸಿಬ್ಬಂದಿ ವರ್ಗ, ನನ್ನ ಎಲ್ಲಾ ಶಿಕ್ಷಕ ಬಂಧುಗಳಿಗೆ ಸದಾ ಚಿರಋಣಿಯಾಗಿರುತ್ತೇನೆ ಎಂದರು.ಹಿರಿಯ ಮತ್ತು ಪ್ರಶಸ್ತಿ ವಿಜೇತ ಶಿಕ್ಷಕ ವೈ.ಕೆ.ರವೀಂದ್ರ ಮಾತನಾಡಿದರು.
ಕೊಂಡಶೆಟ್ಟಹಳ್ಳಿ ಶಾಲೆಯ ಶಿಕ್ಷಕ ವೃಂದವು ನಿವೃತ್ತ ಶಿಕ್ಷಕಿ ವರಲಕ್ಷ್ಮೀಗೆ ಅರಿಶಿಣ- ಕುಂಕುಮ ನೀಡಿ ಸತ್ಕರಿಸಿದ್ದು ವಿಶೇಷವಾಗಿತ್ತು.ಸರ್ಕಾರಿ ನೌಕರರ ಸಂಘದ ನಿರ್ದೇಶಕ ಆರ್.ನರಸಿಂಹ, ಸುರೇಶ್ ಕುಮಾರ್, ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ಅಧ್ಯಕ್ಷ ಷಣ್ಮುಗಯ್ಯ, ಖಜಾಂಚಿ ಅರ್ಜುನ್, ಬಿಆರ್‌ಪಿ ಎನ್.ವಿ.ಶ್ರೀನಿವಾಸ್, ಸಿಆರ್‌ಪಿ ವೀರಭದ್ರಯ್ಯ, ಚಿಕ್ಕವೆಂಕಟೇಶ್, ಅನುಪಮಾ, ಮಂಜಪ್ಪ, ಅಶೋಕಬಾಬು, ವೈ.ಕೆ.ರವೀಂದ್ರ, ಶಶಿಧರ, ಎ.ಕೆ.ವೆಂಕಟೇಶ್, ನಂಜುಂಡಪ್ಪ, ವೀರಾಸ್ವಾಮಿ, ಕಾಂತಮ್ಮ, ಉಷಾ, ಮುನಿರತ್ನಮ್ಮ, ಶಶಿಕಲಾ, ಪಿ.ಕೆ.ನಾಗರಾಜ್, ಗ್ರಾಮೀಣ ಶಿಕ್ಷಕ ಸಂಘದ ವೆಂಕಟೇಶ್‌ಗೌಡ, ಎಸ್.ಎನ್.ಮುನಿರಾಜು, ಯಲ್ಲಪ್ಪ, ಶ್ರೀನಿವಾಸಯ್ಯ, ಬಂಗಾರಪೇಟೆ ತಾಲೂಕು ಶಿಕ್ಷಕರು ಎನ್.ಸುಗುಣ, ಶಶಿಧರ್, ಶಾಲಾ ಸಂಕೀರ್ಣದ ಶಿಕ್ಷಕರು ಉಪಸ್ಥಿತರಿದ್ದರು.