ಶಾಲೆಗಳು ವ್ಯಕ್ತಿಯ ಕಣ್ಣು ತೆರೆಸುವ ದೇವಾಲಯ: ಹೆನ್ರಿ ಫೌಲ್ ಡಿಸೋಜಾ

| Published : Dec 08 2024, 01:17 AM IST

ಶಾಲೆಗಳು ವ್ಯಕ್ತಿಯ ಕಣ್ಣು ತೆರೆಸುವ ದೇವಾಲಯ: ಹೆನ್ರಿ ಫೌಲ್ ಡಿಸೋಜಾ
Share this Article
  • FB
  • TW
  • Linkdin
  • Email

ಸಾರಾಂಶ

ಬಾಳೆಹೊನ್ನೂರು, ಪ್ರತಿಯೊಂದು ಊರಿನಲ್ಲಿರುವ ಚರ್ಚ್, ಮಸೀದಿ, ಮಂದಿರಗಳು ಜನರಲ್ಲಿ ಧರ್ಮ ಪ್ರಜ್ಞೆಯನ್ನು ಮೂಡಿಸಿದರೆ, ಊರಿನಲ್ಲಿರುವ ಶಾಲೆಗಳು ವ್ಯಕ್ತಿಗಳ ಜ್ಞಾನದ ಕಣ್ಣು ತೆರೆಸುವ ದೇವಾಲಯಗಳು ಆಗಿವೆ ಎಂದು ವಿಜಯಮಾತೆ ಚರ್ಚ್ ಧರ್ಮಗುರು ಹೆನ್ರಿ ಫೌಲ್ ಡಿಸೋಜಾ ಹೇಳಿದರು.

ಪಟ್ಟಣದ ನಿರ್ಮಲಾ ಕಾನ್ವೆಂಟ್ ಆಂಗ್ಲ ಮಾಧ್ಯಮ ಶಾಲೆಯ ನೂತನ ಕಟ್ಟಡ ಉದ್ಘಾಟನೆ

ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು

ಪ್ರತಿಯೊಂದು ಊರಿನಲ್ಲಿರುವ ಚರ್ಚ್, ಮಸೀದಿ, ಮಂದಿರಗಳು ಜನರಲ್ಲಿ ಧರ್ಮ ಪ್ರಜ್ಞೆಯನ್ನು ಮೂಡಿಸಿದರೆ, ಊರಿನಲ್ಲಿರುವ ಶಾಲೆಗಳು ವ್ಯಕ್ತಿಗಳ ಜ್ಞಾನದ ಕಣ್ಣು ತೆರೆಸುವ ದೇವಾಲಯಗಳು ಆಗಿವೆ ಎಂದು ವಿಜಯಮಾತೆ ಚರ್ಚ್ ಧರ್ಮಗುರು ಹೆನ್ರಿ ಫೌಲ್ ಡಿಸೋಜಾ ಹೇಳಿದರು.ಪಟ್ಟಣದ ನಿರ್ಮಲಾ ಕಾನ್ವೆಂಟ್ ಆಂಗ್ಲ ಮಾಧ್ಯಮ ಶಾಲೆಯಿಂದ ನೂತನವಾಗಿ ನಿರ್ಮಿಸಿರುವ ಶಾಲಾ ಕಟ್ಟಡವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು. ಮಕ್ಕಳಿಗೆ ಸುಜ್ಞಾನವನ್ನು ಪಡೆಯುವ ಸೌಭಾಗ್ಯವನ್ನು ವಿವಿಧ ವಿದ್ಯಾಸಂಸ್ಥೆಯವರು ನೀಡಿದ್ದು, ಮಕ್ಕಳು ಅದನ್ನು ಸದುಪಯೋಗಡಿಸಿಕೊಳ್ಳಬೇಕು. ಸುಜ್ಞಾನವನ್ನು ಹಣ ನೀಡಿ ಬೇಕಾದರೂ ಕೊಂಡುಕೊಳ್ಳಬೇಕು. ಆದರೆ ಅದನ್ನು ಮಾರಿಕೊಳ್ಳುವ ಯೋಚನೆ ಇರಬಾರದು.

ಪ್ರಪಂಚದಲ್ಲಿ ಎಷ್ಟೋ ತಂದೆ, ತಾಯಂದಿರು ತಮ್ಮ ಮಕ್ಕಳು, ಕುಟುಂಬಸ್ಥರಿಗಾಗಿ ಕೋಟ್ಯಂತರ ರು. ಆಸ್ತಿ ಮಾಡುವುದನ್ನು ನೋಡಿದ್ದೇವೆ. ಆದರೆ ಎಲ್ಲರಿಗಾಗಿ ಶಿಕ್ಷಣ ದೊರೆಯಲಿ ಎಂಬ ಉದ್ದೇಶದಿಂದ ಶಾಲೆಗಳನ್ನು ಕಟ್ಟುವುದು ಅಪರೂಪವಾಗಿದೆ. ಇಂತಹ ಭವಿಷ್ಯದ ಶಾಲೆಗಳನ್ನು ಕಟ್ಟುವವರ ಶ್ರಮ ಮತ್ತು ಕಾಳಜಿ ಶ್ಲಾಘನೀಯ ಎಂದರು.ವಿದ್ಯಾಸಂಸ್ಥೆ ಮೈಸೂರು ವಿಭಾಗದ ಪ್ರಾಂತ್ಯಾಧಿಕಾರಿ ಲಿಲ್ಲಿ ಫೆರ್ನಾಂಡಿಸ್ ಮಾತನಾಡಿ, ಬಾಳೆಹೊನ್ನೂರಿನಲ್ಲಿ ಭವ್ಯವಾಗಿ ನಿರ್ಮಾಣಗೊಂಡಿರುವ ನೂತನ ಶಾಲಾ ಕಟ್ಟಡ ಇಲ್ಲಿ ಕಾರ್ಯನಿರ್ವಹಿಸುವ ಸಿಸ್ಟೆರ್‌ಗಳ ತ್ಯಾಗಮಯಿ ಜೀವನದ ಪ್ರತೀಕ ವಾಗಿದ್ದು, ಶಾಲಾ ಮಕ್ಕಳ ಮೊಗದಲ್ಲಿ ನಗು ತರಬೇಕು ಎಂಬ ಉದ್ದೇಶದಿಂದ ಉತ್ತಮ ಪರಿಸರದಲ್ಲಿ ಕಟ್ಟಡ ನಿರ್ಮಿಸಲಾಗಿದೆ.ಶಿಕ್ಷಕರು, ಪೋಷಕರು ಮಕ್ಕಳಿಗೆ ಉತ್ತಮ ಭವಿಷ್ಯ ಹಾಗೂ ಮೌಲ್ಯಾಧಾರಿತ ಶಿಕ್ಷಣ ನೀಡಿ ಮುಂದಿನ ಭವಿಷ್ಯಕ್ಕಾಗಿ ಅವರನ್ನು ರೂಪಿಸುವ ಕೆಲಸ ಮಾಡಬೇಕು. ಇಂದು ಮಕ್ಕಳು ಭವ್ಯ ಭಾರತದ ಉತ್ತಮ ಪ್ರಜೆಗಳಾಗಲಿದ್ದಾರೆ ಎಂದರು.ಧರ್ಮಗುರು ಕೀರ್ತಿ ಕಿರಣ್, ಮುಖ್ಯಶಿಕ್ಷಕ ಎಲ್ವಿನ್ ಡಿಸೋಜಾ, ವಿದ್ಯಾಸಂಸ್ಥೆ ಪ್ರಮುಖರಾದ ಬಿಂದು ಎಲಿಜಬೆತ್, ಸ್ಯಾಂಡ್ರಾ ಪಿಂಟೋ, ಐರಿನ್ ವೇಗಸ್, ಡೈನಾ, ಜೂಲಿಯಾನ ಸಿಕ್ವೇರಾ, ಸಿಆರ್‌ಪಿ ಮಾಲತೇಶ್, ಗ್ರಾಪಂ ಸದಸ್ಯ ರವಿಚಂದ್ರ, ಶಾಲಾ ಪೋಷಕ ಸಮಿತಿ ಅಧ್ಯಕ್ಷ ಶ್ರೀಧರ್ ಮತ್ತಿತರರು ಹಾಜರಿದ್ದರು.೦೭ಬಿಹೆಚ್‌ಆರ್ ೧:

ಬಾಳೆಹೊನ್ನೂರಿನ ನಿರ್ಮಲಾ ಕಾನ್ವೆಂಟ್ ಆಂಗ್ಲ ಮಾಧ್ಯಮ ಶಾಲೆಯಿಂದ ನೂತನವಾಗಿ ನಿರ್ಮಿಸಿರುವ ಶಾಲಾ ಕಟ್ಟಡವನ್ನು ವಿಜಯಮಾತೆ ಚರ್ಚ್ ಧರ್ಮಗುರು ಹೆನ್ರಿ ಫೌಲ್ ಡಿಸೋಜಾ ಉದ್ಘಾಟಿಸಿದರು. ಲಿಲ್ಲಿ ಫೆರ್ನಾಂಡಿಸ್, ಎಲ್ವಿನ್ ಡಿಸೋಜಾ, ಬಿಂದು ಎಲಿಜಬೆತ್, ಸ್ಯಾಂಡ್ರಾ ಇದ್ದರು.