ಶಾಲೆಗಳು ಮುಗ್ಧ ಮನಸ್ಸುಗಳ ಅರಳಿಸುವ ತಾಣ: ಎನ್.ಕೆ. ಭಟ್ಟ

| Published : Jan 16 2025, 12:46 AM IST

ಸಾರಾಂಶ

ಶಾಲೆಗಳಲ್ಲಿ ಜೀವನ ಶಿಕ್ಷಣದ ಕೊರತೆ ಕಂಡುಬರುತ್ತಿದೆ. ಆದ್ದರಿಂದ ಶಿಕ್ಷಕರು ಮಕ್ಕಳಿಗೆ ಸಾಧ್ಯವಿದ್ದಷ್ಟು ಹೆಚ್ಚಿನ ಉಪಯುಕ್ತ ಸಂಸ್ಕಾರ ಮತ್ತು ಬೌದ್ಧಿಕ ಶಿಕ್ಷಣವನ್ನು ಒದಗಿಸಬೇಕು ಎಂದು ಎನ್.ಕೆ. ಭಟ್ಟ ಅಗ್ಗಾಶಿಕುಂಬ್ರಿ ತಿಳಿಸಿದರು.

ಯಲ್ಲಾಪುರ: ಶಾಲೆಗಳು ಸರಸ್ವತಿ ಮಂದಿರವಿದ್ದಂತೆ. ಇಲ್ಲಿ ಮುಗ್ಧ ಮನಸ್ಸುಗಳನ್ನು ಅರಳಿಸುವ ತಾಣ ಎಂದು ಆನಗೋಡ ಸೇ.ಸ. ಸಂಘದ ಅಧ್ಯಕ್ಷರಾದ ಎನ್.ಕೆ. ಭಟ್ಟ ಅಗ್ಗಾಶಿಕುಂಬ್ರಿ ತಿಳಿಸಿದರು.ಇತ್ತೀಚೆಗೆ ಹಮ್ಮಿಕೊಂಡಿದ್ದ ತಾಲೂಕಿನ ಕೊಡಸೆ ಸ.ಹಿ.ಪ್ರಾ. ಶಾಲೆಯ ಅಮೃತ ಮಹೋತ್ಸವ ಸಮಾರೋಪ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಿ, ಮಾತನಾಡಿದರು.ಶಾಲೆಗಳಲ್ಲಿ ಜೀವನ ಶಿಕ್ಷಣದ ಕೊರತೆ ಕಂಡುಬರುತ್ತಿದೆ. ಆದ್ದರಿಂದ ಶಿಕ್ಷಕರು ಮಕ್ಕಳಿಗೆ ಸಾಧ್ಯವಿದ್ದಷ್ಟು ಹೆಚ್ಚಿನ ಉಪಯುಕ್ತ ಸಂಸ್ಕಾರ ಮತ್ತು ಬೌದ್ಧಿಕ ಶಿಕ್ಷಣವನ್ನು ಒದಗಿಸಬೇಕು ಎಂದರು. ಪತ್ರಕರ್ತ ಕೆ.ಎಸ್. ಭಟ್ಟ ಆನಗೋಡ ಮಾತನಾಡಿ, ಒಂದು ಊರಿನ ಬೆಳವಣಿಗೆಗೆ ಆ ಊರಿನ ಶಾಲೆಯ ಕೊಡುಗೆ ಅಪಾರ. ಕೊಡಸೆ ಶಾಲೆ ೭೫ ವರ್ಷ ಕಳೆದಿದೆ ಎಂದರೆ ಇಲ್ಲಿ ಕಲಿತವರ ಸಂಖ್ಯೆ ಕಡಿಮೆಯೇನಲ್ಲ. ಇಲ್ಲಿ ಕಲಿತವರು ಆಗಮಿಸಿದ್ದು, ಅಮೃತ ಮಹೋತ್ಸವದ ಯಶಸ್ಸಿಗೆ ಸಾಕ್ಷಿಯಾಗಿದೆ ಎಂದರು. ಈ ಸಂದರ್ಭದಲ್ಲಿ ಹೊರತರಲಾದ ಸ್ಮರಣ ಸಂಚಿಕೆಯ ಸಂಪಾದಕ ಪ್ರಶಾಂತ ಭಟ್ಟ ಮಾತನಾಡಿ, ೭೫ ವರ್ಷದ ಶಾಲೆಯ ಇತಿಹಾಸವನ್ನು ಪುಸ್ತಕದಲ್ಲಿ ಬರೆಯಲಾಗಿದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಎಸ್‌ಡಿಎಂಸಿ ಅಧ್ಯಕ್ಷ ಸುಬ್ರಹ್ಮಣ್ಯ ಭಟ್ಟ ಮಾತನಾಡಿದರು. ವಿಎಫ್‌ಸಿ ಅಧ್ಯಕ್ಷ ಸುರೇಶ ಮುಂಡ್ಗೇಕರ, ಸಿಆರ್‌ಪಿ ಶ್ರೀನಿವಾಸಪ್ರಸಾದ ದೇವಾಡಿಗ, ವೆಂಕಟ್ರಮಣ ಭಾಗವತ,ಶೇಷಗಿರಿ ಭಟ್ಟ, ಲಕ್ಷ್ಮೀ ದೇಸಾಯಿ, ಮಹಾದೇವ ದೇಸಾಯಿ ಉಪಸ್ಥಿತರಿದ್ದರು. ಸುಮಂಗಲಾ ದೊಡ್ಡಗೌಡ್ರ ಸ್ವಾಗತಿಸಿದರು. ಸ್ನೇಹ ಭಟ್ಟ, ಮಾಜಿ ವಿದ್ಯಾರ್ಥಿನಿ ನಾಗರತ್ನಾ ಅನಿಸಿಕೆ ವ್ಯಕ್ತಪಡಿಸಿದರು. ಶಿಕ್ಷಕ ವಿಶಾಲ ನಾಯಕ ನಿರ್ವಹಿಸಿದರು. ಮುಖ್ಯಾಧ್ಯಾಪಕಿ ಇಂದಿರಾ ಎನ್.ಎಚ್. ವಂದಿಸಿದರು. ಸಂಜೆ ಕೆ.ಎಸ್. ಭಟ್ಟ ನಿರ್ದೇಶನದ ಕಳಚಿದ ಕುಂಡಲ ನಾಟಕ ಪ್ರದರ್ಶನಗೊಂಡಿತು.ವಿಕಾಸ ಅರ್ಬನ್ ಬ್ಯಾಂಕಿನ ಆಡಳಿತ ಮಂಡಳಿಗೆ ಆಯ್ಕೆ

ಯಲ್ಲಾಪುರ: ವಿಕಾಸ ಅರ್ಬನ್ ಕೋ ಆಪರೇಟಿವ್ ಬ್ಯಾಂಕಿನ ಆಡಳಿತ ಮಂಡಳಿಯ ನಿರ್ದೇಶಕರ ಚುನಾವಣೆ ನಡೆಯಬೇಕಾಗಿದ್ದ ಮುನ್ನ ಜ. ೧೪ರಂದು ಅವಿರೋಧವಾಗಿ ಎಲ್ಲ ೧೯ ಸದಸ್ಯರು ಶಾಸಕ ಶಿವರಾಮ ಹೆಬ್ಬಾರ ಅವರ ಮಾರ್ಗದರ್ಶನದಲ್ಲಿ ಆಯ್ಕೆಯಾಗಿದ್ದಾರೆ.

ಸಾಮಾನ್ಯ ಕ್ಷೇತ್ರದಲ್ಲಿ ಮುರಳಿ ಹೆಗಡೆ, ಡಿ. ಶಂಕರ ಭಟ್ಟ, ರಾಧಾಕೃಷ್ಣ ನಾಯ್ಕ, ನರಸಿಂಹ ಕೋಣೆಮನೆ, ಕಿರಣ ಆನೂರಶೆಟ್ಟರ, ಸುಬ್ರಾಯ ಭಾಗ್ವತ, ನರಸಿಂಹ ಭಟ್ಟ, ರಾಜೇಂದ್ರ ಬದ್ದಿ, ಶಿವರಾಮ ಭಟ್ಟ, ಶಂಕರ ನಾಗರಕಟ್ಟೆ, ಲೋಕೇಶ ಗಿಡ್ಡನ್, ಸದಾನಂದ ಭಟ್ಟ, ಬಸಯ್ಯ ನಡುವಿನಮನಿ, ವಿಜಯಶ್ರೀ ವೈದ್ಯ, ಪ್ರಿಯಾ ಗಾಂವ್ಕರ, ಹಿಂದುಳಿದ ವರ್ಗದಲ್ಲಿ ನಾಗೇಶ ದೇವಳಿ, ಶಂಬುಲಿಂಗಯ್ಯ ನಡಗಿ, ಪರಿಶಿಷ್ಟ ವರ್ಗದಲ್ಲಿ ಲಾರೆನ್ಸ್ ಸಿದ್ದಿ, ಸಿದ್ರಾಮಪ್ಪ ದಾನಪ್ಪನವರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.