ವಿಜ್ಞಾನ ವಸ್ತು ಪ್ರದರ್ಶನಗಳು ಮಕ್ಕಳ ಕೌಶಲ್ಯ ಹೆಚ್ಚಿಸುತ್ತವೆ: ರಾಮಕೃಷ್ಣೇಗೌಡ

| Published : Mar 06 2025, 12:33 AM IST

ವಿಜ್ಞಾನ ವಸ್ತು ಪ್ರದರ್ಶನಗಳು ಮಕ್ಕಳ ಕೌಶಲ್ಯ ಹೆಚ್ಚಿಸುತ್ತವೆ: ರಾಮಕೃಷ್ಣೇಗೌಡ
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡಪ್ರಭ ವಾರ್ತೆ ಪಾಂಡವಪುರಶಾಲೆಗಳಲ್ಲಿ ನಡೆಯುವ ವಿಜ್ಞಾನ ವಸ್ತು ಪ್ರದರ್ಶನಗಳು ಮಕ್ಕಳ ಕೌಶಲ್ಯ ಹೆಚ್ಚಿಸುವ ಜತೆಗೆ ಪ್ರತಿಭೆ ಹೊರಹಾಕಲು ಸೂಕ್ತ ವೇದಿಕೆಯಾಗಲಿವೆ ಎಂದು ಬಿಜಿಎಸ್ ಹೇಮಗಿರಿ ಶಾಖಾ ಮಠದ ಕಾರ್‍ಯದರ್ಶಿ ಡಾ.ಜೆ.ಎನ್.ರಾಮಕೃಷ್ಣೇಗೌಡ ಹೇಳಿದರು.

ಕನ್ನಡಪ್ರಭ ವಾರ್ತೆ ಪಾಂಡವಪುರ

ಶಾಲೆಗಳಲ್ಲಿ ನಡೆಯುವ ವಿಜ್ಞಾನ ವಸ್ತು ಪ್ರದರ್ಶನಗಳು ಮಕ್ಕಳ ಕೌಶಲ್ಯ ಹೆಚ್ಚಿಸುವ ಜತೆಗೆ ಪ್ರತಿಭೆ ಹೊರಹಾಕಲು ಸೂಕ್ತ ವೇದಿಕೆಯಾಗಲಿವೆ ಎಂದು ಬಿಜಿಎಸ್ ಹೇಮಗಿರಿ ಶಾಖಾ ಮಠದ ಕಾರ್‍ಯದರ್ಶಿ ಡಾ.ಜೆ.ಎನ್.ರಾಮಕೃಷ್ಣೇಗೌಡ ಹೇಳಿದರು.

ತಾಲೂಕಿನ ಚಿನಕುರಳಿ ಬಿಜಿಎಸ್ ಶಿಕ್ಷಣ ಸಂಸ್ಥೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಕಾರ್‍ಯಕ್ರಮದ ಅಂಗವಾಗಿ ನಡೆದ ವಿಜ್ಞಾನ ವಸ್ತು ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದರು.

ವಿಜ್ಞಾನ ವಸ್ತು ಪ್ರದರ್ಶನಗಳು ಮಕ್ಕಳಲ್ಲಿರುವ ಪ್ರತಿಭೆ ಹೊರತೆಗೆಯುವ ಜತೆಗೆ ಮಕ್ಕಳು ವಿಶಿಷ್ಟ ಅನ್ವೇಷಣೆ ಮಾಡಲು ಸಹಕಾರಿಯಾಗಲಿವೆ. ಬಿಜಿಎಸ್ ಶಿಕ್ಷಣ ಸಂಸ್ಥೆ ವತಿಯಿಂದ ಎಲ್ಲಾ ಶಾಲಾ ಕಾಲೇಜುಗಳಲ್ಲೂ ಪ್ರತಿವರ್ಷವೂ ವಿಜ್ಞಾನ ವಸ್ತು ಪ್ರದರ್ಶನವನ್ನು ಆಯೋಜನೆ ಮಾಡಿಕೊಂಡು ಬರುವ ಮೂಲಕ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಪೂರಕವಾಗಿ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು.

ವಸ್ತು ಪ್ರದರ್ಶನದಲ್ಲಿ ಶಾಲೆಯ ಮಕ್ಕಳ ವಿಜ್ಞಾನ, ಪ್ರಕೃತಿ, ಪರಿಸರ, ಮಾನವ ಅಂಗಾಗಗಳು, ನೀರು ಶುದ್ಧೀಕರಣ, ಅವಿಷ್ಕಾರಗಳು, ಹಣ್ಣು, ತರಕಾರಿಗಳು, ಆರೋಗ್ಯಕರ ಆಹಾರ, ಅನಾರೋಗ್ಯಕರ ಆಹಾರ ಸೇರಿದಂತೆ ಹಲವಾರು ಮಾದರಿಗಳು ಎಲ್ಲರನ್ನೂ ಗಮನಸೆಳೆದವು.

ಕಾರ್‍ಯಕ್ರಮಕ್ಕೆ ಆಗಮಿಸಿದ ಡಾ.ಜೆ.ಎನ್.ರಾಮಕೃಷ್ಣೇಗೌಡ ಅವರನ್ನು ಪುಟಾಣಿ ಮಕ್ಕಳು ಹಣ್ಣು, ತರಕಾರಿಗಳ ವೇಷಭೂಷಣ ಧರಿಸಿ ನೃತ್ಯಮಾಡುವ ಮೂಲಕ ಸ್ವಾಗತಿಸಿದ್ದು ಎಲ್ಲರ ಗಮನಸೆಳೆಯಿತು. ಕೆಪಿಸಿಸಿ ಪ್ರಧಾನ ಕಾರ್‍ಯದರ್ಶಿ ಎಚ್.ತ್ಯಾಗರಾಜು, ರೈತಸಂಘದ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ, ಜೆಡಿಎಸ್ ಅಧ್ಯಕ್ಷ ಎಸ್.ಎ.ಮಲ್ಲೇಶ್, ಎಲ್.ಸಿ.ಮಂಜುನಾಥ್, ಅಶ್ವಥ್‌ಕುಮಾರೇಗೌಡ, ಚಂದ್ರಶೇಖರಯ್ಯ, ಮಂಜುನಾಥ್, ಪ್ರಾಂಶುಪಾಲ ಚಿದಂಬರ್, ಪತ್ರಕರ್ತರಾದ ಎಸ್.ನಾಗಸುಂದರ್, ಚನ್ನಮಾದೇಗೌಡ, ರವಿಕುಮಾರ್ ಸೇರಿ ಶಿಕ್ಷಕರು ಭಾಗವಹಿಸಿದ್ದರು.