ಸಾರಾಂಶ
ರಾಣಿಬೆನ್ನೂರು: ವಿಜ್ಞಾನ ವಿಷಯವು ವಿದ್ಯಾರ್ಥಿಗಳಿಗೆ ಕಠಿಣವಲ್ಲ ಹಾಗೂ ಬಹಳಷ್ಟು ಸರಳವಾಗಿದೆ ಎಂದು ಎಂದು ರಾಷ್ಟ್ರಪ್ರಶಸ್ತಿ ಪುರಸ್ಕೃತ, ನಿವೃತ್ತ ಮುಖ್ಯೋಪಾಧ್ಯಾಯ ಆರ್.ಎಸ್. ಪಾಟೀಲ ತಿಳಿಸಿದರು.ತಾಲೂಕಿನ ಕೆರಿಮಲ್ಲಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಏರ್ಪಡಿಸಿದ್ದ ರಾಷ್ಟ್ರೀಯ ವಿಜ್ಞಾನ ದಿನಾಚರಣೆ, ದಿ. ಚನ್ನಬಸಮ್ಮ ಮತ್ತು ದಿ. ಶಿವನಗೌಡ ಪಾಟೀಲ್ ಸ್ಮರಣಾರ್ಥ ದತ್ತಿನಿಧಿ ಕಾರ್ಯಕ್ರಮ, ಏಳನೇ ತರಗತಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ, ಪ್ರಶಸ್ತಿ ವಿತರಣೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಬಹಳಷ್ಟು ಜನರು ವಿಜ್ಞಾನವನ್ನು ಕ್ಲಿಷ್ಟಕರ ಎಂದು ಹೇಳುತ್ತಾರೆ. ಭಯಪಡುತ್ತಾರೆ. ನಮ್ಮ ಸುತ್ತಮುತ್ತಲಿನ ಪರಿಸರದ ಕುರಿತು ನಿಖರವಾಗಿ ಹಾಗೂ ವೈಜ್ಞಾನಿಕವಾಗಿ ಪೂರ್ಣವಾದ ಮಾಹಿತಿ ಪಡೆದುಕೊಂಡರೆ ವಿಜ್ಞಾನವು ವಿದ್ಯಾರ್ಥಿಗಳಿಗೆ ಸರಳವಾಗುವುದು ಎಂದರು. ಹಿರಿಯ ನ್ಯಾಯವಾದಿ ಎನ್.ವಿ. ಚಪ್ಪರದ ಮಾತನಾಡಿ, ಇಂದಿನ ಮಕ್ಕಳಿಗೆ ಪ್ರಾಥಮಿಕ ಹಂತದಲ್ಲಿಯೇ ಅವರ ಪ್ರತಿಭೆಗೆ ಅನುಗುಣವಾಗಿ ತಂದೆ- ತಾಯಿಗಳು, ಪೋಷಕರು, ಶಿಕ್ಷಕರು ಶಿಕ್ಷಣ ನೀಡಿದರೆ ಮುಂದೆ ಅವರು ಉನ್ನತ ಸ್ಥಾನದೊಂದಿಗೆ ಉಜ್ವಲ ಭವಿಷ್ಯ ಹೊಂದುವರು ಎಂದರು. ಇದೇ ಸಂದರ್ಭದಲ್ಲಿ ಥಟ್ ಅಂತ ಹೇಳಿ ಬಹುಮಾನ ಪಡೆಯಿರಿ ಎಂಬ ಸ್ಪರ್ಧೆ ನಡೆದು ವಿದ್ಯಾರ್ಥಿಗಳು ಬಹುಮಾನ ಪಡೆದರು. ವಿಜ್ಞಾನ ವಸ್ತು ಪ್ರದರ್ಶನದಲ್ಲಿ ವಿಜೇತರಾದ ರೇಖಾ ರಾಮಣ್ಣನವರ(ಪ್ರಥಮ) ಕಿರಣ ಕಾಕೋಳ(ದ್ವಿತೀಯ) ಹಾಗೂ ಕುಮಾರ್ ಹುರುಳಿ(ತೃತೀಯ) ಸ್ಥಾನ ಪಡೆದು ಬಹುಮಾನ ಹಾಗೂ ಪ್ರಶಸ್ತಿ ಪತ್ರ ಸ್ವೀಕರಿಸಿದರು. ಆನಂತರ ವಿದ್ಯಾರ್ಥಿಗಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.ಶಾಲೆಯ ಮುಖ್ಯೋಪಾಧ್ಯಾಯರಾದ ಅನುಸೂಯಾ ರಾಠೋಡ, ಎಸ್‌ಡಿಎಂಸಿ ಅಧ್ಯಕ್ಷ ಮಂಜುನಾಥ್ ಚಿಕ್ಕಣ್ಣನವರ, ಕವಿ ಪ್ರಕಾಶ ಸೊಪ್ಪಿನ, ಪತ್ರಕರ್ತ ಎಂ. ಚಿರಂಜೀವಿ, ವರ್ತಕ ಹಾಲೇಶ ಮುದ್ದಿ, ವೀರನಗೌಡ ಪಾಟೀಲ, ಅಪ್ಪಣ್ಣ ಶಿವಲಿಂಗಣ್ಣನವರ, ಸಿಆರ್‌ಪಿ ಶ್ರೀನಿವಾಸ, ನಿಂಗರಾಜ ಮಡಿವಾಳರ, ರಮೇಶ ಮೈಲಾರ, ಶಿಕ್ಷಕರಾದ ಪಿ.ಕೆ. ಪರಂಗಿ, ವಿಜಯಲಕ್ಷ್ಮಿ ಜೋಶಿ, ನಿರ್ಮಲಾ ಲಮಾಣಿ, ಸಿ.ಬಿ. ಸಣ್ಣಮನಿ ಹಾಗೂ ಅಂಗನವಾಡಿ ಕಾರ್ಯಕರ್ತರು, ಗ್ರಾಮದ ಮುಖಂಡರು, ಎಸ್‌ಡಿಎಂಸಿ ಪದಾಧಿಕಾರಿಗಳು ಮತ್ತಿತರರಿದ್ದರು.ನರೇಗಾದಿಂದ ಮಹಿಳೆಯರ ಆರ್ಥಿಕ ಅಭಿವೃದ್ಧಿಶಿಗ್ಗಾಂವಿ: ನರೇಗಾ ಯೋಜನೆಯನ್ನು ಹೆಚ್ಚು ಕ್ರಿಯಾತ್ಮಕವಾಗಿ ಅಳವಡಿಸುವ ಮೂಲಕ ಮಹಿಳೆಯರು ಅರ್ಥಿಕ ಪ್ರಗತಿ ಪಡೆಯಬಹುದು ಎಂದು ಉದ್ಯೋಗ ಖಾತ್ರಿ ಯೋಜನೆಯ ಐಇಸಿ ಸಂಯೋಜಕಿ ರಾಜೇಶ್ವರಿ ಹೇಳಿದರು.ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಸ್ತ್ರೀ ಚೇತನ ದಿನಾಚರಣೆ ಅಂಗವಾಗಿ ತಾಲೂಕಿನ ಹಳೆ ಬಂಕಾಪುರ ಹಾಗೂ ಬಾಡ ಪಂಚಾಯಿತಿ ವ್ಯಾಪ್ತಿಯಲ್ಲಿ ಮಹಿಳೆಯರು ನರೇಗಾ ಯೋಜನೆಯಡಿ ಪಾಲ್ಗೊಳ್ಳುವಿಕೆ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು.ನರೇಗಾ ಯೋಜನೆಯಲ್ಲಿ ಪುರುಷ ಸಮಾನ ವೇತನ, ಸೌಲಭ್ಯತೆ ನೀಡಲಾಗುತ್ತಿದೆ. ಕೂಲಿಕಾರರು ವೈಯಕ್ತಿಕ ಹಾಗೂ ಸಮುದಾಯ ಆಧಾರಿತ ಕಾರ್ಯಕ್ರಮಗಳಲ್ಲಿ ಅರ್ಥಿಕ ಪ್ರಯೋಜನ ಪಡೆಯಬೇಕು. ಕುಟುಂಬವೂ ಸುಧಾರಣೆ ಕಾಣಲಿದೆ.
ಉದ್ಯೋಗ ಖಾತ್ರಿ ಯೋಜನೆಯಲ್ಲಿ ಗ್ರಾಮೀಣ ಪರಿಸರ, ಸ್ವಾವಲಂಬನೆಯ ಕಾರ್ಯಕ್ರಮಗಳು, ಜಮೀನು ಅಭಿವೃದ್ಧಿ ಕಾರ್ಯಕ್ರಮಗಳು ಸಮುದಾಯ ಆಧಾರಿತ ಕೆರೆ- ಕಟ್ಟೆಗಳ ನೀರಿನ ಸಂಪನ್ಮೂಲಗಳ ಸಂಗ್ರಹಣೆ ಬಳಕೆಯ ಕಾಮಗಾರಿಗಳು, ಕೈ ತೋಟಗಳ ಸೃಜಿಸುವಿಕೆ ಮೂಲಕ ಉದ್ಯೋಗ ಸೃಷ್ಟಿ ಮಾಡಲಾಗುತ್ತಿದೆ. ಮಹಿಳೆಯರ ಸ್ವಾವಲಂಬನೆಯ ಬದುಕು ಕಟ್ಟಿಕೊಡಲಾಗುತ್ತಿದೆ ಎಂದರು.ಬಾಡ ಹಳೆ ಬಂಕಾಪುರ ಪಿಡಿಒ ರಾಮಕೃಷ್ಣ ಗುಡಗೇರಿ, ವಾಣಿ ಅಲ್ಲಯ್ಯಾನವರ ಹಾಗೂ ಎಲ್‌ಸಿಆರ್‌ಪಿ ಒಕ್ಕೂಟದ ಅಧ್ಯಕ್ಷರು ಭಾಗವಹಿಸಿದ್ದರು.