ಭಾರತದ ಖ್ಯಾತ ಭೌತವಿಜ್ಞಾನಿ ಸರ್ ಸಿ.ವಿ.ರಾಮನ್ ಅವರು 1928ರ ಫೆಬ್ರವರಿ 28ರಂದು ತಮ್ಮ ಪ್ರಸಿದ್ಧ ಸಂಶೋಧನೆಯಾದ ''''ರಾಮನ್ ಎಫೆಕ್ಟ್''''ನ್ನು ಜಗತ್ತಿಗೆ ಪರಿಚಯಿಸಿದರು. ಸಾಧನೆಯ ನೆನಪಿಗಾಗಿ ಮತ್ತು ವಿದ್ಯಾರ್ಥಿಗಳಲ್ಲಿ ವಿಜ್ಞಾನದ ಬಗ್ಗೆ ಆಸಕ್ತಿ ಮೂಡಿಸಲು ವಿಜ್ಞಾನ ದಿನಚರಣೆಯನ್ನು ಆಚರಿಸಲಾಗುತ್ತಿದೆ.

ಕನ್ನಡಪ್ರಭ ವಾರ್ತೆ ಮಳವಳ್ಳಿ

ವಿಜ್ಞಾನ ಎನ್ನುವುದು ಕೇವಲ ಪುಸ್ತಕದಲ್ಲಿರುವ ವಿಷಯವಲ್ಲ. ಅದು ನಮ್ಮ ಸುತ್ತಮುತ್ತಲಿನ ಜಗತ್ತನ್ನು ಅರ್ಥಮಾಡಿಕೊಳ್ಳುವ ಒಂದು ದೃಷ್ಟಿಕೋನವಾಗಿದೆ ಎಂದು ನಿವೃತ್ತ ಉಪನ್ಯಾಸಕ ಕಮಲ್ ಲೊದಾಯ ತಿಳಿಸಿದರು.

ಪಟ್ಟಣದ ಹೊರವಲಯದ ಮಾರೇಹಳ್ಳಿ ಪಿಎಂಶ್ರೀ ಸರ್ಕಾರಿ ಆದರ್ಶ ವಿದ್ಯಾಲಯದಲ್ಲಿ ಜ್ಞಾನ ವಿಜ್ಞಾನ ಸಮಿತಿ ವತಿಯಿಂದ ನಡೆದ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಭಾರತದ ಖ್ಯಾತ ಭೌತವಿಜ್ಞಾನಿ ಸರ್ ಸಿ.ವಿ.ರಾಮನ್ ಅವರು 1928ರ ಫೆಬ್ರವರಿ 28ರಂದು ತಮ್ಮ ಪ್ರಸಿದ್ಧ ಸಂಶೋಧನೆಯಾದ ‘ರಾಮನ್ ಎಫೆಕ್ಟ್’ನ್ನು ಜಗತ್ತಿಗೆ ಪರಿಚಯಿಸಿದರು. ಸಾಧನೆಯ ನೆನಪಿಗಾಗಿ ಮತ್ತು ವಿದ್ಯಾರ್ಥಿಗಳಲ್ಲಿ ವಿಜ್ಞಾನದ ಬಗ್ಗೆ ಆಸಕ್ತಿ ಮೂಡಿಸಲು ವಿಜ್ಞಾನ ದಿನಚರಣೆಯನ್ನು ಆಚರಿಸಲಾಗುತ್ತಿದೆ ಎಂದು ಹೇಳಿದರು.

ದೈನಂದಿನ ಜೀವನದಲ್ಲಿ ವಿಜ್ಞಾನ ಮುಖ್ಯ. ವಿಜ್ಞಾನದ ವಿಸ್ಮಯಗಳು ಜಗತ್ತನ್ನು ಬದಲಾಯಿಸುವ ಸಾಮರ್ಥ್ಯ ಹೊಂದಿದೆ. ವಿಜ್ಞಾನ ದಿನಾಚರಣೆಯಲ್ಲಿ ವಿಜ್ಞಾನವನ್ನು ಸಂಭ್ರಮಿಸಿ ಜಗತ್ತಿನ ವಿಸ್ಮಯಗಳನ್ನು ಅರಿತುಕೊಳ್ಳಲು ಮತ್ತು ಮಾನವ ಜನಾಂಗಕ್ಕೆ ನೆರವಾಗಬಲ್ಲ ಹೊಸ ಅನ್ವೇಷಣೆಗಳನ್ನು ನಡೆಸಲು ಮುಂದಿನ ತಲೆಮಾರುಗಳಿಗೆ ಸ್ಪೂರ್ತಿ ನೀಡುವ ಅಗತ್ಯವಿದೆ ಎಂದರು.

ಬಾಹ್ಯಕಾಶದ ಮಕ್ಕಳಲ್ಲಿ ಇದ್ದ ಅನುಮಾನಗಳಿಗೆ ಉತ್ತರ ನೀಡಲಾಯಿತು. ಮುಖ್ಯ ಶಿಕ್ಷಕ ಶಿವರಾಜ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಭಾರತ ಜ್ಞಾನ ವಿಜ್ಞಾನ ಸಮಿತಿ ಕಾರ್ಯದರ್ಶಿ ಪ್ರಶಾಂತ್‌ಬಾಬು ಸೇರಿದಂತೆ ಇತರರು ಇದ್ದರು.ವೈಜ್ಞಾನಿಕ ಸಂಶೋಧನೆಗಳ ಬಗ್ಗೆ ವಿದ್ಯಾರ್ಥಿಗಳಿಂದ ವಿವರಣೆಗೆ ಪೋಷಕರ ಮೆಚ್ಚುಗೆ

ಕನ್ನಡಪ್ರಭ ವಾರ್ತೆ ಮಂಡ್ಯ

ತಾಲೂಕಿನ ಸಂತೆಕಸಲಗೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯಲ್ಲಿ ವೈಜ್ಞಾನಿಕ ಸಂಶೋಧನೆಗಳ ಬಗ್ಗೆ ವಿದ್ಯಾರ್ಥಿಗಳು ನೀಡಿದ ವಿವರಣೆಗೆ ಪೋಷಕರು ಮೆಚ್ಚುಗೆ ವ್ಯಕ್ತಪಡಿಸಿದರು.

ಶಾಲಾ ಆವರಣದಲ್ಲಿ ನಡೆದ ವಿಜ್ಞಾನ ದಿನಾಚರಣೆಯಲ್ಲಿ ಮಕ್ಕಳು ಸೌರ ಮಂಡಲದ ಹೇಗಿದೆ?, ಸೌರಶಕ್ತಿ ಬಳಕೆ, ಆಮ್ಲ ಮತ್ತು ಪ್ರತ್ಯಾಮ್ಲ, ಸರಳ ವಿದ್ಯುತ್ ಮಾಪಕ, ಜ್ವಾಲಾಮುಖಿ, ನೀರಿನಿಂದ ವಿದ್ಯುತ್ ತಯಾರಿಕೆ, ಬೇರಿನ ವಿಧಗಳು, ಕಾಂತಗಳ ಗುಣಾನ್ವೇಷಣೆ, ತೇಲುವ ಮೊಟ್ಟೆ, ಜಲಚಕ್ರ ಹೀಗೆ ಅನೇಕ ವೈಜ್ಞಾನಿಕ ಸಂಶೋಧನೆಗಳ ಪ್ರದರ್ಶನ ಗಮನ ಸೆಳೆಯಿತು.

ಬಿಸಿನೀರು ಹಾಗೂ ತಣ್ಣೀರಲ್ಲಿ ಬಣ್ಣ ಹಾಕಿದಾಗ ಬಿಸಿನೀರಲ್ಲಿ ಬೇಗ ಹರಡುವಿಕೆ, ಶಬ್ಧ ತರಂಗಗಳ ಪ್ರಸರಣ, ಹೂವಿನಲ್ಲಿ ಪರಾಗಸ್ಪರ್ಶ, ಬೆಳಕಿನ ವಿಕಿರಣ, ಇಂತಹ ಅನೇಕ ಸಂಶೋಧನೆಗಳನ್ನು ವಿವರಿಸಿ ಸಣ್ಣ ವಯಸ್ಸು ತಮ್ಮ ತಿಳಿವಳಿಕೆ ಸಾಮರ್ಥ್ಯವನ್ನು ಮಕ್ಕಳು ಪ್ರದರ್ಶಿಸಿದ್ದು ವಿಶೇಷವಾಗಿತ್ತು.

ಮಕ್ಕಳ ವಿವರಣೆಗೆ ಪೋಷಕರು ಹಾಗೂ ನಾಗರಿಕರು ಕೇಳಿ ತಿಳಿದುಕೊಂಡು ಮೆಚ್ಚುಗೆ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಮುಖ್ಯಶಿಕ್ಷಕಿ ಆಶಾಮಣಿ, ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ಸಂತೆಕಸಲಗೆರೆ ಬಸವರಾಜು, ವಿಜ್ಞಾನ ಶಿಕ್ಷಕಿ ನಿಂಗಮ್ಮ, ಸಹ ಶಿಕ್ಷಕಿ ಶೋಭ, ಮಕ್ಕಳ ಮನೆ ಶಿಕ್ಷಕಿ ಪುಷ್ಪಲತಾ, ಪೋಷಕರು ಉಪಸ್ಥತರಿದ್ದರು.