ಸಾರಾಂಶ
ಬಾದಾಮಿ: ಇಲ್ಲಿನ ಶ್ರೀ ಮೈಲಾರಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಎಸ್.ಎಫ್. ಹೊಸಗೌಡ್ರ ವರ್ಲ್ಡ್ ಶಾಲೆಯಲ್ಲಿ ವಿಜ್ಞಾನ ವಸ್ತು ಪ್ರದರ್ಶನ ನಡೆಯಿತು. ಯು.ಕೆ.ಜಿ ಯಿಂದ 8ನೇ ತರಗತಿ ವರೆಗಿನ ಎಲ್ಲಾ ಮಕ್ಕಳು ಮಾಡಿದ ವಿಜ್ಞಾನ ಪ್ರಾತ್ಯಕ್ಷಿಕೆಗಳು, ಅದರ ಬಗ್ಗೆ ವಿವರಣೆ ಕಂಡು ಅತಿಥಿಗಳು ಅಚ್ಚರಿಗೊಂಡರು.
ಕನ್ನಡಪ್ರಭ ವಾರ್ತೆ ಬಾದಾಮಿ: ಇಲ್ಲಿನ ಶ್ರೀ ಮೈಲಾರಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಎಸ್.ಎಫ್. ಹೊಸಗೌಡ್ರ ವರ್ಲ್ಡ್ ಶಾಲೆಯಲ್ಲಿ ವಿಜ್ಞಾನ ವಸ್ತು ಪ್ರದರ್ಶನ ನಡೆಯಿತು.
ದೇಶ ಸುತ್ತಿ ನೋಡು ಕೋಶ ಓದು ನೋಡು ಪ್ರಯೋಗಗಳನ್ನು ಮಾಡಿ ನೋಡು ಎಂಬ ನಾಣ್ಣುಡಿಯಂತೆ ಯು.ಕೆ.ಜಿ ಯಿಂದ 8ನೇ ತರಗತಿ ವರೆಗಿನ ಮಕ್ಕಳು ಮಾಡಿದ್ದ ವಿಜ್ಞಾನ ಪ್ರಾತ್ಯಕ್ರಿಕೆ, ಅದರ ವಿವರಣೆಯನ್ನು ಮಕ್ಕಳು ನಿರರ್ಗಳವಾಗಿ ವಿಸ್ತಾರವಾಗಿ ಹೇಳಿದ ರೀತಿಕಂಡು ಅತಿಥಿಗಳಿಗೆ ಅಚ್ಚರಿಯನ್ನುಂಟಾಯಿತು. ಗುಳೇದಗುಡ್ಡ ಕೋಟೆಕಲ್ ಅಭಿನವ ಒಪ್ಪತ್ತೇಶ್ವರ ಮಹಾಸ್ವಾಮಿಗಳು, ಗುರುಸಿದ್ದ ಶಿವಾಚಾರ್ಯ ಸ್ವಾಮೀಜಿ, ಕೈಲಾಸಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಂಸ್ಥೆಯ ಅಧ್ಯಕ್ಷ ಮಹೇಶ ಎಸ್. ಹೊಸಗೌಡರ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಉಪನ್ಯಾಸಕರಾದ ಗಂಗಾಧರ ಕಾಳಗಿ, ಎಂ.ಡಿ. ಸರಗಣಾಚಾರಿ, ಮುಖಂಡ ಸುಧೀಂದ್ರ ಹುನಗುಂಡಿ, ಪತ್ರಕರ್ತ ಲಿಂಗರಾಜ ಚಿನಿವಾಲರ, ಮಾರುತಿ ಹೊಸಗೌಡರ, ಶಾಲೆಯ ಪ್ರಾಚಾರ್ಯರು, ಆಡಳಿತಾಧಿಕಾರಿಗಳು ಹಾಗೂ ಶಿಕ್ಷಕರು, ಪಾಲಕರು ಮಾರ್ಗದರ್ಶಕರು ಇದ್ದರು.