ಕರ್ನಾಟಕ ಅಥವಾ ತಮಿಳುನಾಡು ಸರ್ಕಾರ ಆಗಿರಬಹುದು. ಎರಡು ಕೂಡ ಸಿಡಬ್ಲ್ಯೂಆರ್ ಸಿ ನಿಯಮಕ್ಕೆ ಒಳಪಟ್ಟಿದ್ದೇವೆ. ಇಬ್ಬರು ಈ ನಿಯಮಗಳನ್ನು ಪಾಲಿಸಬೇಕು ಸರಿ. ಬರಗಾಲದಲ್ಲಿ ಸುಪ್ರೀಂ ಕೋರ್ಟಿಗೆ ಹೋಗಲು ಅವಕಾಶವಿದೆ. ಸುಪ್ರೀಂ ಕೋರ್ಟಿಗೂ ಮೇಲ್ಮನವಿ ಸಲ್ಲಿಸಲು ಅವಕಾಶವಿದೆ. ಅದನ್ನು ನಾವು ಮಾಡಬೇಕಾಗಿದೆ ಎಂದು ಶಾಸಕ ಡಾ. ಮಂತರ್ ಗೌಡ ಹೇಳಿದ್ದಾರೆ.

ಮಡಿಕೇರಿ: ಕರ್ನಾಟಕ ಅಥವಾ ತಮಿಳುನಾಡು ಸರ್ಕಾರ ಆಗಿರಬಹುದು. ಎರಡು ಕೂಡ ಸಿಡಬ್ಲ್ಯೂಆರ್ ಸಿ ನಿಯಮಕ್ಕೆ ಒಳಪಟ್ಟಿದ್ದೇವೆ. ಇಬ್ಬರು ಈ ನಿಯಮಗಳನ್ನು ಪಾಲಿಸಬೇಕು ಸರಿ. ಬರಗಾಲದಲ್ಲಿ ಸುಪ್ರೀಂ ಕೋರ್ಟಿಗೆ ಹೋಗಲು ಅವಕಾಶವಿದೆ. ಸುಪ್ರೀಂ ಕೋರ್ಟಿಗೂ ಮೇಲ್ಮನವಿ ಸಲ್ಲಿಸಲು ಅವಕಾಶವಿದೆ. ಅದನ್ನು ನಾವು ಮಾಡಬೇಕಾಗಿದೆ ಎಂದು ಶಾಸಕ ಡಾ. ಮಂತರ್ ಗೌಡ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊಡಗಿನಲ್ಲಿ ಮಡಿಕೇರಿ, ವಿರಾಜಪೇಟೆ ಭಾಗದಲ್ಲಿ ಉತ್ತಮ ಮಳೆಯಾಗುತ್ತಿದೆ. ಹೀಗಾಗಿ ಹಾರಂಗಿ ಜಲಾಶಯ ತುಂಬಿದೆ. ಒಳಹರಿವು ಹೊರಹರಿವು ಸರಿದೂಗಿಸಿಕೊಂಡು ನದಿಗೆ ನೀರು ಹರಿಸಲಾಗುತ್ತಿದೆ. ಮಡಿಕೇರಿ ಭಾಗದಲ್ಲಿ ಮಳೆ ಜಾಸ್ತಿಯಾಗಿ ಒಂದಿಷ್ಟು ಸಮಸ್ಯೆ ಆಗುತ್ತಿದೆ ಎಂದರು.

ತಮಿಳುನಾಡಿಗೆ ನೀರು ಕೊಡುವುದು ಬಿಡುವುದು ಸರ್ಕಾರಕ್ಕೆ ಬಿಟ್ಟಿದ್ದು. ಆದರೆ ಅದಕ್ಕೂ ಮೊದಲು ಕುಶಾಲನಗರ ತಾಲೂಕು ವ್ಯಾಪ್ತಿಯಲ್ಲಿ ಬರವಿದೆ. ಇಲ್ಲಿನ ಕೆರೆ ಕಟ್ಟೆಗಳ ತುಂಬಿಸುವ ಕೆಲಸವಾಗಲಿ. ಮೊದಲು ನಾಲೆಗಳ ಮೂಲಕ ನೀರು ಹರಿಸಿ ಕೆರೆಕಟ್ಟೆಗಳ ತುಂಬಿಸಲಿ. ನಂತರ ತಮಿಳುನಾಡಿಗೆ ನೀರು ಬಿಡುವ ವಿಚಾರ ಎಂದು ಪರೋಕ್ಷವಾಗಿ ತಮಿಳುನಾಡಿಗೆ ನೀರು ಬಿಡುವುದನ್ನು ಶಾಸಕ ಮಂತರ್ ಗೌಡ ವಿರೋಧಿಸಿದ್ದಾರೆ. ಕೊಡಗಿಗೆ ಸಚಿವ ಸ್ಥಾನದ ಭರವಸೆ: ಸಚಿವ ಸಂಪುಟ ವಿಸ್ತರಣೆ ಫೈನಲ್ ಎನ್ನುತ್ತಿದ್ದಾರೆ. ಈಗ ಅದು ಸೋಮವಾರಕ್ಕೆ ಹೋಗಿದೆ. ಸಚಿವ ಸ್ಥಾನ ಆಕಾಂಕ್ಷಿಗಳ ಪಟ್ಟಿಯನ್ನು ಯಾವ ರೀತಿ ಮಾಡಿದ್ದಾರೋ ಗೊತ್ತಿಲ್ಲ. ಹೈಕಮಾಂಡ್ ರಾಜ್ಯ ನಾಯಕರು ಯಾವ ರೀತಿ ಆಕಾಂಕ್ಷಿಗಳ ಪಟ್ಟಿ ಮಾಡಿದ್ದಾರೋ ಗೊತ್ತಿಲ್ಲ. ಆದರೆ ಈ ಜಿಲ್ಲೆಗೆ ಸಚಿವ ಸ್ಥಾನ ಬೇಕು ಅಂತ ಬೇಡಿಕೆ ಇಟ್ಟಿದ್ದೇವೆ. ಕೊಡುತ್ತಾರೆ ಎನ್ನುವ ಸಂಪೂರ್ಣ ವಿಶ್ವಾಸವೂ ಇದೆ ಎಂದು ತಿಳಿಸಿದರು. ಕೊಡಗಿನ ಭಾಗಕ್ಕೆ ಸಚಿವ ಸ್ಥಾನ ನೀಡಿಲ್ಲ. ರಂಜನ್ ಅವರು ಕೆಲವೇ ತಿಂಗಳ ಅವಧಿಗೆ ಸಚಿವರಾಗಿದ್ದರು. ಅದು ಬಿಟ್ಟರೆ ಮತ್ತೆ ಸಚಿವ ಸ್ಥಾನ ನೀಡಿಲ್ಲ. ಸಚಿವ ಸ್ಥಾನ ನೀಡದಿದ್ದರೆ ಕೊಡಗಿನ ಅಭಿವೃದ್ಧಿ ಬಗ್ಗೆ ಗಂಭೀರ ಚರ್ಚೆಯಾಗಲ್ಲ. ಈ ದೃಷ್ಟಿಯಿಂದ ಒಬ್ಬರಿಗಾದರೂ ಸಚಿವ ಸ್ಥಾನ ನೀಡುವಂತೆ ಕೇಳಿದ್ದೇನೆ ಎಂದರು.

ನಾನು ಬೇರು ಮಟ್ಟದಿಂದ ಪಕ್ಷದಲ್ಲಿ ಬೆಳೆದು ಬಂದವನು. ಯೂತ್ ಕಾಂಗ್ರೆಸ್, ಜಿಪಂ ಸದಸ್ಯನಾಗಿ ಬೆಳೆದು ಬಂದವನು.

ನಾನು ಪಕ್ಷಕ್ಕೆ ತ್ಯಾಗ ಮಾಡಿದ್ದೇನೆ. ಆ ವಿಚಾರದಲ್ಲಿ ಕೇಳುವುದರಲ್ಲಿ ತಪ್ಪಿಲ್ಲ ದೆಹಲಿಗೆ ಹೋಗಿ ಸಚಿವ ಸ್ಥಾನ ಕೇಳಿದ್ದೇನೆ.

ಕೇಳುವುದರಲ್ಲಿ ತಪ್ಪಿಲ್ಲ, ಕೊಡುವುದು ಬಿಡುವುದು ಪಕ್ಷಕ್ಕೆ ಬಿಟ್ಟಿದ್ದು, ಅನುದಾನವನ್ನು ನಾವು ಕೇಳುತ್ತಲೇ ಇರುತ್ತೇವೆ. ಕೇಳಿದ ಕೂಡಲೇ ಎಲ್ಲ ಅನುದಾನ ಕೊಡುವುದಿಲ್ಲ ಅಲ್ಲವೇ ಹಾಗೆಯೇ ಸಚಿವ ಸ್ಥಾನದಲ್ಲೂ ಕೂಡ ಕೊಡುವುದು ಬಿಡುವುದು ಅವರಿಗೆ ಬಿಟ್ಟ ವಿಚಾರ ಎಂದರು.