ಸಮಾಜ ಕಟ್ಟುವಲ್ಲಿ ಸ್ಕೌಟ್ ಗೈಡ್ಸ್ ಮಹತ್ವದ ಪಾತ್ರ ವಹಿಸುತ್ತದೆ: ಪಿಜಿಆರ್‌ ಸಿಂಧ್ಯಾ

| Published : Oct 07 2024, 01:37 AM IST

ಸಮಾಜ ಕಟ್ಟುವಲ್ಲಿ ಸ್ಕೌಟ್ ಗೈಡ್ಸ್ ಮಹತ್ವದ ಪಾತ್ರ ವಹಿಸುತ್ತದೆ: ಪಿಜಿಆರ್‌ ಸಿಂಧ್ಯಾ
Share this Article
  • FB
  • TW
  • Linkdin
  • Email

ಸಾರಾಂಶ

ಚಿಕ್ಕಮಗಳೂರು, ಸುಂದರ ಬದುಕು ಹಾಗೂ ಆರೋಗ್ಯಕರ ಸಮಾಜ ಕಟ್ಟುವಲ್ಲಿ ಸ್ಕೌಟ್ ಮತ್ತು ಗೈಡ್ಸ್‌ನ ಶಿಸ್ತು ಕೌಶಲ್ಯ ಮಹತ್ವದ ಪಾತ್ರ ವಹಿಸುತ್ತದೆ ಎಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ರಾಜ್ಯ ಮುಖ್ಯ ಆಯುಕ್ತ ಪಿ.ಜಿ.ಆರ್. ಸಿಂಧ್ಯಾ ಹೇಳಿದರು.ಭಾರತ್ ಸ್ಕೌಟ್ಸ್ ಮತ್ತು ಗೈಡ್ ಹಾಗೂ ಚಿಕ್ಕಮಗಳೂರು ಜಿಲ್ಲಾ ಸಂಸ್ಥೆಯಿಂದ ನಗರದ ಬಿಜಿಎಸ್ ಮಂಜುನಾಥೇಶ್ವರ ಶಾಲಾ ಆವರಣದಲ್ಲಿ ಆರಂಭಗೊಂಡ 44ನೇ ರಾಜ್ಯ ಮಟ್ಟದ ಕಬ್ ಮತ್ತು ಬುಲ್ ಬುಲ್ ಉತ್ಸವ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ರಾಜ್ಯ ಮಟ್ಟದ ಕಬ್ ಮತ್ತು ಬುಲ್ ಬುಲ್ ಉತ್ಸವ -2024, ಐದು ದಿನಗಳ ಕಾಲ ನಡೆಯಲಿರುವ ಶಿಬಿರ,

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಸುಂದರ ಬದುಕು ಹಾಗೂ ಆರೋಗ್ಯಕರ ಸಮಾಜ ಕಟ್ಟುವಲ್ಲಿ ಸ್ಕೌಟ್ ಮತ್ತು ಗೈಡ್ಸ್‌ನ ಶಿಸ್ತು ಕೌಶಲ್ಯ ಮಹತ್ವದ ಪಾತ್ರ ವಹಿಸುತ್ತದೆ ಎಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ರಾಜ್ಯ ಮುಖ್ಯ ಆಯುಕ್ತ ಪಿ.ಜಿ.ಆರ್. ಸಿಂಧ್ಯಾ ಹೇಳಿದರು.ಭಾರತ್ ಸ್ಕೌಟ್ಸ್ ಮತ್ತು ಗೈಡ್ ಹಾಗೂ ಚಿಕ್ಕಮಗಳೂರು ಜಿಲ್ಲಾ ಸಂಸ್ಥೆಯಿಂದ ನಗರದ ಬಿಜಿಎಸ್ ಮಂಜುನಾಥೇಶ್ವರ ಶಾಲಾ ಆವರಣದಲ್ಲಿ ಆರಂಭಗೊಂಡ 44ನೇ ರಾಜ್ಯ ಮಟ್ಟದ ಕಬ್ ಮತ್ತು ಬುಲ್ ಬುಲ್ ಉತ್ಸವ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಸ್ಕೌಟ್ಸ್ ಚಳವಳಿ, ಇದು ವಿಶ್ವ ಖ್ಯಾತಿ ಪಡೆದ ಯುವ ಜನಾಂಗದ ಕೂಟ. ಇದರ ಉದ್ದೇಶ ಯುವ ಪೀಳಿಗೆಯ ದೈಹಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ ಬೆಳವಣಿಗೆಗೆ ಸಹಾಯಕವಾಗಿದೆ ಎಂದರು.

ಸ್ಕೌಟ್ಸ್ ನಿಯಮ ಪ್ರತಿಯೊಬ್ಬರಿಗೂ ಕೈಲಾದ ಮಟ್ಟಿಗೆ ಸಹಾಯ ಮಾಡುವ ಮೌಲ್ಯ ಹೊಂದಿದೆ. ಉತ್ತಮ ಅನುಭವ ಮತ್ತು ತರಬೇತಿ ಪಡೆ ಯುವ ಅವಕಾಶ ಇಲ್ಲಿದೆ ಎಂದ ಅವರು, 1909 ರಲ್ಲಿ ಬೆಂಗಳೂರಿನ ಬಿಷಪ್ ಕಾಟನ್‌ಮಿಲ್ ಶಾಲೆಯಲ್ಲಿ ಆರಂಭವದ ಸ್ಕೌಟ್ಸ್‌ಗೆ ಮೈಸೂರಿನ ಜಯ ಚಾಮರಾಜೇಂದ್ರ ಒಡೆಯರ್ ನೀಡಿದ ಸಹಕಾರ ಮರೆಯುವಂತಿಲ್ಲ ಎಂದು ಸ್ಮರಿಸಿದರು.ಶಿಬಿರ ಉದ್ಘಾಟಿಸಿ ಮಾತನಾಡಿದ ಜಿಲ್ಲಾಧಿಕಾರಿ ಮೀನಾ ನಾಗರಾಜ್, ಪ್ರಕೃತಿಯಲ್ಲಿ ನಿಂತ ಬೆಟ್ಟ, ಹರಿಯುವ ನದಿ, ಹಾರುವ ಹಕ್ಕಿ, ಅಲೆದಾಡುವ ಪ್ರಾಣಿಗಳ ಪರಿಸರದ ಮಧ್ಯೆ ಪಸರಿಸಿದ ಅನುಭವವನ್ನು ಪಡೆಯುವಂತೆ ಹೇಳಿದ ಜಿಲ್ಲಾಧಿಕಾರಿ, ರಾಜ್ಯದ ವಿವಿಧ ಜಿಲ್ಲೆಗಳಿಂದ ಶಿಕ್ಷಕರು, ವಿದ್ಯಾರ್ಥಿಗಳು ಸೇರಿದಂತೆ ಸುಮಾರು 7 ಸಾವಿರ ಜನರಿಗೆ 5 ದಿನಗಳ ಕಾಲ ನಡೆಯುವ ಉತ್ಸವಕ್ಕೆ ಎಲ್ಲಾ ಅಗತ್ಯ ಸಿದ್ಧತೆಗಳನ್ನು ಉತ್ತಮವಾಗಿ ಏರ್ಪಡಿಸಲಾಗಿದೆ ಎಂದರು.ಬೆಳಗಾವಿ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಉಪ ಕುಲಪತಿ ಪ್ರೊ. ಸಿ.ಎಂ. ತ್ಯಾಗರಾಜ ಮಾತನಾಡಿ, ಭೌದ್ಧಿಕ ಜಗತ್ತನ್ನು ಮೀರಿದ ಜೀವನದ ಆಧ್ಯಾತ್ಮಿಕ ಮೌಲ್ಯ ಹುಡುಕುವ ಬದ್ಧತೆ ವಿದ್ಯಾರ್ಥಿಗಳಿಗೆ ರೂಢಿಸಿಕೊಂಡು ಹಾಗೂ ಶಿಸ್ತು ಕಲಿಯುವ ಒಂದು ಸಾಮಾಜಿಕ ಆಯಾಮ ಇದಾಗಿದೆ. ಸ್ಥಳೀಯ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಶಾಂತಿ ಸೌಹಾರ್ದತೆ ಕಲಿಯಲು ಸ್ಕೌಟ್ ಪ್ರಮುಖ ಪಾತ್ರ ವಹಿಸುತ್ತದೆ. ಮಕ್ಕಳ ಬೌದ್ಧಿಕ ಪ್ರತಿಭೆ ಬೆಳೆಸಲು ಇದು ಉಪಯುಕ್ತ ಎಂದು ಹೇಳಿದರು. ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಮುಖ್ಯ ಆಯುಕ್ತ ಎಂ.ಎನ್. ಷಡಕ್ಷರಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಉಪಾಧ್ಯಕ್ಷ ಎ.ಎನ್. ಮಹೇಶ್, ಜಿಲ್ಲಾ ಆಯುಕ್ತ ಫಣಿರಾಜ್, ಮಮತ ಹಾಗೂ ರಾಜ್ಯದ ವಿವಿಧೆಡೆಯಿಂದ ಆಗಮಿಸಿದ ಜಿಲ್ಲಾ ಆಯುಕ್ತರು ಉಪಸ್ಥಿತರಿದ್ದರು. 6 ಕೆಸಿಕೆಎಂ 4ಚಿಕ್ಕಮಗಳೂರಿನ ಬಿಜಿಎಸ್ ಮಂಜುನಾಥೇಶ್ವರ ಶಾಲಾ ಆವರಣದಲ್ಲಿ ಆರಂಭಗೊಂಡ ರಾಜ್ಯ ಮಟ್ಟದ ಕಬ್ ಮತ್ತು ಬುಲ್ ಬುಲ್ ಉತ್ಸವಕ್ಕೆ ಜಿಲ್ಲಾಧಿಕಾರಿ ಮೀನಾ ನಾಗರಾಜ್‌ ಚಾಲನೆ ನೀಡಿದರು. ಪಿಜಿಆರ್‌ ಸಿಂಧ್ಯಾ, ಎ.ಎನ್‌.ಮಹೇಶ್‌, ಎಂ.ಎನ್‌. ಷಡಕ್ಷರಿ, ಮಮತ ಇದ್ದರು.