ಮೆಚ್ಚುಗೆಗೆ ಪಾತ್ರರಾದ ಸ್ಕೌಟ್ಸ್ ಗೈಡ್ಸ್ ವಿದ್ಯಾರ್ಥಿಗಳು

| Published : Oct 13 2025, 02:00 AM IST

ಮೆಚ್ಚುಗೆಗೆ ಪಾತ್ರರಾದ ಸ್ಕೌಟ್ಸ್ ಗೈಡ್ಸ್ ವಿದ್ಯಾರ್ಥಿಗಳು
Share this Article
  • FB
  • TW
  • Linkdin
  • Email

ಸಾರಾಂಶ

ಭಕ್ತರ ಸುಗಮ ದರ್ಶನಕ್ಕಾಗಿ ಮಕ್ಕಳ ಸೇವೆ ಅತ್ಯಂತ ಮಹತ್ತರ ಪಾತ್ರ ವಹಿಸುತ್ತಿದ್ದು, ಅವರ ನಿಷ್ಠೆ ಮತ್ತು ಶ್ರದ್ಧೆ ಎಲ್ಲರ ಮನ ಗೆದ್ದಿದೆ. ಜಾತ್ರೆಗೆ ಆಗಮಿಸಿರುವ ಭಕ್ತರು ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳ ಸೇವಾ ಮನೋಭಾವವನ್ನು ಶ್ಲಾಘಿಸಿ “ಮಕ್ಕಳ ಈ ರೀತಿಯ ಸೇವೆ ಹಾಸನಾಂಬೆಯ ಆಶೀರ್ವಾದ ಪಡೆದಂತಿದೆ” ಎಂದು ಪ್ರಶಂಸಿಸಿದ್ದಾರೆ. ಭಕ್ತರ ಅಗತ್ಯ ಕ್ಷಣದಲ್ಲೇ ನೆರವಿಗೆ ಧಾವಿಸುವ ಈ ವಿದ್ಯಾರ್ಥಿಗಳ ಸೇವಾ ಮನೋಭಾವ ಜಾತ್ರೆಯ ಶ್ರೇಯಸ್ಸಿಗೆ ಕಾರಣವಾಗಿದ್ದು, ದೇವಾಲಯದ ಆಡಳಿತ ಮಂಡಳಿ ಹಾಗೂ ಜಿಲ್ಲಾಡಳಿತದಿಂದಲೂ ಅವರಿಗೆ ಮೆಚ್ಚುಗೆ ವ್ಯಕ್ತವಾಗಿದೆ.

ಕನ್ನಡಪ್ರಭ ವಾರ್ತೆ ಹಾಸನ

ಹಾಸನಾಂಬೆಯ ಜಾತ್ರೆಯ ೨ನೇ ದಿನದ ಉತ್ಸವದ ವೇಳೆ ಭಕ್ತರ ಸೇವೆಗೆ ತೊಡಗಿರುವ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ತಮ್ಮ ಶ್ರದ್ಧೆ, ನಿಷ್ಠೆ ಮತ್ತು ಸೇವಾ ಮನೋಭಾವದಿಂದ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ರಾಜ್ಯ ಮುಖ್ಯ ಆಯುಕ್ತರಾದ ಪಿ.ಜಿ.ಆರ್. ಸಿಂಧ್ಯಾ ಅವರ ನಿರ್ದೇಶನದಂತೆ, ರಾಜ್ಯ ಸಹ ಕಾರ್ಯದರ್ಶಿ ಎಲ್.ಟಿ. ಲೋಕೇಶ್ ಅವರ ಮಾರ್ಗದರ್ಶನದಲ್ಲಿ ಹಾಗೂ ಜಿಲ್ಲಾ ಕಾರ್ಯದರ್ಶಿ ಪ್ರಿಯಾಂಕ, ಸಂಘಟಕ ಆರ್.ಜಿ. ಗಿರೀಶ್ ಹಾಗೂ ಇತರ ಜಿಲ್ಲಾ ಸ್ಕೌಟ್ಸ್ ಅಂಡ್ ಗೈಡ್ಸ್ ನಾಯಕರ ಸಹಕಾರದೊಂದಿಗೆ ಈ ರಾಜ್ಯ ಮಟ್ಟದ ಸೇವಾ ಶಿಬಿರ ಯಶಸ್ವಿಯಾಗಿ ನಡೆಯುತ್ತಿದೆ. ಈ ಶಿಬಿರದಡಿಯಲ್ಲಿ ಎರಡು ಪಾಳಿಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ವಿದ್ಯಾರ್ಥಿಗಳು ದೇವಾಲಯದ ಸುತ್ತಮುತ್ತ ಭಕ್ತರಿಗೆ ಅತ್ಯವಶ್ಯಕ ಸೇವೆಗಳನ್ನು ಸಲ್ಲಿಸುತ್ತಿದ್ದಾರೆ. ಭಕ್ತರು ಸರತಿ ಸಾಲಿನಲ್ಲಿ ಸಾಗುವಾಗ ಅವರಿಗೆ ಕುಡಿಯುವ ನೀರು ವಿತರಿಸುವುದು, ವಿಶೇಷ ಚೇತನರು ಹಾಗೂ ವಯೋವೃದ್ಧರನ್ನು ಗಾಲಿ ಕುರ್ಚಿಗಳಲ್ಲಿ ಕೂರಿಸಿ ದೇವಿಯ ದರ್ಶನ ಮಾಡಿಸುವುದು, ಸಾಲಿನಲ್ಲಿ ಕಾಯುವ ಭಕ್ತರನ್ನು ಸಮಾಧಾನಪಡಿಸುವುದು, ಪ್ರಸಾದ ಕೌಂಟರ್‌ನಲ್ಲಿ ಪ್ರಸಾದ ವಿತರಿಸುವುದು, ಆಹಾರ ಪೋಲಾಗದಂತೆ ನಿಯಂತ್ರಿಸುವುದು ಮುಂತಾದ ಕೆಲಸಗಳಲ್ಲಿ ಅವರು ಅಪಾರ ಉತ್ಸಾಹದಿಂದ ತೊಡಗಿದ್ದಾರೆ.

ಭಕ್ತರ ಸುಗಮ ದರ್ಶನಕ್ಕಾಗಿ ಮಕ್ಕಳ ಸೇವೆ ಅತ್ಯಂತ ಮಹತ್ತರ ಪಾತ್ರ ವಹಿಸುತ್ತಿದ್ದು, ಅವರ ನಿಷ್ಠೆ ಮತ್ತು ಶ್ರದ್ಧೆ ಎಲ್ಲರ ಮನ ಗೆದ್ದಿದೆ. ಜಾತ್ರೆಗೆ ಆಗಮಿಸಿರುವ ಭಕ್ತರು ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳ ಸೇವಾ ಮನೋಭಾವವನ್ನು ಶ್ಲಾಘಿಸಿ “ಮಕ್ಕಳ ಈ ರೀತಿಯ ಸೇವೆ ಹಾಸನಾಂಬೆಯ ಆಶೀರ್ವಾದ ಪಡೆದಂತಿದೆ” ಎಂದು ಪ್ರಶಂಸಿಸಿದ್ದಾರೆ. ಭಕ್ತರ ಅಗತ್ಯ ಕ್ಷಣದಲ್ಲೇ ನೆರವಿಗೆ ಧಾವಿಸುವ ಈ ವಿದ್ಯಾರ್ಥಿಗಳ ಸೇವಾ ಮನೋಭಾವ ಜಾತ್ರೆಯ ಶ್ರೇಯಸ್ಸಿಗೆ ಕಾರಣವಾಗಿದ್ದು, ದೇವಾಲಯದ ಆಡಳಿತ ಮಂಡಳಿ ಹಾಗೂ ಜಿಲ್ಲಾಡಳಿತದಿಂದಲೂ ಅವರಿಗೆ ಮೆಚ್ಚುಗೆ ವ್ಯಕ್ತವಾಗಿದೆ. ಜಾತ್ರೆಯ ಭಕ್ತಿಭಾವದ ವಾತಾವರಣದ ಮಧ್ಯೆ ಸ್ಕೌಟ್ಸ್, ಗೈಡ್ಸ್ ವಿದ್ಯಾರ್ಥಿಗಳ ಶ್ರಮ ಮತ್ತು ನಿಷ್ಠೆ ನಿಜಕ್ಕೂ ಮಾದರಿಯಾಗಿದೆ. ಇದೇ ವೇಳೆ ಸ್ಕೌಟ್ಸ್ ಮತ್ತು ಗೈಡ್ಸ್ ಸಹಾಯಕ ರಾಜ್ಯ ಕಾರ್ಯದರ್ಶಿ ಲೋಕೇಶ್ ಮಾಧ್ಯಮದೊಂದಿಗೆ ಮಾತನಾಡಿ, ಹಾಸನಾಂಬೆ ದೇವಿ ಸೇವೆಗಾಗಿ ಬಂದಿದ್ದು, ಮೊದಲ ದಿವಸದಂದು ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯಿಂದ ಮೊದಲ ಬ್ಯಾಚ್‌ನಲ್ಲಿ ೭೦೦ ಜನರು ಸೇವೆ ಸಲ್ಲಿಸುತ್ತಿದ್ದಾರೆ. ರಾಜ್ಯ ಮುಖ್ಯ ಆಯುಕ್ತರಾದ ಪಿ.ಜಿ.ಆರ್‌. ಸಿಂಧ್ಯಾರವರು ಈ ಸೇವೆ ಮಾಡಲು ನಿಯೋಜಿಸಿದ್ದಾರೆ. ಈ ಸೇವೆ ಭಕ್ತರಿಗೆ ಸುವ್ಯವಸ್ಥೆ ದರ್ಸನಕ್ಕೆ ಅವಕಾಶ ಮಾಡಿಕೊಡಲಾಗಿದೆ. ವಿಲಚೇತನರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ. ೨೭ ಕೌಟರ್‌ನಲ್ಲಿ ಸೇವೆ, ಸ್ವಚ್ಛತೆ, ಲಾಡು ಪ್ರಸಾದ, ಊಟದ ವ್ಯವಸ್ಥೆಯಲ್ಲಿ ಸೇರಿದಂತೆ ವಿವಿಧ ಭಾಗಗಳಲ್ಲಿ ಸೇವೆ ಸಲ್ಲಿಸುತ್ತಿರುವುದಾಗಿ ಹೇಳಿದರು.ಏಕಲವ್ಯ ಓಪನ್ ಗ್ರೂಪ್ ಮುಖಂಡ ಆರ್‌.ಜಿ. ಗಿರೀಶ್ ಮಾತನಾಡಿ, ಹಾಸನಾಂಬೆ ತಾಯಿ ಮತ್ತು ಶ್ರೀ ಸಿದ್ದೇಶ್ವರ ದೇವರ ದರ್ಶನಕ್ಕೆ ಜಿಲ್ಲಾಡಳಿತ ಅತ್ಯುತ್ತಮವಾಗಿ ವ್ಯವಸ್ಥೆ ಮಾಡಿದೆ. ಸರದಿ ಸಾಲಿನಲ್ಲಿ ಬರುವ ಭಕ್ತರಿಗೆ ಸೇವೆ ಒದಗಿಸಲಾಗುತ್ತಿದೆ. ಹಲವಾರು ಸೇವೆ ಸಹ ಕೊಡಲಾಗುತ್ತಿದೆ. ಜಿಲ್ಲಾಡಳಿತವು ಭಕ್ತರಿಗೆ ಉತ್ತಮ ಸೌಕರ್ಯ ಸಲ್ಪಿಸಿರುವುದಾಗಿ ಹೇಳಿದರು.