ಸಾರಾಂಶ
ಎಸ್ಸಿ, ಎಸ್ಟಿ ಸಮುದಾಯಗಳ ಬೇಡಿಕೆ ಹಾಗೂ ಕುಂದು- ಕೊರತೆಗಳ ಸಭೆ ನಡೆಯಿತು.
ಮುಂಡಗೋಡ: ಎಸ್ಸಿ, ಎಸ್ಟಿ ಸಮುದಾಯಗಳ ಬೇಡಿಕೆ ಹಾಗೂ ಕುಂದು- ಕೊರತೆಗಳ ಸಭೆ ಇಲ್ಲಿಯ ಮಿನಿ ವಿಧಾನಸೌದ ಸಭಾಂಗಣದಲ್ಲಿ ತಹಶೀಲ್ದಾರ್ ಶಂಕರ್ ಗೌಡಿ ಅಧ್ಯಕ್ಷತೆಯಲ್ಲಿ ನಡೆಯಿತು.
ಈ ವೇಳೆ ಸಮುದಾಯಗಳ ಮುಖಂಡರಾದ ಎಸ್.ಫಕ್ಕೀರಪ್ಪ, ಚಿದಾನಂದ ಹರಿಜನ, ಹನುಮಂತಪ್ಪ ಭಜಂತ್ರಿ, ಅಶೋಕ್ ಛಲವಾದಿ, ಶಾರದಾಬಾಯಿ ರಾಥೋಡ್, ರಮಾಬಾಯಿ ಕುದಳೆ, ಹರೀಶ್ ಭೋವಿ ಸೇರಿದಂತೆ ಅನೇಕ ಮುಖಂಡರು ಸಮುದಾಯಗಳ ಜನ ಎದುರಿಸುತ್ತಿರುವ ಸಮಸ್ಯೆಗಳನ್ನು ಅಧಿಕಾರಿಗಳ ಮುಂದೆ ಪ್ರಸ್ತಾಪಿಸಿದರು, ಮುಖಂಡರ ಅಹವಾಲುಗಳನ್ನು ಆಲಿಸಿ ಬಳಿಕ ಪ್ರತಿಕ್ರಿಯಿಸಿದ ತಹಶೀಲ್ದಾರ್ ಶಂಕರ್ ಗೌಡಿ, ತಮ್ಮ ಬೇಡಿಕೆಗಳ ಕುರಿತಂತೆ ಕಂದಾಯ ಇಲಾಖೆ ವತಿಯಿಂದ ಸೂಕ್ತ ಕ್ರಮ ಕೈಗೊಳ್ಳಲಾಗುವುದಲ್ಲದೇ ಇತರ ಇಲಾಖೆ ಅಧಿಕಾರಿಗಳಿಗೂ ನಿರ್ದೇಶನ ನೀಡಲಾಗುವುದು ಎಂದು ಬರವಸೆ ನೀಡಿದರು.ಪಿ.ಎಸ್.ಐ ಪರಶುರಾಮ ಮಿರ್ಜಗಿ, ಕಾತೂರ ವಲಯ ಅರಣ್ಯಾಧಿಕಾರಿ ವೀರೇಶ್, ಡಿ ಆರ್ ಎಫ್ ಓ ಅರುಣಕುಮಾರ್ ಕಾಶಿ, ಸಮಾಜ ಕಲ್ಯಾಣ ಇಲಾಖೆ ಅಧಿಕಾರು ಬಾಳೇಶ ಸಿದ್ದಯ್ಯನವರ, ರಾಮಚಂದ್ರ, ಕುಮಾರ್ ನಾಯ್ಕ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು. ಸಮಾಜ ಕಲ್ಯಾಣ ಇಲಾಖೆಯ ವ್ಯವಸ್ಥಾಪಕ ಬಾಳೇಶ್ ಸಿದ್ದಯ್ಯನವರ ನಿರೂಪಿಸಿದರು.
ಮುಂಡಗೋಡದ ಮಿನಿ ವಿಧಾನಸೌದ ಸಭಾಂಗಣದಲ್ಲಿ ಕುಂದುಕೊರತೆ ಸಭೆ ನಡೆಯಿತು.