ಎಕ್ಸ್‌ಪೋ ಆಯೋಜಿಸುವಲ್ಲಿ ಹಳೆಯ ವಿದ್ಯಾರ್ಥಿ ಸಂಘದ ಪ್ರಯತ್ನ ಶ್ಲಾಘನೀಯ. ವಿದ್ಯಾರ್ಥಿಗಳಿಗೆ ನೆಟ್ವ್‌ರ್ಕಿಂಗ್ ವೇದಿಕೆಯಾಗಿ ರೂಪಿತವಾಗಿರುವ ಈ ಕಾರ್ಯಕ್ರಮದ ಮಹತ್ವ ಪಡೆದಿದೆ ಎಂದು ಡಾ. ವೀರೇಂದ್ರ ಹೆಗ್ಗಡೆ ಹೇಳಿದರು.
ಧಾರವಾಡ:
ಇಲ್ಲಿಯ ಎಸ್‌ಡಿಎಂ ಎಂಜಿನಿಯರಿಂಗ್ ಕಾಲೇಜಿನ ಎಸ್‌ಡಿಎಂ ಸಿಇಟಿ ಹಳೆಯ ವಿದ್ಯಾರ್ಥಿಗಳ ಸಂಘ ಆಯೋಜಿಸಿದ್ದ ಅಲುಮಿನಿ ಎಕ್ಸ್‌ಪೋವನ್ನು ಹಳೆಯ ವಿದ್ಯಾರ್ಥಿ ಸಾಕೇತ ಶೆಟ್ಟಿ ಉದ್ಘಾಟಿಸಿದರು.ವಿಡಿಯೋ ಸಂದೇಶ ನೀಡಿದ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ, ಎಕ್ಸ್‌ಪೋ ಆಯೋಜಿಸುವಲ್ಲಿ ಹಳೆಯ ವಿದ್ಯಾರ್ಥಿ ಸಂಘದ ಪ್ರಯತ್ನ ಶ್ಲಾಘನೀಯ. ವಿದ್ಯಾರ್ಥಿಗಳಿಗೆ ನೆಟ್ವ್‌ರ್ಕಿಂಗ್ ವೇದಿಕೆಯಾಗಿ ರೂಪಿತವಾಗಿರುವ ಈ ಕಾರ್ಯಕ್ರಮದ ಮಹತ್ವ ಪಡೆದಿದೆ ಎಂದರು.
ಎಸ್‌ಡಿಎಂ ಸೊಸೈಟಿ ಕಾರ್ಯದರ್ಶಿ ಜೀವಂಧರ ಕುಮಾರ, ಈ ಕಾರ್ಯಕ್ರಮ ವಿದ್ಯಾರ್ಥಿಗಳಿಗೆ ಒಂದು ರೀತಿಯ ಮುಕ್ತ ತರಗತಿ. ಹಳೆ ವಿದ್ಯಾರ್ಥಿಗಳು ನಾವೀನ್ಯತೆ ಮತ್ತು ನೆಟ್ವರ್ಕಿಂಗ್ ಮೂಲಕ ಮಹಾವಿದ್ಯಾಲಯದ ವಿದ್ಯಾರ್ಥಿಗಳ ಬೆಳವಣಿಗೆಗೆ ನಿರಂತರವಾಗಿ ಕೊಡುಗೆ ನೀಡುತ್ತಿದ್ದಾರೆ ಎಂದರು.ಉದ್ಯಮಿ ಗುರುದತ್ತ ಪ್ರಭು, ಹಳೆಯ ವಿದ್ಯಾರ್ಥಿಗಳ ಯಶಸ್ಸು ಮತ್ತು ಜೀವನ ವಿಧಾನಕ್ಕೆ ಸಂಸ್ಥೆ ಹೇಗೆ ಕೊಡುಗೆ ನೀಡಿದೆ ಎಂಬುದನ್ನು ಸ್ಮರಿಸಿದರು.
ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಪ್ರೊ. ವಾಸುದೇವ್ ಪರ್ವತಿ ಮಾತನಾಡಿ, ಹಳೆಯ ವಿದ್ಯಾರ್ಥಿಗಳಿಗೆ ಇಂದಿನ ವಿದ್ಯಾರ್ಥಿಗಳನ್ನು ಯಶಸ್ಸಿನತ್ತ ಪ್ರೇರೇಪಿಸುವ ಮತ್ತು ಮಾರ್ಗದರ್ಶನ ನೀಡುವ ಜವಾಬ್ದಾರಿ ಇದೆ. ಆ ನಿಟ್ಟಿನಲ್ಲಿ ಹಳೆ ವಿದ್ಯಾರ್ಥಿಗಳು ಅನುಕರಣೀಯ ವ್ಯಕ್ತಿಗಳು ಎಂದು ಹೇಳಿದರು.ಸಂಚಾಲಕ ಪ್ರದೀಪ್ ದೇಸಾಯಿ, ಕೆ.ಆರ್. ಕುಲಕರ್ಣಿ, ಪ್ರಾಚಾರ್ಯ ಡಾ. ರಮೇಶ ಚಕ್ರಸಾಲಿ, ಡಾ. ಸುನೀಲ ಹೊನ್ನುಂಗರ, ಡಾ. ಜಗದೀಶ ಪೂಜಾರಿ. ಪ್ರಮೋದ ಝಳಕೀಕರ್ ಇದ್ದರು. ಪ್ರೊ. ಕುಶಾಲ್ ಕಪಾಲಿ ಪರಿಚಯಿಸಿದರು, ಶ್ರವಣಕುಮಾರ ನಿರೂಪಿಸಿದರು.