ಉದ್ಯಾವರ ಕುತ್ಪಾಡಿಯ ಎಸ್‌ಡಿಎಂ ಆಯುರ್ವೇದ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ ನಡೆಯುವ ಆಟೋಇಮ್ಯೂನ್ ಅಸ್ವಸ್ಥತೆಗಳಲ್ಲಿ ಟ್ರಾನ್ಸ್‌ಲೇಷನಲ್ ಆಯುರ್ವೇದದ ಕುರಿತಾದ 6 ನೇ ಅಂತರರಾಷ್ಟ್ರೀಯ ಸಮ್ಮೇಳನ -ಕ್ಷಮತ್ವಂ 2026 ಇದರ ಬ್ರೋಷರನ್ನು ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರು ಬಿಡುಗಡೆ ಮಾಡಿದರು.

ಉಡುಪಿ: ಇಲ್ಲಿನ ಉದ್ಯಾವರ ಕುತ್ಪಾಡಿಯ ಎಸ್‌ಡಿಎಂ ಆಯುರ್ವೇದ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ ನಡೆಯುವ ಆಟೋಇಮ್ಯೂನ್ ಅಸ್ವಸ್ಥತೆಗಳಲ್ಲಿ ಟ್ರಾನ್ಸ್‌ಲೇಷನಲ್ ಆಯುರ್ವೇದದ ಕುರಿತಾದ 6 ನೇ ಅಂತರರಾಷ್ಟ್ರೀಯ ಸಮ್ಮೇಳನ - “ಕ್ಷಮತ್ವಂ 2026” ಇದರ ಬ್ರೋಷರನ್ನು ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರು ಬಿಡುಗಡೆ ಮಾಡಿದರು.

ಈ ಪ್ರಯುಕ್ತ ಸಂಸ್ಥೆಯ ಪ್ರಾಚಾರ್ಯೆ ಡಾ. ಮಮತಾ ಕೆ.ವಿ., ಉಪಪ್ರಾಚಾರ್ಯ ಡಾ. ನಾಗರಾಜ್ ಎಸ್., ಮತ್ತು ಕ್ಷಮತ್ವಂ 2026 ರ ಆಯೋಜನಾ ಕಾರ್ಯದರ್ಶಿಯಾದ ಡಾ. ಪ್ರಸನ್ನ ಮೊಗಸಾಲೆ ಅವರು ಧರ್ಮಸ್ಥಳಕ್ಕೆ ತೆರಳಿ ಧರ್ಮಾಧಿಕಾರಿಯವರನ್ನು ಭೇಟಿ ಮಾಡಿದರು. ಡಾ. ವೀರೇಂದ್ರ ಹೆಗ್ಗಡೆಯವರು ತಮ್ಮ ಆಶೀರ್ವಾದವನ್ನು ನೀಡಿ ಸಮ್ಮೇಳನದ ಬ್ರೋಷರ್ ಅನ್ನು ಬಿಡುಗಡೆ ಮಾಡಿ, ಸಮ್ಮೇಳನದ ಯಶಸ್ಸಿಗೆ ಹಾರೈಸಿದರು. ಕ್ಷಮತ್ವಂ 2026 ಸಮ್ಮೇಳನವು ಸೆ 29 ರಿಂದ ಅ 1 ರವರೆಗೆ ನಡೆಯಲಿದ್ದು, ದೇಶ-ವಿದೇಶಗಳ ಪ್ರಮುಖ ವೈದ್ಯರು, ಸಂಶೋಧಕರು ಮತ್ತು ಶಿಕ್ಷಣತಜ್ಞರನ್ನು ಒಂದೆಡೆ ಸೇರಿ ಆಯುರ್ವೇದದ ದೃಷ್ಟಿಕೋನದಿಂದ ಆಟೋಇಮ್ಯೂನ್ ಅಸ್ವಸ್ಥತೆಗಳ ಸಮಗ್ರ ಮತ್ತು ಸಾಕ್ಷ್ಯಾಧಾರಿತ ಚಿಕಿತ್ಸಾ ವಿಧಾನಗಳ ಬಗ್ಗೆ ಚರ್ಚಿಸಲಿದ್ದಾರೆ.