ಮಂಗಳೂರಿನ ಎಸ್‌ಡಿಎಂ ಕಾಲೇಜ್ ಆಫ್ ಬ್ಯುಸಿನೆಸ್ ಮ್ಯಾನೇಜ್‌ಮೆಂಟ್ ಪೋಸ್ಟ್ ಗ್ರ‍್ಯಾಜುಯೇಟ್ ಸೆಂಟರ್ ಫಾರ್ ಮ್ಯಾನೇಜ್‌ಮೆಂಟ್ ಸ್ಟಡೀಸ್ ಆ್ಯಂಡ್ ರಿಸರ್ಚ್ ಇಲ್ಲಿ ದಿನದ ರಾಷ್ಟ್ರೀಯ ಮಟ್ಟದ ಅಂತರ್ ಕಾಲೇಜು ಮ್ಯಾನೇಜ್ಮೆಂಟ್, ಸಾಂಸ್ಕೃತಿಕ ಮತ್ತು ಕ್ರೀಡಾ ಫೆಸ್ಟ್ ‘ಶ್ರೇಷ್ಠ ೨೦೨೬ ಸಾಮ್ರಾಜ್ಯ’ ಇದರ ಸಮಾರೋಪ ಸಮಾರಂಭ ನಡೆಯಿತು.
ಮಂಗಳೂರು: ಮಂಗಳೂರಿನ ಎಸ್‌ಡಿಎಂ ಕಾಲೇಜ್ ಆಫ್ ಬ್ಯುಸಿನೆಸ್ ಮ್ಯಾನೇಜ್‌ಮೆಂಟ್ ಪೋಸ್ಟ್ ಗ್ರ‍್ಯಾಜುಯೇಟ್ ಸೆಂಟರ್ ಫಾರ್ ಮ್ಯಾನೇಜ್‌ಮೆಂಟ್ ಸ್ಟಡೀಸ್ ಆ್ಯಂಡ್ ರಿಸರ್ಚ್ ಇಲ್ಲಿ ದಿನದ ರಾಷ್ಟ್ರೀಯ ಮಟ್ಟದ ಅಂತರ್ ಕಾಲೇಜು ಮ್ಯಾನೇಜ್ಮೆಂಟ್, ಸಾಂಸ್ಕೃತಿಕ ಮತ್ತು ಕ್ರೀಡಾ ಫೆಸ್ಟ್ ‘ಶ್ರೇಷ್ಠ ೨೦೨೬ ಸಾಮ್ರಾಜ್ಯ’ ಇದರ ಸಮಾರೋಪ ಸಮಾರಂಭ ನಡೆಯಿತು.
ಮಂಗಳೂರು ಕೆನರಾ ಬ್ಯಾಂಕ್‌ನ ಡಿಜಿಎಂ ಮತ್ತು ಪ್ರಾದೇಶಿಕ ಮುಖ್ಯಸ್ಥೆ ಲತಾ ಕುರುಪ್ ಮಾತನಾಡಿ, ವಿದ್ಯಾರ್ಥಿಗಳು ಶ್ರೇಷ್ಠತೆಯತ್ತ ನಿರಂತರವಾಗಿ ಪ್ರಯತ್ನಿಸಬೇಕು. ಶ್ರೇಷ್ಠ ಫೆಸ್ಟ್ ಮೂಲಕ ಪಡೆದ ಅನುಭವ ಮತ್ತು ಪಾಠಗಳನ್ನು ಭವಿಷ್ಯದ ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಕರೆ ನೀಡಿದರು.ಬೆಂಗಳೂರು ಹೆಡ್ಜ್‌ಫಂಡ್ ಅಕೌಂಟಿಂಗ್ ಅಧಿಕಾರಿ ನೇಹಾ ಪದ್ಮನಾಭ ಮಾತನಾಡಿ, ಪ್ರತಿಯೊಂದು ಅವಕಾಶವನ್ನು ಸದುಪಯೋಗಪಡಿಸಿಕೊಂಡು, ತಮ್ಮ ಸಾಮರ್ಥ್ಯದ ಮೇಲೆ ನಂಬಿಕೆ ಇಟ್ಟು, ಸಮರ್ಪಣೆ ಮತ್ತು ಆತ್ಮವಿಶ್ವಾಸದೊಂದಿಗೆ ಗುರಿಯತ್ತ ಸಾಗಬೇಕು ಎಂದರು.ಸ್ಪರ್ಧೆಗಳಲ್ಲಿ ಎಸ್‌ಡಿಎಂ ಕಾಲೇಜ್ ಆಫ್ ಬಿಸಿನೆಸ್ ಮ್ಯಾನೇಜ್‌ಮೆಂಟ್ ಸಮಗ್ರ ಚಾಂಪಿಯನ್‌ಶಿಪ್ ಪಟ್ಟ ಅಲಂಕರಿಸಿತು. ಎ.ಜೆ. ಇನ್ಸ್‌ಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ತಂಡ ರನ್ನರ್ ಆಫ್ ಪ್ರಶಸ್ತಿ ಪಡೆದುಕೊಂಡಿತು. ಕಬ್ಬಡಿ ಸ್ಪರ್ಧೆಯಲ್ಲಿ ಎಸ್‌ಡಿಎಂ ಕಾಲೇಜ್ ಉಜಿರೆ ತಂಡ ಸಮಗ್ರ ಚಾಂಪಿಯನ್, ಯೆನಪೋಯ ಯೂನಿರ್ವಸಿಟಿ ಮಂಗಳೂರು ತಂಡ ರನ್ನರ್ಸ್ ಆಫ್ ಸ್ಥಾನ ಪಡೆದುಕೊಂಡಿತು. ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.ಸಂಸ್ಥೆಯ ನಿರ್ದೇಶಕಿ ಡಾ. ಸೀಮಾ ಎಸ್.ಶೆಣೈ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಅಧ್ಯಾಪಕ ಸಂಯೋಜಕಿ ಡಾ.ಹರ್ಷಿತಾ ಕೆ., ವಿದ್ಯಾರ್ಥಿ ಸಂಯೋಜಕರಾದ ಅನ್ಮೋಲ್ ಶೇಟ್, ಸುಶಾಂತ್, ದ್ರುಪದ್ ಎಂ.ಪಿ., ಗುರುಕಿರಣ್ ಇದ್ದರು.