ಸಾರಾಂಶ
ಕಾಲೇಜಿನ ಪ್ರಾಚಾರ್ಯ ಡಾ. ಪ್ರಶಾಂತ್ ಶೆಟ್ಟಿ, ನ್ಯಾಚುರೋಪತಿ ಶಿಕ್ಷಣದ ಮಹತ್ವ ಮತ್ತು ಅದರ ವಿಶಾಲವಾದ ಅವಕಾಶಗಳ ಕುರಿತು ವಿವರಿಸಿದರು. ಉಪಪ್ರಾಚಾರ್ಯ ಡಾ. ಸುಜಾತಾ ಕೆ.ಜೆ., ಹೊಸ ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಸ್ವಾಗತ ಕೋರಿದರು.
ಕನ್ನಡಪ್ರಭ ವಾರ್ತೆ ಬೆಳ್ತಂಗಡಿಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ಮಹಾವಿದ್ಯಾಲಯದ ಈ ವರ್ಷದ ನೂತನ ವಿದ್ಯಾರ್ಥಿಗಳು ಮತ್ತು ಅವರ ಪೋಷಕರಿಗಾಗಿ ಪರಸ್ಪರ ಪರಿಚಯ ಕಾರ್ಯಕ್ರಮ ಶುಕ್ರವಾರ ನಡೆಯಿತು.ಕಾರ್ಯಕ್ರಮವನ್ನು ಮಣಿಪಾಲ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನ ಡೀನ್ ಡಾ. ಜಿ. ಅರುಣ್ ಮಯ್ಯ ಉದ್ಘಾಟಿಸಿದರು.ಕಾಲೇಜಿನ ಪ್ರಾಚಾರ್ಯ ಡಾ. ಪ್ರಶಾಂತ್ ಶೆಟ್ಟಿ, ನ್ಯಾಚುರೋಪತಿ ಶಿಕ್ಷಣದ ಮಹತ್ವ ಮತ್ತು ಅದರ ವಿಶಾಲವಾದ ಅವಕಾಶಗಳ ಕುರಿತು ವಿವರಿಸಿದರು. ಉಪಪ್ರಾಚಾರ್ಯ ಡಾ. ಸುಜಾತಾ ಕೆ.ಜೆ., ಹೊಸ ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಸ್ವಾಗತ ಕೋರಿದರು.ಕಾರ್ಯಕ್ರಮದಲ್ಲಿ ಮೈಸೂರು ವೈದ್ಯಕೀಯ ಕಾಲೇಜಿನ ಪ್ರಾಧ್ಯಾಪಕ ಡಾ. ಎಚ್.ಬಿ. ಶಶಿಧರ್, ಮೈಸೂರು ವೈದ್ಯಕೀಯ ಕಾಲೇಜಿನ ನಿರ್ದೇಶಕ ಡಾ. ಎಚ್.ಎನ್. ದಿನೇಶ್, ಹಳೆ ವಿದ್ಯಾರ್ಥಿ, ಪುಣೆ ಆತ್ಮನಾಥನ್ ವೆಲ್‌ನೆಸ್ ಸೆಂಟರ್‌ನ ಸಿಇಒ ಡಾ. ಮನೋಜ್ ಕುಟ್ಟೇರಿ, ಉಪಸ್ಥಿತರಿದ್ದರು.
ಡಾ. ಬಿಂದು, ಸಂಸ್ಥೆಯ ಬಗೆಗಿನ ಸವಿಸ್ತಾರ ಮಾಹಿತಿ, ಕಾಲೇಜಿನ ಬೋಧಕ ವರ್ಗ ಮತ್ತು ಸಿಬ್ಬಂದಿ ವರ್ಗದವರನ್ನು ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ಪರಿಚಯಿಸಿದರು.ಕಾರ್ಯಕ್ರಮದಲ್ಲಿ ಶ್ರೀ ಧ.ಮ. ಪ್ರಕೃತಿ ಚಿಕಿತ್ಸೆ ಮತ್ತು ಯೋಗ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಶಿವಪ್ರಸಾದ ಶೆಟ್ಟಿ ಉಪಸ್ಥಿತರಿದ್ದರು. ಪ್ರಾಧ್ಯಾಪಕಿ ಡಾ. ಗೀತಾ ಬಿ. ಶೆಟ್ಟಿ ವಂದಿಸಿದರು.