ಎಸ್‌ಡಿಎಂ ರಾಷ್ಟ್ರೀಯ ಮಾಧ್ಯಮ ಪರ್ವ: ಆಳ್ವಾಸ್ ಪತ್ರಿಕೋದ್ಯಮ ವಿಭಾಗ ಚಾಂಪಿಯನ್

| Published : Mar 18 2025, 12:33 AM IST

ಎಸ್‌ಡಿಎಂ ರಾಷ್ಟ್ರೀಯ ಮಾಧ್ಯಮ ಪರ್ವ: ಆಳ್ವಾಸ್ ಪತ್ರಿಕೋದ್ಯಮ ವಿಭಾಗ ಚಾಂಪಿಯನ್
Share this Article
  • FB
  • TW
  • Linkdin
  • Email

ಸಾರಾಂಶ

ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಯತ್ತ ಕಾಲೇಜಿನ ಪತ್ರಿಕೋದ್ಯಮ ಹಾಗೂ ಬಿವೋಕ್ ವಿಭಾಗಗಳು ಜಂಟಿಯಾಗಿ ಆಯೋಜಿಸಿದ್ದ ರಾಷ್ಟ್ರೀಯ ಮಟ್ಟದ ಮಾಧ್ಯಮ ಪರ್ವ-2025ರಲ್ಲಿ ಆಳ್ವಾಸ್ ಸ್ವಾಯತ್ತ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳು ಸಮಗ್ರ ಪ್ರಶಸ್ತಿ ಪಡೆದುಕೊಂಡಿದ್ದಾರೆ.

ಕನ್ನಡಪ್ರಭ ವಾರ್ತೆ ಮೂಡುಬಿದಿರೆ

ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಯತ್ತ ಕಾಲೇಜಿನ ಪತ್ರಿಕೋದ್ಯಮ ಹಾಗೂ ಬಿವೋಕ್ ವಿಭಾಗಗಳು ಜಂಟಿಯಾಗಿ ಆಯೋಜಿಸಿದ್ದ ರಾಷ್ಟ್ರೀಯ ಮಟ್ಟದ ಮಾಧ್ಯಮ ಪರ್ವ-2025ರಲ್ಲಿ ಆಳ್ವಾಸ್ ಸ್ವಾಯತ್ತ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳು ಸಮಗ್ರ ಪ್ರಶಸ್ತಿ ಪಡೆದುಕೊಂಡಿದ್ದಾರೆ.

ಆಳ್ವಾಸ್ ಪತ್ರಿಕೋದ್ಯಮ ವಿದ್ಯಾರ್ಥಿಗಳು ಒಟ್ಟು 4 ವಿಭಾಗದಲ್ಲಿ ಪ್ರಥಮ, ಎರಡು ವಿಭಾಗದಲ್ಲಿ ದ್ವಿತೀಯ ಸ್ಥಾನವನ್ನು ಪಡೆದು ಚಾಂಪಿಯನ್‌ ಪಟ್ಟ ಅಲಂಕರಿಸಿದರು.ವಿದ್ಯಾರ್ಥಿಗಳಾದ ಇಶಿತ್ ಹಾಗೂ ಅಶ್ವಿನ್ ಕ್ರೈಸಿಸ್ ಮ್ಯಾನೇಜ್ಮೆಂಟ್ (ಬಿಕ್ಕಟ್ಟು ನಿರ್ವಹಣೆ)ನಲ್ಲಿ ಪ್ರಥಮ, ಪ್ರಧಾನ್ ಛಾಯಾಗ್ರಹಣದಲ್ಲಿ ಪ್ರಥಮ, ರುಧೀರ್ ಹಾಗೂ ಮಿಯಾರ ಅವರನ್ನು ಒಳಗೊಂಡ ತಂಡ ರಸಪ್ರಶ್ನೆಯಲ್ಲಿ ಪ್ರಥಮ, ರಚನ್, ಸರ್ವೇಶ್, ವಿಶಾಲ್, ದೀಕ್ಷಾ, ಸುರಕ್ಷಾ, ಆಕಾಶ್, ಸುಮಿತ್, ದಿಶಾ, ಪ್ರಗತಿ, ಸ್ವಾತಿ, ರಿಶಾಂತ್, ರಕ್ಷಿತಾ, ಶ್ರೀವಲ್ಲಿ ಅವರ ತಂಡ ವೆರೈಟಿ ಪ್ರದರ್ಶನದಲ್ಲಿ (ವೈವಿಧ್ಯಮಯ ನೃತ್ಯ) ಪ್ರಥಮ ಸ್ಥಾನ ಪಡೆದರು. ವೀಕ್ಷಿತಾ ಹಾಗೂ ರಾಹುಲ್ ಕ್ರಮವಾಗಿ ವರದಿಗಾರಿಕೆ ಹಾಗೂ ರೀಲ್ಸ್ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದು ಸಮಗ್ರ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.

ಉಪನ್ಯಾಸಕ ಸುಧೀಂದ್ರ ಶಾಂತಿ ಹಾಗೂ ಉಪನ್ಯಾಸಕಿ ಹನಾ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕಯಾಗಿ ಸಹಕರಿಸಿದ್ದರು.ವಿದ್ಯಾರ್ಥಿಗಳ ಸಾಧನೆಯನ್ನು ಸಂಸ್ಥೆ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ, ಟ್ರಸ್ಟಿ ವಿವೇಕ್ ಆಳ್ವ, ಪ್ರಾಚಾರ‍್ಯ ಡಾ.ಕುರಿಯನ್ ಅಭಿನಂದಿಸಿದ್ದಾರೆ.