ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರುಅಜ್ಜನ ಮನೆ ಕಲಾ ಪ್ರಪಂಚ ಸಂಸ್ಥೆಯು ಸೆ. 1ರಂದು ಬೆಳಗ್ಗೆ 9.30 ರಿಂದ ವರ್ಷಋತು ವೈಭವ ಜುಗಲ್ ಬಂದಿ ಉತ್ಸವ ಎಂಬ ಉತ್ತರಾದಿ- ದಕ್ಷಿಣಾದಿ ಸಂಗೀತ ಲಾಲಿತ್ಯ ಕಾರ್ಯಕ್ರಮ ಆಯೋಜಿಸಲಾಗಿದೆ.ಕರ್ನಾಟಕ, ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತದ ಜುಗಲ್ ಬಂದಿ ಇಡೀ ದಿನ ನಡೆಯಲಿದ್ದು, ಈ ದೀರ್ಘ ಅವಧಿಯ ಈ ರೀತಿಯ ಕಾರ್ಯಕ್ರಮ ನಗರದಲ್ಲಿ ಇದೇ ಮೊದಲನೆಯದಾಗಿ ನಡೆಯುತ್ತಿದ್ದು, ಎಲ್ಲರಿಗೂ ಉಚಿತ ಪ್ರವೇಶವಿದೆ ಎಂದು ಸಂಸ್ಥೆಯ ಕೃಷ್ಣ ತಿಳಿಸಿದರು.ಬೆಳಗ್ಗೆ 9.15ಕ್ಕೆ ಕಾರ್ಯಕ್ರಮ ಉದ್ಘಾಟನೆಗೊಳ್ಳಲಿದ್ದು, ಎಚ್.ಕೆ. ನರಸಿಂಹಮೂರ್ತಿ, ಜಿ.ಎಸ್. ರಾಮಾನುಜನ್ ಮತ್ತು ವೀರಭದ್ರಯ್ಯ ಹೀರೇಮಠ್ ವಿಶೇಷ ಆಹ್ವಾನಿತರಾಗಿ ಪಾಲ್ಗೊಳ್ಳುವರು.ಅರ್ಚನ ಎಲ್. ರಾವ್ ಅವರಿಂದ ಕರ್ನಾಟಕ ಶಾಸ್ತ್ರೀಯ ಗಾಯನ, ರೋಮಿ ಘೋಶ್ ಅವರಿಂದ ಹಿಂದೂಸ್ತಾನಿ ಶಾಸ್ತ್ರೀಯ ಗಾಯನದೊಡನೆ ಸಂಗೀತ ರಸದೌತಣ ಆರಂಭವಾಗಲಿದೆ. ಇವರ ಜತೆ ಅಚ್ಯುತಾ ರಾವ್, ಸಾಯಿ ಶಿವ ಕೇಶವ, ರೋಮಿ ಘೋಶ್, ನೀತಾ ಅಜೇಯಾ, ಕೌಶಿಕ್ಭಟ್ ಪಾಲ್ಗೊಳ್ಳುವರು.ಬಳಿಕ ಸಮುಂತ್ ಮಂಜುನಾಥ್ ಅವರ ಪಿಟೀಲಿಗೆ, ಸಚಿನ್ ಹಂಪೆ ಸರೋದ್ನಲ್ಲಿ ಜತೆಯಾಗುವರು. ಬಿ. ರವಿಶಂಕರ್ ಅವರ ಮೃದಂಗ ಮತ್ತು ರಮೇಶ್ ದನ್ನೂರ್ ಅವರ ತಬಲ ಜುಗಲ್ಬಂಧಿ ನೀಡುವುದು.ಯೋಗ ಕೀರ್ತನ, ಶುಭದ ಮುಧೋಳ, ಸಿ.ವಿ. ಶ್ರುತಿ, ನಿಕ್ಷಿತ್ ಪುತ್ತೂರ್, ಅರ್ಜುನ್ ಕಾಳಿಪ್ರಸಾದ್, ನೀತಾ ಅಜೇಯ, ರಕ್ಷಿತಾ ರಮೇಶ್, ಸುನಿಲ್ಕುಮಾರ್, ಬಿ.ಎಸ್. ಪ್ರಶಾಂತ್, ಸುನಿಲ್ಕುಮಾರ್, ಬಿ.ಎಸ್. ಪ್ರಶಾಂತ್, ಅರ್ಜುನ್ ಕಾಳಿ ಪ್ರಸಾದ್, ಎಸ್ ಸೌಮ್ಯಾ, ಚಂದನಾ ಮುರಳೀಧರ್, ಸನತ್ ಕುಮಾರ್, ಸೈಬಿ, ಕಾರ್ತಿಕ್ ಪ್ರಣವ್, ಪ್ರಹ್ಲಾದ್ ದೇಶಪಾಂಡೆ, ಗೌರವ್ ಗಡಿಯಾರ್, ಬಾಲಸುಬ್ರಹ್ಮಣ್ಯ, ಕೇಶವ್ ಮೋಹನ್ ಕುಮಾರ್, ನಂದನ್ ಕಶ್ಯಪ್, ಪರಮೇಶ್ವರ್ಹೆಗ್ಡೆ, ಮಾಧುರಿ ಕೌಶಿಕ್, ಶಿವಾನಿ ಮಿರಜ್ಕರ್, ಸಿ.ವಿ. ಶ್ರುತಿ, ಕೌಶಿಕ್ ಶ್ರೀಧರ್, ಗೌರವ್ಗಡಿಯಾರ್, ಶ್ರೀವತ್ಸ ಕೌಲಗಿ ಮೊದಲಾದವರು ಇದ್ದರು.ಸುದ್ದಿಗೋಷ್ಠಿಯಲ್ಲಿ ಸುಮಾ ಕೃಷ್ಣಮೂರ್ತಿ, ರಮೇಶ್ ಇದ್ದರು.