ಸಾರಾಂಶ
ಕನ್ನಡಪ್ರಭ ವಾರ್ತೆ ಕೋಲಾರದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು ಪರೀಕ್ಷೆ ಬರೆದ ೧೩೨೭೧ ಮಂದಿ ಹೊಸ ಅಭ್ಯರ್ಥಿಗಳಲ್ಲಿ ೯೬೧೫ ಮಂದಿ ತೇರ್ಗಡೆಯಾಗುವ ಮೂಲಕ ಜಿಲ್ಲೆಗೆ ೭೨.೪೫ ಫಲಿತಾಂಶ ಲಭ್ಯವಾಗಿದೆ.
ಕೋಲಾರ ಜಿಲ್ಲೆ ಕಳೆದ ಬಾರಿ ಶೇ.೮೬.೧೨ ಫಲಿತಾಂಶದೊಂದಿಗೆ ೧೨ನೇ ಸ್ಥಾನದಲ್ಲಿತ್ತು. ಆದರೆ ಈ ಬಾರಿ ಜಿಲ್ಲೆ ೭೨.೪೫ ಫಲಿತಾಂಶದೊಂದಿಗೆ ೧೬ನೇ ಸ್ಥಾನಕ್ಕೆ ಕುಸಿದಿದೆ.ಜಿಲ್ಲೆಗೆ ಕೀರ್ತಿ ತಂದ ವಿದ್ಯಾರ್ಥಿನಿಯರು
ವಾಣಿಜ್ಯ ವಿಭಾಗದಲ್ಲಿ ನಗರದ ಮಹಿಳಾ ಸಮಾಜ ಕಾಲೇಜಿನ ಎಚ್.ಬಿ.ಭಾರ್ಗವಿ, ವಿಜ್ಞಾನ ವಿಭಾಗದಲ್ಲಿ ಎಸ್‌ಡಿಸಿ ಕಾಲೇಜಿನ ಕಾಲೇಜಿನ ಆರ್.ಸಿರಿ ಹಾಗೂ ಕಲಾ ವಿಭಾಗದಲ್ಲಿ ಕೋಲಾರದ ಬಾಲಕಿಯರ ಪಿಯುಕಾಲೇಜಿನ ಧೈರ್ಯಲಕ್ಷ್ಮಿ ಜಿಲ್ಲೆಗೆ ಮೊದಲಿಗರಾಗಿ ಹೊರಹೊಮ್ಮಿದ್ದಾರೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಅಶೋಕ್ ಕುಮಾರ್ ಭಾವಗಿ ತಿಳಿಸಿದ್ದಾರೆ. ಭಾರ್ಗವಿಗೆ ಮೂರನೇ ರ್‍ಯಾಂಕ್ ವಿಜ್ಞಾನ ವಿಭಾಗದಲ್ಲಿ ಜಿಲ್ಲೆಗೆ ಎಸ್‌ಡಿಸಿ ಕಾಲೇಜಿನ ಆರ್.ಸಿರಿ ೫೯೦ ಅಂಕಗಳೊಂದಿಗೆ ಜಿಲ್ಲೆಗೆ ಟಾಪರ್ ಆಗಿದ್ದಾರೆ, ವಾಣಿಜ್ಯ ವಿಭಾಗದಲ್ಲಿ ಮಹಿಳಾ ಸಮಾಜ ಕಾಲೇಜಿನ ಹೆಚ್.ಬಿ.ಭಾರ್ಗವಿ ೫೯೭ ಅಂಕಗಳೊಂದಿಗೆ ರಾಜ್ಯಕ್ಕೆ ೩ನೇ ರ್‍ಯಾಂಕ್ ಹಾಗೂ ಜಿಲ್ಲೆಗೆ ಟಾಫರ್ ಆಗಿದ್ದಾರೆ. ಹಾಗೆಯೇ ಕಲಾ ವಿಭಾಗದಲ್ಲಿ ಈ ಬಾರಿಯೂ ಕೋಲಾರದ ಬಾಲಕಿಯರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಧೈರ್ಯಲಕ್ಷ್ಮಿ ೫೭೫ ಅಂಕಗಳೊಂದಿಗೆ ಟಾಫರ್ ಆಗಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಎಸ್‌ಡಿಸಿ ಕಾಲೇಜಿನ ಹಾಶೀಕಾ ಲಾನೂರು ೫೯೫ ಅಂಕಗಳೊಂದಿಗೆ ರಾಜ್ಯಕ್ಕೆ ೭ನೇ ರ್‍ಯಾಂಕ್ ಹಾಗೂ ಜಿಲ್ಲೆಗೆ ಎರಡನೇಯವರಾಗಿ ಹೊರಹೊಮ್ಮಿದ್ದಾರೆ.ಕೋಲಾರ ತಾಲೂಕಿನ ಹುದುಕುಳ ಗ್ರಾಮದ ಪುರೋಹಿತರಾದ ಭಾಸ್ಕರ್ ಶಾಸ್ತ್ರೀ ಹಾಗೂ ಸಂಗೀತ ದಂಪತಿಗಳ ಪುತ್ರಿ ಭಾರ್ಗವಿ ನಗರದ ಮಹಿಳಾ ಸಮಾಜ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದಾರೆ. ತಮ್ಮ ಮಗಳನ್ನು ಸಿಎ ಓದಿಸುವ ಉದ್ದೇಶ ಹೊಂದಿರುವ ಭಾಸ್ಕರ್ ಶಾಸ್ತ್ರಿ ಅವರಿಗೆ ಮಗಳ ಸಾಧನೆ ಕಂಡು ಖುಷಿಯಾಗಿದೆ.
ಇನ್ನೂ ರ್‍ಯಾಂಕ್ ಬಂದಿರುವುದು ಖುಷಿಯಾಗಿದೆ, ಅಪ್ಪ-ಅಮ್ಮನ ಮಾರ್ಗದರ್ಶನ, ಕಾಲೇಜಿನ ಶ್ರಮ ನಾನು ರ್‍ಯಾಂಕ್ ಬರಲು ಸಾಧ್ಯವಾಯಿತು. ಇನ್ನೂ ಮುಂದೆ ಸಿಎಸ್ ಮಾಡುವ ಉದ್ದೇಶದಿಂದ ನಾನು ವಾಣಿಜ್ಯ ವಿಭಾಗವನ್ನ ಆಯ್ಕೆ ಮಾಡಿಕೊಂಡಿದ್ದೇನೆ ಅನ್ನೋದು ರ್‍ಯಾಂಕ್ ವಿದ್ಯಾರ್ಥಿನಿ ಭಾರ್ಗವಿ ಮಾತು.ವಿಜ್ಞಾನ: ಸಿರಿ ಜಿಲ್ಲೆಗೆ ಟಾಪರ್ವಿಜ್ಞಾನ ವಿಭಾಗದಲ್ಲಿ ವಿಜ್ಞಾನ ವಿಭಾಗದಲ್ಲಿ ಎಸ್‌ಡಿಸಿ ಕಾಲೇಜಿನ ಕಾಲೇಜಿನ ಆರ್.ಸಿರಿ ೫೯೦ ಅಂಕಗಳೊಂದಿಗೆ ರಾಜ್ಯಕ್ಕೆ ೭ನೇ ರ್‍ಯಾಂಕ್ ಹಾಗೂ ಜಿಲ್ಲೆಗೆ ಟಾಪರ್ ಆಗಿದ್ದಾರೆ. ತಂದೆ ಎಂ.ವಿ.ಎಂ.ರಾಜು ಸ್ವಂತ ಉದ್ಯೋಗ ಹೊಂದಿದ್ದು, ತಾಯಿ ಕೆ.ಎನ್.ವನಿತಾ ಗೃಹಿಣಿಯಾಗಿದ್ದಾರೆ, ಸಿರಿ ವೈದ್ಯಳಾಗುವ ಆಸೆ ಹೊಂದಿದ್ದಾಳೆ. ಕಲಾ ವಿಭಾಗದಲ್ಲಿ ಧೈರ್ಯಲಕ್ಷ್ಮೀ ಪ್ರಥಮ
ಬಾಲಕಿಯರ ಸರ್ಕಾರಿ ಪದವಿ ಕಾಲೇಜಿನ ವಿದ್ಯಾರ್ಥಿನಿ ತಂದೆ ಪೊಲೀಸ್ ಪೇದೆ ಆನಂದಮೂರ್ತಿ ಮತ್ತು ಭಾರತಿ ರವರ ಪುತ್ರಿ ಧೈರ್ಯಲಕ್ಷಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕಲಾವಿಭಾಗದಲ್ಲಿ ೬೦೦ ಅಂಕಗಳಿಗೆ ೫೭೫ ಅಂಕಗಳನ್ನು ಪಡೆದು ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ.ಗ್ರಾಮೀಣರೇ ಮೇಲುಗೈಕಲಾ ವಿಭಾಗದಲ್ಲಿ ೧೨೭೯ ಹೊಸ ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದರು. ಅವರಲ್ಲಿ ೬೮೮ ಮಂದಿ ತೇರ್ಗಡೆಯಾಗಿದ್ದು, ೫೩.೭೯ ಫಲಿತಾಂಶ ಬಂದಿದೆ. ವಾಣಿಜ್ಯ ವಿಭಾಗದಲ್ಲಿ ೬೪೪೯ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ೪೫೯೧ ಮಂದಿ ಉತ್ತೀರ್ಣರಾಗಿ ೭೧.೧೯ ಫಲಿತಾಂಶ ಬಂದಿದೆ. ವಿಜ್ಞಾನ ವಿಭಾಗದಲ್ಲಿ೫೭೬೭ ಮಂದಿ ಹೊಸ ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದು, ಅವರಲ್ಲಿ ೪೩೩೬ ಮಂದಿ ಉತ್ತೀರ್ಣರಾಗುವ ಮೂಲಕ ಶೇ.೭೮.೨೨ ಫಲಿತಾಂಶ ಬಂದಿದೆ.ನಗರ ಪ್ರದೇಶಕ್ಕಿಂತ ಗ್ರಾಮೀಣ ಪ್ರದೇಶ ವಿದ್ಯಾರ್ಥಿಗಳೇ ಉತ್ತಮ ಸಾಧನೆ ಮಾಡಿದ್ದು, ನಗರ ಪ್ರದೇಶದಲ್ಲಿ ಪರೀಕ್ಷೆ ಬರೆದ ೧೦೩೯೪ ಮಂದಿ ಪೈಕಿ ೭೪೯೬ ಮಂದಿ ಉತ್ತೀರ್ಣರಾಗಿ ಶೇ.೭೨.೧೨ ಫಲಿತಾಂಶ ಬಂದಿದೆ ಆದರೆ ಗ್ರಾಮೀಣ ಭಾಗದಲ್ಲಿ ೨೮೭೭ ಮಂದಿ ಪರೀಕ್ಷೆ ಬರೆದಿದ್ದು, ೨೧೧೯ ಮಂದಿ ಉತ್ತೀರ್ಣರಾಗುವ ಮೂಲಕ ಶೇ.೭೩.೬೫ ಫಲಿತಾಂಶ ಲಭ್ಯವಾಗಿದೆ. ಬಾಲಕಿಯರೇ ಮೇಲುಗೈ
ಪರೀಕ್ಷೆ ಬರೆದ ೭೮೫೨ ಬಾಲಕಿಯರಲ್ಲಿ ೫೬೪೧ ಮಂದಿ ತೇರ್ಗಡೆಯಾಗಿ ಶೇ.೭೧.೮೪ ಫಲಿತಾಂಶ ಬಂದಿದೆ. ಇದೇ ರೀತಿ ಬಾಲಕರು ೬೬೩೫ ಮಂದಿ ಪರೀಕ್ಷೆ ಬರೆದಿದ್ದು ೪೧೩೬ ಮಂದಿ ಉತ್ತೀರ್ಣರಾಗಿ ಶೇ.೬೨,೩೪ ಫಲಿತಾಂಶ ಪಡೆಯುವ ಮೂಲಕ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ.