ರಾಮನಗರ: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ನಗರದ ನ್ಯೂ ಎಕ್ಸ್‌ಪರ್ಟ್ ಪದವಿ ಪೂರ್ವ ಕಾಲೇಜಿಗೆ ಶೇಕಡ 98 ಫಲಿತಾಂಶ ಬಂದಿದೆ
ರಾಮನಗರ: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ನಗರದ ನ್ಯೂ ಎಕ್ಸ್‌ಪರ್ಟ್ ಪದವಿ ಪೂರ್ವ ಕಾಲೇಜಿಗೆ ಶೇಕಡ 98 ಫಲಿತಾಂಶ ಬಂದಿದೆ.
2025-26ನೇ ಸಾಲಿನಲ್ಲಿ ಒಟ್ಟು 177 ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದು 34 ವಿದ್ಯಾರ್ಥಿಗಳು ಅತ್ಯುನ್ನತ ದರ್ಜೆ, 26 ವಿದ್ಯಾರ್ಥಿಗಳು ಉನ್ನತ ದರ್ಜೆ, 91 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗಿದ್ದಾರೆ.ವಾಣಿಜ್ಯ ವಿಭಾಗದಲ್ಲಿ ಎಚ್.ಸಿ.ಲಾವಣ್ಯ ಶೇ.98(587), ಎಲ್.ಸಿಂಚನ ಶೇ.98(587) ಪ್ರಥಮ ಸ್ಥಾನ, ಬಿ.ಎಸ್. ಸಂಜನಾ ಶೇ.97.5(585) ದ್ವಿತೀಯ ಸ್ಥಾನ, ವೈಶಾಖ್ ಸಿ.ಗೌಡ ಶೇ.96(577) ಮತ್ತು ಸಿ.ಯಶಸ್ವಿನಿ ಶೇ.96(577) ರಷ್ಟು ಅಂಕದೊಂದಿಗೆ ತೃತೀಯ ಸ್ಥಾನ ಪಡೆದಿದ್ದಾರೆ.
ವಿಜ್ಞಾನ ವಿಭಾಗದಲ್ಲಿ ಎ.ನೇತ್ರಾವತಿ ಶೇ.97(578) ಪ್ರಥಮ ಸ್ಥಾನ, ಹರ್ಷಿತ್ ಗೌಡ ಶೇ.96(572), ಕೆ.ಸಿಂಚನ ಶೇ. 96(572) ದ್ವಿತೀಯ ಸ್ಥಾನ, ಇಂದುಶ್ರೀ ಶೇ.94(564)ರಷ್ಟು ಅಂಕ ಗಳಿಸಿ ತೃತೀಯ ಸ್ಥಾನ ಗಳಿಸಿದ್ದಾರೆ.2017ರಲ್ಲಿ ಆರಂಭವಾದ ನ್ಯೂ ಎಕ್ಸ್‌ಪರ್ಟ್ ಸಮೂಹ ಶಿಕ್ಷಣ ಸಂಸ್ಥೆಯು 10ನೇ ವರ್ಷಕ್ಕೆ ಪಾದರ್ಪಣೆ ಮಾಡುತ್ತಿರುವ ಸಂದರ್ಭದಲ್ಲಿ ದಾಖಲೆಯ ಫಲಿತಾಂಶ ಪಡೆದಿದೆ. ಇದಕ್ಕೆಲ್ಲ ವಿದ್ಯಾರ್ಥಿಗಳ ಶ್ರಮ, ಪೋಷಕರ ನಂಬಿಕೆ ಹಾಗೂ ಉಪನ್ಯಾಸಕರ ಮಾರ್ಗದರ್ಶನ ಕಾರಣವಾಗಿದೆ. ಉತ್ತಮ ಫಲಿತಾಂಶ ಪಡೆದು ಸಂಸ್ಥೆಯ ಕೀರ್ತಿಯನ್ನು ಹೆಚ್ಚಿಸಿದ ಎಲ್ಲಾ ವಿದ್ಯಾರ್ಥಿಗಳು, ಸಂಸ್ಥೆಯ ಆಡಳಿತ ಮಂಡಳಿ, ಪ್ರಾಂಶುಪಾಲರು, ಭೋದಕ ಮತ್ತು ಬೋಧಕ್ಕೆತರ ವರ್ಗದವರನ್ನು ಸಂಸ್ಥೆಯ ಸಂಸ್ಥಾಪಕ ಕಾರ್ಯದರ್ಶಿ ಹಾಗೂ ಪ್ರಾಂಶುಪಾಲರು ಆದ ಡಾ. ಡಿ.ಆರ್.ರವಿಕುಮಾರ್ ಅಭಿನಂದಿಸಿದ್ದಾರೆ.
13ಕೆಆರ್ ಎಂಎನ್ 1,2,3,4,5,6,7,8,9.ಜೆಪಿಜಿ1.ಎಚ್.ಸಿ.ಲಾವಣ್ಯ ಶೇ.98(587)
2.ಎಲ್.ಸಿಂಚನ ಶೇ.98(587)3.ಬಿ.ಎಸ್. ಸಂಜನಾ ಶೇ.97.5(585)
4.ವೈಶಾಖ್ ಸಿ ಗೌಡ ಶೇ.96(577)5.ಸಿ.ಯಶಸ್ವಿನಿ ಶೇ.96(577)
6.ಎ.ನೇತ್ರಾವತಿ ಶೇ.97(578)7.ಹರ್ಷಿತ್ ಗೌಡ ಶೇ.96(572)
8.ಕೆ.ಸಿಂಚನ ಶೇ. 96(572)9.ಇಂದುಶ್ರೀ ಶೇ.94(564)