ಸಾರಾಂಶ
ಕಾರವಾರ: ಉತ್ತರ ಕನ್ನಡ ಜಿಲ್ಲೆಯ ದ್ವಿತೀಯ ಪಿಯುಸಿ ಫಲಿತಾಂಶವು ಪ್ರಸಕ್ತ ವರ್ಷ ಶೇ. ೯೨.೫೧ರಷ್ಟಾಗಿದ್ದು, ರಾಜ್ಯದಲ್ಲಿ ನಾಲ್ಕನೆ ಸ್ಥಾನದಲ್ಲಿದೆ. ಒಟ್ಟೂ ೧೩,೨೩೬ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ೧೨,೨೪೫ ಜನರು ಉತ್ತೀರ್ಣರಾಗಿದ್ದಾರೆ.ಕಲಾ ವಿಭಾಗದಲ್ಲಿ ಶಿರಸಿ ತಾಲೂಕಿನ ಕೊಳಗಿಬೀಸ್‌ನ ಮಹಾಬಲೇಶ್ವರ ಹೆಗಡೆ ಪಿಯು ಕಾಲೇಜಿನ ವಿದ್ಯಾರ್ಥಿನಿ ಅಂಕಿತಾ ಹೆಗಡೆ ಪ್ರಥಮ, ಶಿರಸಿ ಎಂಇಎಸ್ ಪಿಯು ಕಾಲೇಜಿನ ದಿವ್ಯಾ ಗುಣೇಕಾರ ದ್ವೀತಿಯ, ಶಿರಸಿ ಮಾರಿಕಾಂಬಾ ಕಾಲೇಜಿನ ಝೈಂಬಾ ಎಂ. ತೃತೀಯ, ವಾಣಿಜ್ಯ ವಿಭಾಗದಲ್ಲಿ ನೆಲ್ಲಿಕೇರಿ ಸರ್ಕಾರಿ ಕಾಲೇಜಿನ ಧ್ಯಾನ್ ಭಟ್ ಪ್ರಥಮ, ಎಂಇಎಸ್ ಕಾಲೇಜಿನ ಅಮಿತ್ ಹೆಗಡೆ ದ್ವಿತೀಯ, ಎಂಇಎಸ್ ಚೈತನ್ಯ ಕಾಲೇಜಿನ ರಮ್ಯಾ ಹೆಗಡೆ ತೃತೀಯ, ವಿಜ್ಞಾನ ವಿಭಾಗದಲ್ಲಿ ಶಿರಸಿ ಚಂದನ ಕಾಲೇಜಿನ ಸಿಂಚನಾ ಹೆಗಡೆ ಪ್ರಥಮ, ಕುಮಟಾ ಸರಸ್ವತಿ ಕಾಲೇಜಿನ ಯಶಸ್ವಿನಿ ಭಟ್ ದ್ವಿತೀಯ, ಎಂಇಎಸ್ ಕಾಲೇಜಿನ ಸನ್ಮತಿ ಹೆಗಡೆ ಜಿಲ್ಲೆಗೆ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.ವಿಜ್ಞಾನ ವಿಭಾಗದಲ್ಲಿ ಶಿರಸಿ ಚಂದನ ಕಾಲೇಜಿನ ಸಿಂಚನಾ ಹೆಗಡೆ ಪ್ರಥಮ, ಕುಮಟಾ ಸರಸ್ವತಿ ಕಾಲೇಜಿನ ಶ್ರಾವ್ಯಾ ಭಟ್ ದ್ವಿತೀಯ, ಎಂಇಎಸ್‌ನ ಯಶಸ್ವಿನಿ ಭಟ್ ದ್ವಿತೀಯ, ಸನ್ಮತಿ ಹೆಗಡೆ ಜಿಲ್ಲೆಗೆ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.
ಕಳೆದ ವರ್ಷ ಉತ್ತರ ಕನ್ನಡ ಜಿಲ್ಲೆ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶವು ಶೇ. ೮೯.೭೪ರಷ್ಟಾಗಿತ್ತು. ಅಲ್ಲದೇ ಕಳೆದ ಬಾರಿಯೂ ರಾಜ್ಯಮಟ್ಟದ ಫಲಿತಾಂಶದಲ್ಲಿ ನಾಲ್ಕನೇ ಸ್ಥಾನದಲ್ಲಿತ್ತು.ಧ್ಯಾನ ಭಟ್ ರಾಜ್ಯಕ್ಕೆ ತೃತೀಯಕುಮಟಾ: ಇಲ್ಲಿನ ನೆಲ್ಲಿಕೇರಿ ಹನುಮಂತ ಬೆಣ್ಣೆ ಸರ್ಕಾರಿ ಪಿಯು ಕಾಲೇಜಿನ ಫಲಿತಾಂಶ ಅತ್ಯುತ್ತಮವಾಗಿದ್ದು, ವಾಣಿಜ್ಯ ವಿಭಾಗದ ವಿದ್ಯಾರ್ಥಿ ಧ್ಯಾನ ರಾಮಚಂದ್ರ ಭಟ್ಟ ಶೇ. ೯೯.೧೬ ಅಂಕಗಳೊಂದಿಗೆ ರಾಜ್ಯಕ್ಕೆ ತೃತಿಯ ಹಾಗೂ ಉತ್ತರಕನ್ನಡ ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿದ್ದಾರೆ.
ಹೊನ್ನಾವರ ತಾಲೂಕಿನ ನವಿಲಗೋಣ ನಿವಾಸಿ ಸಾಧಾರಣ ಅರ್ಚಕ ಕುಟುಂಬದ ಕುಡಿಯಾದ ಧ್ಯಾನ ಭಟ್ ಸಾಧನೆಗೆ ಸಾರ್ವಜನಿಕರು ಪ್ರಶಂಸಿಸಿದ್ದಾರೆ.ಕಾಲೇಜಿನಲ್ಲಿ ಒಟ್ಟು ೮೮೮ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ೮೦೪ ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಒಟ್ಟಾರೆ ಫಲಿತಾಂಶ ಶೇ. ೯೧ರಷ್ಟಾಗಿದೆ. ೧೩೯ ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಹಾಗೂ ೫೫೭ ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.ಶಿಕ್ಷಕರ ಮಾರ್ಗದರ್ಶನ: ರಾಜ್ಯಕ್ಕೆ ಮೂರನೇ ಸ್ಥಾನದೊಂದಿಗೆ ನನಗೆ ಫಲಿತಾಂಶ ಉತ್ತಮವಾಗಿ ಬಂದಿದ್ದು ಬಹಳ ಸಂತೋಷವಾಗಿದೆ. ಇದಕ್ಕೆ ನಮ್ಮ ಕಾಲೇಜಿನ ಶಿಕ್ಷಕರ ಮಾರ್ಗದರ್ಶನ- ಸಹಕಾರ, ತಂದೆ ತಾಯಿ ಸಹಿತ ಕುಟುಂಬದವರ ಪ್ರೋತ್ಸಾಹವೇ ಕಾರಣ. ಮುಂದೆ ಸಿಎ ಮಾಡುವ ಗುರಿ ಇದೆ ಎಂದು ಧ್ಯಾನ ರಾಮಚಂದ್ರ ಭಟ್ ತಿಳಿಸಿದರು.