ಸಾರಾಂಶ
ಕನ್ನಡಪ್ರಭ ವಾರ್ತೆ ಸಂಕೇಶ್ವರ
ಸ್ಥಳೀಯ ಪುರಸಭೆಯ 2ನೇ ಅವಧಿಗೆ ನೂತನ ಅಧ್ಯಕ್ಷೆಯಾಗಿ ಬಿಜೆಪಿಯ ಸೀಮಾ ಹತನೂರಿ ಪುನರಾಯ್ಕೆಯಾದರೆ, ಉಪಾಧ್ಯಕ್ಷರಾಗಿ ವಿವೇಕ ಕ್ವಳ್ಳಿ ಅವಿರೋಧವಾಗಿ ಆಯ್ಕೆಯಾದರು.ಮಂಗಳವಾರ ನಡೆದ ಚುನಾವಣೆ ಸಭೆಯಲ್ಲಿ ಸಾಮಾನ್ಯ ಮಹಿಳೆಗೆ ಮೀಸಲಿದ್ದ ಅಧ್ಯಕ್ಷ ಸ್ಥಾನಕ್ಕೆ ಸೀಮಾ ಹತನೂರಿ, ಹಿಂದುಳಿದ ಅ ವರ್ಗಕ್ಕೆ ಮೀಸಲಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ವಿವೇಕ ಕ್ವಳ್ಳಿ ಒಬ್ಬೊಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧ ಆಯ್ಕೆಯಾಗಿದ್ದಾರೆ ಎಂದು ತಹಸೀಲ್ದಾರ ಮಂಜುಳಾ ನಾಯಿಕ ಘೋಷಣೆ ಮಾಡಿದರು.
ಬಿಜೆಪಿ 12, ಕಾಂಗ್ರೆಸ್ 9, ಓರ್ವ ಪಕ್ಷೇತರ ಸದಸ್ಯರ ಬಲ ಹೊಂದಿರುವ ಸಂಕೇಶ್ವರ ಪುರಸಭೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಹೊಂದಿರುವ ಹಿನ್ನೆಲೆ ಸುಲಭವಾಗಿ ಅಧಿಕಾರದ ಚುಕ್ಕಾಣಿ ಹಿಡಿಯಿತು.ಸುಳಿಯದ ಕಾಂಗ್ರೆಸ್ ಸದಸ್ಯರು:
ಚುನಾವಣೆ ಪ್ರಕ್ರಿಯೆ ಇದ್ದರೂ ಕಾಂಗ್ರೆಸ್ ನ ಒಬ್ಬ ಸದಸ್ಯರೂ ಪುರಸಭೆಯತ್ತ ಸುಳಿಯದಿರುವುದು ಚರ್ಚೆಗೆ ಗ್ರಾಸವಾಗಿದೆ.ಬಳಿಕ ಶಾಸಕ ಸುದ್ದಿಗಾರರೊಂದಿಗೆ ಮಾತನಾಡಿದ ನಿಖಿಲ್ ಕತ್ತಿ, ಪಕ್ಷದ ಎಲ್ಲ ಸದಸ್ಯರ ಒಮ್ಮತದ ಮೆರೆಗೆ 2ನೇ ಅವಧಿಗೆ ಅಧ್ಯಕ್ಷ-ಉಪಾಧ್ಯಕ್ಷರನ್ನು ಆಯ್ಕೆ ಮಾಡಲಾಗಿದೆ ಎಂದರು. ಪುರಸಭೆ ಸದಸ್ಯರಾದ ಅಮರ ನಲವಡೆ, ಸುನೀಲ ಪರ್ವತರಾವ, ಶಿವಾನಂದ ಮುಡಶಿ, ಅಜಿತ್ ಕರಜಗಿ, ಸಂಜಯ ಶಿರಕೋಳಿ ಸೇರಿದಂತೆ ಇತರರು ಇದ್ದರು. ಸಂಕೇಶ್ವರ ಪಟ್ಟಣದ ಅಭಿವೃದ್ಧಿ ಕುಂಠಿತವಾಗಿದೆ ಎಂಬ ವಿಷಯಕ್ಕೆ ಪ್ರತಿಕ್ರಿಯಿಸಿದ ಶಾಸಕ ನಿಖಿಲ ಕತ್ತಿ, ಗ್ಯಾರಂಟಿ ಯೋಜನೆಗಳ ಪರಿಣಾಮದಿಂದ ರಾಜ್ಯದ ಯಾವುದೇ ಪುರಸಭೆಗೂ ಅನುದಾನ ಬಂದಿಲ್ಲ. ಹೀಗಾಗಿ ರಸ್ತೆ, ಒಳಚರಂಡಿ ಅವ್ಯವಸ್ಥೆ ಮಿತಿಮೀರಿದೆ. ಸರ್ಕಾರ ಅನುದಾನ ಬಿಡುಗಡೆ ಮಾಡಿದರೆ ಮಾತ್ರ ಪಟ್ಟಣದ ಅಭಿವೃದ್ಧಿ ಸಾಧ್ಯವಾಗಲಿದೆ. ಸರ್ಕಾರ ಕೂಡಲೇ ಅನುದಾನ ಬಿಡುಗಡೆ ಮಾಡಬೇಕು. ಪಟ್ಟಣದ ಎಪಿಎಂಸಿಯಲ್ಲಿ ಸೋಯಾಬೀನ್ ಖರೀದಿ ಕೇಂದ್ರ ಶೀಘ್ರ ಪ್ರಾರಂಭಿಸಲಾಗುವುದು.
-ನಿಖಿಲ ಕತ್ತಿ ಶಾಸಕ ಹುಕ್ಕೇರಿ ಮತಕ್ಷೇತ್ರ;Resize=(128,128))
;Resize=(128,128))