ಸೀಮಾ ರಂಜಿತ್‌ಗೆ ಸಂಸ್ಕೃತ ಎಂ.ಎ. ಪ್ರಥಮ ರ್‍ಯಾಂಕ್‌, 13 ಚಿನ್ನದ ಪದಕ

| Published : Jan 23 2025, 12:46 AM IST

ಸೀಮಾ ರಂಜಿತ್‌ಗೆ ಸಂಸ್ಕೃತ ಎಂ.ಎ. ಪ್ರಥಮ ರ್‍ಯಾಂಕ್‌, 13 ಚಿನ್ನದ ಪದಕ
Share this Article
  • FB
  • TW
  • Linkdin
  • Email

ಸಾರಾಂಶ

ಸ್ವರ್ಣವಲ್ಲಿ ಶ್ರೀಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿಗಳ ಮಾರ್ಗದರ್ಶನದಲ್ಲಿ ನಡೆಯುವ ಭಗವದ್ಗೀತಾ ಕಂಠಪಾಠ ಸ್ಪರ್ಧೆಗಳಲ್ಲಿಯೂ ಜಿಲ್ಲಾ ಸ್ತರಕ್ಕೆ ಆಯ್ಕೆಯಾಗಿದ್ದರು. ಕರ್ನಾಟಕದ ಪ್ರತಿಷ್ಠಿತ ರಾಷ್ಟ್ರೋತ್ಥಾನ ಸಂಸ್ಥೆಯ ವಿದ್ಯಾಕೇಂದ್ರಗಳಲ್ಲಿ ಭಾಷಣ ಮಾಡಲು ಅವಕಾಶ ದೊರೆತಿದೆ.

ಕನ್ನಡಪ್ರಭ ವಾರ್ತೆ ಮಂಗಳೂರು

ಕೇರಳದ ಕಾಸರಗೋಡು ಪೆರಿಯ ಗೋಕುಲಂ ಗೋಶಾಲಾ ಪರಂಪರಾ ವಿದ್ಯಾಪೀಠದ ಸದಸ್ಯೆಯಾಗಿರುವ ಸೀಮಾ ರಂಜಿತ್‌ ಅವರು ಮೈಸೂರು ವಿಶ್ವವಿದ್ಯಾನಿಲಯ ಮಾನಸಗಂಗೋತ್ರಿಯಲ್ಲಿ ಸಂಸ್ಕೃತ ಎಂ. ಎ. ಪದವಿ ವ್ಯಾಸಂಗದಲ್ಲಿ ಪ್ರಥಮ ರ್‍ಯಾಂಕ್‌, ಹದಿಮೂರು ಚಿನ್ನದ ಪದಕಗಳು ಹಾಗೂ ಒಂದು ನಗದು ಬಹುಮಾನವನ್ನು ಪಡೆದುಕೊಂಡಿದ್ದಾರೆ. ಕಾಞಂಗಾಡಿನ ಕಾಯರ್ಥಾಯ ಮನೆತನದ ರಂಜಿತ್ ಅವರ ಧರ್ಮಪತ್ನಿಯಾಗಿರುವ ಸೀಮಾ ರಂಜಿತ್, ಅಲಂಕಾರ ಶಾಸ್ತ್ರ, ನ್ಯಾಯ ಶಾಸ್ತ್ರ, ಹಸ್ತಪ್ರತಿ ಶಾಸ್ತ್ರ, ಸಾಂಖ್ಯ ಹಾಗೂ ಚಾರ್ವಾಕ ದರ್ಶನಗಳಲ್ಲಿ ವಿಶ್ವವಿದ್ಯಾಲಯಕ್ಕೆ ಅತೀ ಹೆಚ್ಚು ಅಂಕ ಗಳಿಸಿದ್ದಾರೆ. ಅಲ್ಲದೆ ಜರ್ಮನ್ ಮತ್ತು ರಷ್ಯನ್ ಭಾಷಾ ಪರೀಕ್ಷೆಗಳಲ್ಲಿ ನೂರಕ್ಕೆ ನೂರು ಅಂಕಗಳನ್ನು ಪಡೆದುಕೊಂಡಿದ್ದಾರೆ. ಉತ್ತಮ ಗಾಯಕಿ ಹಾಗೂ ನಿರೂಪಕಿಯಾಗಿರುವ ಸೀಮಾ, ಉತ್ತರ ಕನ್ನಡದ ಕುಮಟಾದ ಕಮಲಾ ಬಾಳಿಗಾ ಕಾಲೇಜಿನಲ್ಲಿ ಬಿ. ಎಡ್. ವ್ಯಾಸಂಗ ಮಾಡಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

ಸ್ವರ್ಣವಲ್ಲಿ ಶ್ರೀಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿಗಳ ಮಾರ್ಗದರ್ಶನದಲ್ಲಿ ನಡೆಯುವ ಭಗವದ್ಗೀತಾ ಕಂಠಪಾಠ ಸ್ಪರ್ಧೆಗಳಲ್ಲಿಯೂ ಜಿಲ್ಲಾ ಸ್ತರಕ್ಕೆ ಆಯ್ಕೆಯಾಗಿದ್ದರು. ಕರ್ನಾಟಕದ ಪ್ರತಿಷ್ಠಿತ ರಾಷ್ಟ್ರೋತ್ಥಾನ ಸಂಸ್ಥೆಯ ವಿದ್ಯಾಕೇಂದ್ರಗಳಲ್ಲಿ ಭಾಷಣ ಮಾಡಲು ಅವಕಾಶ ದೊರೆತಿದೆ.

ಈಕೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದ ಕಳಚೆ ಗ್ರಾಮದ ಶ್ಯಾಮ್ ಹೆಗಡೆ ಮತ್ತು ಶಿಲ್ಪಾ ಹೆಗಡೆ ದಂಪತಿಯ ಪುತ್ರಿ.