ಸಾರಾಂಶ
ಯುಪಿಎಸ್ ಸಿಯಲ್ಲಿ 44ನೇ ರ್‍ಯಾಂಕ್ ಪಡೆದ ಟಿ.ಬಿ.ಕಾರ್ತಿಕ್ ಗೆ ಸನ್ಮಾನ
ಕನ್ನಡಪ್ರಭ ವಾರ್ತೆ, ತರೀಕೆರೆಪಟ್ಟಣದ ಟಿ.ಬಿ.ಕಾರ್ತಿಕ್ ಯುಪಿಎಸ್ ಸಿ ಪರೀಕ್ಷೆಯಲ್ಲಿ 44ನೇ ರ್‍ಯಾಂಕ್ ಪಡೆದು ಲೆಫ್ಟಿನೆಂಟ್ ಹುದ್ದೆಗೆ ಆಯ್ಕೆಯಾಗಿರುವುದು
ಸಂತೋಷದ ವಿಚಾರ ಎಂದು ಪುರಸಭೆ ಅಧ್ಯಕ್ಷ ವಸಂತ ಕುಮಾರ್ ಹೇಳಿದರು.ಪುರಸಭೆಯಿಂದ ನಡೆದ ಟಿ.ಬಿ.ಕಾರ್ತಿಕ್ ಏರ್ಪಡಿಸಿದ್ದ ಸನ್ಮಾನ ಸಮಾರಂಭದಲ್ಲಿ ಮಾತನಾಡಿ ಕಾರ್ತಿಕ್ ಇನ್ನೂ ಉನ್ನತ ಹುದ್ದೆಗೆ ಆಯ್ಕೆಯಾಗಲಿ ಎಂದು ಶುಭ ಕೋರಿದರು.ಪುರಸಭೆ ಸದಸ್ಯ ಟಿ.ಎಂ.ಭೋಜರಾಜ್ ಮಾತನಾಡಿ ಈ ನೆಲದ ಮಣ್ಣಿನ ಮಗ ಕಾರ್ತಿಕ್ ದೇಶದ ಅತ್ಯುನ್ನತ ಹುದ್ದೆಗೆ ಆಯ್ಕೆಯಾಗಿದ್ದಾರೆ. ಅವರಿಗೆ ಜ್ಞಾನದ ಸಂಪತ್ತು ಇದೆ. ದೇಶಕ್ಕಾಗಿ ಅವರು ಕಾಯಕ ಮುಂದುವರಿಸಲಿ, ಪ್ರಧಾನ ಮಂತ್ರಿಗಳ ಜೊತೆಗೆ ಕುಳಿತು ಮಾತನಾಡುವ ಅವಕಾಶ ಬರಬಹುದು. ಚಿಕ್ಕ ವಯಸ್ಸಿಗೆ ದೊಡ್ಡ ಹುದ್ದೆಗೆ ಆಯ್ಕೆಯಾಗಿದ್ದಾರೆ. ಅನ್ನ ಕೊಡುವ ರೈತರು, ದೇಶ ಕಾಯುವ ಸೈನಿಕರು ಇಬ್ಬರು ಜ್ಞಾನದ ಸಾಧನೆಯಾಗಿದೆ.ನೆಲದ ಅಸ್ಮಿತೆಯಾಗಿದೆ ಎಂದು ಶುಭಾಷಯ ಕೋರಿದರು.
ಪುರಸಭೆ ನಾಮಿನಿ ಸದಸ್ಯ ಟಿ.ಜಿ.ಮಂಜುನಾಥ್ ಮಾತನಾಡಿ ಕಾರ್ತಿಕ್ ಅವರ ಪ್ರತಿಭೆಗೆ ಮತ್ತು ಊರಿಗೆ ಸಂದ ಗೌರವವಾಗಿದೆ. ಇವರು ಯುವಕರಿಗೆ ಮಾದರಿಯಾಗಿದ್ದಾರೆ ಎಂದು ಶುಭಾಷಯ ಕೋರಿದರು.ಟಿ.ಬಿ.ಕಾರ್ತಿಕ್ ಸನ್ಮಾನಕ್ಕೆ ಕೃತಜ್ಞತೆ ಅರ್ಪಿಸಿದರು.
ಪುರಸಭೆ ಸದಸ್ಯ ಟಿ.ಜಿ.ಲೋಕೇಶ್, ನಾಮಿನಿ ಸದಸ್ಯ ಅದಿಲ್ ಪಾಷ, ಟಿ.ದಾದಾಪೀರ್, ಗಿರಿಜಾ ಪ್ರಕಾಶ್ ವರ್ಮ, ಮುಖ್ಯಾಧಿಕಾರಿ ಎಚ್.ಪ್ರಶಾಂತ್, ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಅನಿಲ್ ಕುಮಾರ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.-
28ಕೆಟಿಆರ್.ಕೆ.08ಃತರೀಕೆರೆ ಪುರಸಭೆ ಕಾರ್ಯಾಲಯದಿಂದ ಯುಪಿಎಸ್ ಸಿಯಲ್ಲಿ 44ನೇ ರ್‍ಯಾಂಕ್ ಪಡೆದ ಪಟ್ಟಣದ ಟಿ.ಬಿ.ಕಾರ್ತಿಕ್ ಅವರನ್ನುಸನ್ಮಾನಿಸಿ ಗೌರವಿಸಲಾಯಿತು. ಪುರಸಭೆ ಅಧ್ಯಕ್ಷ ವಸಂತಕುಮಾರ್, ಸ್ಥಾಯಿ ಸಮಿತಿ ಅಧ್ಯಕ್ಷ ಅನಿಲ್ ಕುಮಾರ್, ಇದ್ದರು.