ಸಾರಾಂಶ
ಬಾದಾಮಿ: ಬಾಗಲಕೋಟೆಯ ನವನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಈತ್ತೀಚೆಗೆ ನಡೆದ ಜಿಲ್ಲಾ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟದ ಸಾಂಸ್ಕೃತಿಕ ವಿಭಾಗದ ಸ್ಪರ್ಧೆಯಲ್ಲಿ ಬಾದಾಮಿ ತಾಲೂಕಿನ ಚಾಲುಕ್ಯ ಜಾನಪದ ಶಿಕ್ಷಕರ ಬಳಗ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದೆ.
ಬಾದಾಮಿ: ಬಾಗಲಕೋಟೆಯ ನವನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಈತ್ತೀಚೆಗೆ ನಡೆದ ಜಿಲ್ಲಾ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟದ ಸಾಂಸ್ಕೃತಿಕ ವಿಭಾಗದ ಸ್ಪರ್ಧೆಯಲ್ಲಿ ಬಾದಾಮಿ ತಾಲೂಕಿನ ಚಾಲುಕ್ಯ ಜಾನಪದ ಶಿಕ್ಷಕರ ಬಳಗ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದೆ. ಚಾಲುಕ್ಯ ಶಿಕ್ಷಕರ ಬಳಗದ ಸದಸ್ಯರಾದ ಬಿ.ಜಿ.ರೊಟ್ಟಿ, ಬಿ.ವೈ.ಗಚ್ಚನ್ನವರ, ಇಬ್ರಾಹಿಂಸಾಬ ಕಾಖಂಡಕಿ, ಬಿ.ಎನ್.ಬಸರಿ, ಸಹಶಿಕ್ಷಕಿ ಜಯಶ್ರೀ ಜೆ.ಜುಮ್ಮನಗೌಡ್ರ, ಶ್ರೀಶೈಲ ಹಡಪದ, ಯಲ್ಲಪ್ಪ ವೈ.ಹಾವರಗಿ, ಸಹಶಿಕ್ಷಕಿಯರಾದ ಡಿ.ಬಿ. ಹಡಗಲಿ, ಜಯಶ್ರೀ ಆಲೂರ, ಶಂಕ್ರಮ್ಮ ಎನ್. ಕುಬಸದ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. ನಂದಿಕೇಶ್ವರ ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ಬಸಲಿಂಗಪ್ಪ ಜಿ.ರೊಟ್ಟಿ ಕ್ಲಾಸಿಕಲ್ ಸಂಗೀತದಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆಂದು ಸಂಗೀತ ಶಿಕ್ಷಕ ಪ್ರಭು ಚೌಕಿಮಠ ತಿಳಿಸಿದ್ದಾರೆ.