ಸಾರಾಂಶ
ಕನ್ನಡಪ್ರಭ ವಾರ್ತೆ ಹೊಳೆನರಸೀಪುರತಾಲೂಕಿನ ಹಳ್ಳಿಮೈಸೂರು ಹೋಬಳಿಯನ್ನು ಮಾದರಿ ಸೌರಗ್ರಾಮ ಯೋಜನೆ ಅಡಿಯಲ್ಲಿ ಭಾರತ ಸರ್ಕಾರ ಸೌರ ವಿದ್ಯುತ್ ಉತ್ಪಾದನೆಯ ಪಾಲನ್ನು ಹೆಚ್ಚಿಸುವ ನಿಟ್ಟಿನಲ್ಲಿ ಆಯ್ಕೆ ಮಾಡಲಾಗಿದೆ.ಭಾರತ ಸರ್ಕಾರದ ಸೌರ ವಿದ್ಯುತ್ ಉತ್ಪಾದನೆಯ ಸೌರಗ್ರಾಮ ಯೋಜನೆ ಅಡಿಯ ಎಂಎನ್‌ಆರ್‌ಇ ಮಾದರಿ ಸೂಚಿಯಂತೆ ಪ್ರತಿ ಜಿಲ್ಲೆಯಲ್ಲಿ ೫ ಸಾವಿರಕ್ಕಿಂತ ಹೆಚ್ಚಿನ ಜನಸಂಖ್ಯೆ ಹೊಂದಿರುವ ಹಾಲಿ ವಿದ್ಯುತ್ ಜಾಲದಿಂದ ಸಂಪರ್ಕ ಹೊಂದಿರುವ ಕಂದಾಯ ಗ್ರಾಮಗಳು ಸ್ಪರ್ಧಿಸುವ ಅವಕಾಶ ಇರುವುದರಿಂದ ಹೊಳೆನರಸೀಪುರ ತಾಲೂಕಿನ ಹಳ್ಳಿಮೈಸೂರು, ಬೇಲೂರು ತಾಲೂಕಿನ ಹಳೇಬೀಡು, ಚನ್ನರಾಯಪಟ್ಟಣ ತಾಲೂಕಿನ ಶ್ರವಣಬೆಳಗೊಳ ಹಾಗೂ ಹಿರೀಸಾವೆ, ಅರಸೀಕೆರೆ ತಾಲೂಕಿನ ಬಾಣಾವರ, ಜಾವಗಲ್, ಹಾರನಹಳ್ಳಿ, ಮತ್ತು ಅರಕಲಗೂಡು ತಾಲೂಕಿನ ಕೊಣನೂರು ಗ್ರಾಮಗಳನ್ನು ಗುರುತಿಸಲಾಗಿದೆ. ಪೊಟೆನ್ಸಿಯಲ್ ಕ್ಯಾಂಡಿಡೇಟ್ ಗ್ರಾಮಗಳಾಗಿ ಆಯ್ಕೆಯಾಗಿರುವ ಗ್ರಾಮಗಳಿಗೆ ೨೦೨೫ ಜುಲೈ ೧ರಿಂದ ೬ ತಿಂಗಳ ಆವಧಿ (ಡಿಸೆಂಬರ್ ೩೧ರ ತನಕ) ನೀಡಲಾಗಿದ್ದು, ಈ ಅವಧಿಯಲ್ಲಿ ವಿವಿಧ ಯೋಜನೆಗಳನ್ನು ಗರಿಷ್ಠ ಮಟ್ಟದಲ್ಲಿ ಅನುಷ್ಠಾನಗೊಳಿಸಿ ಹೆಚ್ಚಿನ ನವೀಕರಿಸಬಹುದಾದ ಸೌರವಿದ್ಯುತ್ ಉತ್ಪಾದನೆ ಗುರಿ ಸಾಧಿಸುವ ಗ್ರಾಮವನ್ನು ಮಾದರಿ ಸೌರಗ್ರಾಮ ಎಂದು ಆಯ್ಕೆ ಮಾಡಲಾಗುವುದು. ಆಯ್ಕೆಯಾಗುವ ಮಾದರಿ ಸೌರಗ್ರಾಮಕ್ಕೆ ೧ ಕೋಟಿ ರು. ಕೇಂದ್ರಿಯ ಹಣಕಾಸಿನ ಸಹಾಯ (ಸಿಎಫ್‌ಎ) ಅನುದಾನ ನೀಡಲಾಗುವುದು. ಈ ಚಟುವಟಿಕೆಗಳನ್ನು ಆಯಾಯ ಪಂಚಾಯತ್ ಕಾರ್ಯದರ್ಶಿಗಳ ನೇತೃತ್ವದಲ್ಲಿ ಗ್ರಾಮ ಮಟ್ಟದ ಟಾಸ್ಕ್‌ಫೋರ್ಸ್ ಸಮಿತಿ ರಚಿಸಲಾಗುವುದು. ಈ ಹಿನ್ನೆಲೆಯಲ್ಲಿ ಜನಸಾಮಾನ್ಯರು ಹೆಚ್ಚಿನ ಸಂಖ್ಯೆಯಲ್ಲಿ ಕೇಂದ್ರ ಸರ್ಕಾರದಿಂದ ಹೊರಡಿಸಿರುವ ಪಿ.ಎಂ. ಸೂರ್ಯ ಫರ್-ಮುಫ್ತ್ ಬಿಜಲಿ ಯೋಜನೆ, ಕುಸುಮ್-ಬಿ ಮತ್ತು ಸಿ ಯೋಜನೆಗಳ ವಿದ್ಯುತ್ ಸವಲತ್ತುಗಳನ್ನು ಪಡೆಯುವುದು ಹಾಗೂ ಈ ನಿಟ್ಟಿನಲ್ಲಿ ಪಂಚಾಯಿತಿಗಳು ನಿರೀಕ್ಷಿತ ಫಲಾನುಭವಿಗಳು, ಬ್ಯಾಂಕ್‌ಗಳು, ಅನುಮೋದನೆ ಹೊಂದಿರುವ ಮಾರಾಟಗಾರರ ನಡುವೆ ಸಂಪರ್ಕ ಕಲ್ಪಿಸುವುದಾಗಿದೆ.ಸಮಿತಿ ರಚನೆ:
ಹಾಸನ ಜಿಲ್ಲಾ ವ್ಯಾಪ್ತಿಯಲ್ಲಿ ಈ ಯೋಜನೆ ಅನುಷ್ಠಾನಕ್ಕೆ ಮಾರ್ಗಸೂಚಿಯಂತೆ ಸಮಿತಿ ರಚಿಸಲಾಗಿದೆ. ಜಿಲ್ಲಾಧಿಕಾರಿ ಇದರ ಅಧ್ಯಕ್ಷರಾಗಿದ್ದು, ಜಿಲ್ಲಾ ಪಂಚಾಯತ್ ಸಿಇಒ, ತಹಸೀಲ್ದಾರರು, ಚಾವಿಸನಿನಿ ಎಂಜಿನಿಯರ್‌ಗಳು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಇತರರು ಸದಸ್ಯರಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಯೋಜನೆ ವಿವರ:ಪ್ರಧಾನ ಮಂತ್ರಿ ಮುಫ್ತ್ ಬಿಜಲಿ ಯೋಜನೆಯಡಿ ೧ ಕೆವಿ ಸೋಲಾರ್ ಪ್ಯಾನಲ್ ಆಳವಡಿಸಿಕೊಂಡಲ್ಲಿ ೩೦ಸಾವಿರ ರು, ೨ ಕೆವಿ ಸೋಲಾರ್ ಪ್ರಾನಲ್ ಆಳವಡಿಸಿಕೊಂಡಲ್ಲಿ ೬೦ ಸಾವಿರ ರು, ೩ ಕವಿ ಸೋಲಾರ್ ಪ್ಯಾನಲ್ ಅಳವಡಿಸಿಕೊಂಡಲ್ಲಿ ೭೮ ಸಾವಿರ ರು. ಕೇಂದ್ರ ಸರ್ಕಾರದ ಸಹಾಯಧನ ಸಿಗಲಿದೆ.ಕುಸುಮ್-ಬಿ ಯೋಜನೆಯಡಿಯಲ್ಲಿ ಬಿ.ಪಿ ಸಾವರಗಳಿಗೆ ಸೋಲಾರ್ ಮುಖಾಂತರ ವಿದ್ಯುದ್ಧೀಕರಣ ಮಾಡಲು ಕೇಂದ್ರ ಸರ್ಕಾರದ ಶೇ.೩೦, ರಾಜ್ಯ ಸರ್ಕಾರದಿಂದ ಶೇ.೫೦ ಸಹಾಯಧನ ಸೇರಿ ಒಟ್ಟು ಶೇ.೮೦ರಷ್ಟು ಸಬ್ಸಿಡಿ ಸಿಗಲಿದ್ದು, ಉಳಿದ ಶೇ.೨೦ರಷ್ಟು ಹಣವನ್ನು ಗ್ರಾಹಕರಿಂದ ಭರಿಸಬೇಕಿದೆ. ಬೇಸಿಗೆಯಲ್ಲಿ ಹಗಲಿಮ ವೇಳೆ ರೈತರ ಐ.ಪಿ. ಸ್ಥಾವರಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಕುಸುಮ್-ಸಿ ಐ.ಪಿ.ಫೀಡರ್ ಲೆಚಲ್ ಸೊಲಾರೈಸೇಶನ್ ಕಾರ್ಯಕ್ರಮದಡಿ ಪ್ರತಿ ಎಕರೆ ಜಮೀನಿಗೆ ೨೫ ಸಾವಿರ ರು. ಬಾಡಿಗೆ ನೀಡಲಾಗುವುದು (ಶರತ್ತು ಅನ್ವಯ) ಎಂದು ತಿಳಿಸಿದೆ.
ಈ ನಿಟ್ಟಿನಲ್ಲಿ ಸರ್ಕಾರದ ಮಾರ್ಗಸೂಚಿ ಅನುಸಾರ ಅಗತ್ಯ ಸೌಲಭ್ಯಗಳಿಂದ ಕೂಡಿದ ವ್ಯವಸ್ಥಿತ ಸ್ಥಳಾವಕಾಶ ಇರುವ ಗ್ರಾಮೀಣ ಜನರು ಇದರ ಸದುಪಯೋಗ ಪಡೆಯಲು ಹೆಚ್ಚಿನ ಮಾಹಿತಿಗಾಗಿ ಚಾವಿಸನಿನಿ ಉಪ ವಿಭಾಗ ಕಚೇರಿಗೆ ಭೇಟಿ ನೀಡಲು ಹೊಳೆನರಸೀಪುರ ಕಾರ್ಯ ಮತ್ತು ಪಾಲನಾ ಉಪವಿಭಾಗದ ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್ ತಿಳಿಸಿದ್ದಾರೆ.