Selection of new office-bearers for the DSS Parivartanavada faction

ಕನ್ನಡಪ್ರಭ ವಾರ್ತೆ ಹಿರಿಯೂರು

ಕರ್ನಾಟಕ ದಲಿತ ಸಂಘರ್ಷ ಸಮಿತಿ ಪರಿವರ್ತನವಾದ ಸಂಘಟನೆಗೆ ನಗರದ ಆದಿ ಜಾಂಬವ ಭವನದ ಸಭಾಂಗಣದಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಚಿತ್ರದುರ್ಗ ಜಿಲ್ಲಾ ಸಂಘಟನಾ ಸಂಚಾಲಕರಾಗಿ ಬಿ.ಎಸ್. ತಿಪ್ಪೇಸ್ವಾಮಿ, ಚಂದ್ರು ಮಾದಿಗ, ತಿಪ್ಪೇಸ್ವಾಮಿ, ಜಿಲ್ಲಾ ಸಮಿತಿ ಸದಸ್ಯರಾಗಿ ಮಹಾಂತೇಶ್, ರಂಗಸ್ವಾಮಿ ಎಸ್, ಹಿರಿಯೂರು ತಾಲೂಕು ಅಧ್ಯಕ್ಷರಾಗಿ ಜಿ. ಮಂಜುನಾಥ್, ತಾಲೂಕು ಯುವ ಘಟಕದ ಅಧ್ಯಕ್ಷ ಗೋಪಿ, ನಗರಾಧ್ಯಕ್ಷ ಆರ್ ಮಂಜುನಾಥ್, ಕಾರ್ಮಿಕರ ಘಟಕದ ತಾಲೂಕು ಅಧ್ಯಕ್ಷ ರಾಮು ವೆಲ್ಡಿಂಗ್, ತಾಲೂಕು ಸಮಿತಿ ಸದಸ್ಯರಾಗಿ ಮಂಜುನಾಥ್, ಕಾರ್ಯದರ್ಶಿ ಎಂ. ಕುಶಾಲ್, ಸಂಘಟನಾ ಸಂಚಾಲಕ ಅವಿನಾಶ್ ಹೆಚ್. ಆಟೋ ಘಟಕದ ತಾಲೂಕು ಅಧ್ಯಕ್ಷ ಈ ಮಂಜುನಾಥ್, ಐಮಂಗಲ ಹೋಬಳಿ ಅಧ್ಯಕ್ಷ ತಿಮ್ಮರಾಜು ಆರ್.ಜೆಜಿ ಹಳ್ಳಿ ಹೋಬಳಿ ಅಧ್ಯಕ್ಷ ಮಂಜುನಾಥ್ ಇದ್ದಲ, ನಾಗೇನಹಳ್ಳಿ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

ಈ ಸಮಯದಲ್ಲಿ ಬೆಂಗಳೂರು ವಿಭಾಗೀಯ ರಾಜ್ಯಾಧ್ಯಕ್ಷ ಹೆಗ್ಗೆರೆ ಕೆ ಮಂಜುನಾಥ್ ಮಾತನಾಡಿ, ಕರ್ನಾಟಕ ದಲಿತ ಸಂಘರ್ಷ ಸಮಿತಿ ಪರಿವರ್ತನಾವಾದ ಸಂಘಟನೆಯ ಸಿದ್ಧಾಂತದಂತೆ ಹಾಗೂ ಅಂಬೇಡ್ಕರ್, ಬುದ್ಧ, ಬಸವರು ತೋರಿದ ಮಾರ್ಗದ ಅಡಿಯಲ್ಲಿ ದೀನ ದಲಿತರಿಗೆ, ನೊಂದವರಿಗೆ, ಅಶಕ್ತರಿಗೆ ಧ್ವನಿಯಾಗಿ ಕಾರ್ಯ ನಿರ್ವಹಿಸಬೇಕು ಎಂದರು.

ಜಿಲ್ಲಾ ಸಂಘಟನಾ ಸಂಚಾಲಕ ಭರಮಗಿರಿ ಕಣಮಪ್ಪ, ದಲಿತ ಮುಖಂಡರಾದ ಸುರೇಶ್, ರಾಜಣ್ಣ, ಮಹಾಂತೇಶ್ ಹಾಜರಿದ್ದರು.

ಫೋಟೊ

ಕರ್ನಾಟಕ ದಲಿತ ಸಂಘರ್ಷ ಸಮಿತಿ ಪರಿವರ್ತನವಾದ ಸಂಘಟನೆಗೆ ನಗರದ ಆದಿ ಜಾಂಬವ ಭವನದ ಸಭಾಂಗಣದಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.