ಚಾಮರಾಜನಗರ ತಾಲೂಕು ಕುರುಬರ ಸಂಘಕ್ಕೆ ಉಮೇಶ ಆಯ್ಕೆ

| Published : Jul 05 2024, 12:50 AM IST

ಸಾರಾಂಶ

ತಾಲೂಕು ಕುರುಬರ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ಎರಡನೇ ಬಾರಿಗೆ ಸಂಘದ ಅಧ್ಯಕ್ಷರಾಗಿ ಎಸ್‌ಪಿಕೆ ಉಮೇಶ್ ಅವಿರೋಧವಾಗಿ ಆಯ್ಕೆಯಾದರು.

ಕನ್ನಡಪ್ರಭ ವಾರ್ತೆ,

ಚಾಮರಾಜನಗರ

ತಾಲೂಕು ಕುರುಬರ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ

ಎರಡನೇ ಬಾರಿಗೆ ಸಂಘದ ಅಧ್ಯಕ್ಷರಾಗಿ ಎಸ್‌ಪಿಕೆ ಉಮೇಶ್ ಅವಿರೋಧವಾಗಿ ಆಯ್ಕೆ

ಯಾದರು. ನಗರದ ಬಿ. ರಾಚಯ್ಯ ಜೋಡಿ ರಸ್ತೆಯಲ್ಲಿರುವ ಸಂಘದ ಕಚೇರಿ ಸಭಾಂಗಣದಲ್ಲಿ

ಗುರುವಾರ ನಡೆದ ಅಧ್ಯಕ್ಷ ಹಾಗೂ ಪ್ರಮುಖ ಪದಾಧಿಕಾರಿಗಳ ಆಯ್ಕೆ

ಪ್ರಕ್ರಿಯೆಗೆ ಚಾಲನೆ ನೀಡಲಾಯಿತು. ಚುನಾವಣಾಧಿಕಾರಿಯಾಗಿದ್ದ ಕೆ.ಎಂ. ತ್ಯಾಗರಾಜ್ ಪ್ರಸಾದ್ ಅವರು ಪದಾಧಿಕಾರಿಗಳ ಚುನಾವಣೆ ನಡೆಸಿ, ಅವಿರೋಧ ಆಯ್ಕೆಯನ್ನು ಅಧಿಕೃತವಾಗಿ ಘೋಷಣೆ ಮಾಡಿದರು. ಸಭೆಯಲ್ಲಿ ಸಂಘದ ೨೯ ಮಂದಿ ನಿರ್ದೇಶಕರು ಭಾಗವಹಿಸಿ, ಸಹಮತ ವ್ಯಕ್ತಪಡಿಸಿದರು.

ಸಂಘದ ನೂತನ ಅಧ್ಯಕ್ಷ ಎಸ್‌ಪಿಕೆ ಉಮೇಶ್ ಮಾತನಾಡಿ, ಸಂಘದ ಎಲ್ಲಾ ಸದಸ್ಯರು ನಮ್ಮ ಮೇಲೆ ವಿಶ್ವಾಸ ಇಟ್ಟು ಹೆಚ್ಚಾಗಿ ನಮ್ಮ ಬೆಂಬಲಿಗರನ್ನೇ ಗೆಲ್ಲಿಸಿಕೊಟ್ಟ ಪರಿಣಾಮ ಇಂದು ಅವಿರೋಧವಾಗಿ ಆಯ್ಕೆಯಾಗಲು ಸಾಧ್ಯವಾಗಿದೆ. ಸಂಘದ ಎಲ್ಲಾ ನಿರ್ದೇಶಕರಿಗೂ ಸಹ ನಾನು ಅಭಾರಿಯಾಗಿದ್ದು, ಮುಂದಿನ ದಿನಗಳಲ್ಲಿ ಎಲ್ಲರು ಒಗ್ಗಟ್ಟಿನಿಂದ ಸಮಾಜದ ಅಭಿವೃದ್ದಿ ಹಾಗೂ ಸಂಘದ ಪ್ರಗತಿಯನ್ನು ಬಯಸಿ ಮೂರು ವರ್ಷಗಳ ಕಾಲ ಅಭಿವೃದ್ದಿಯತ್ತ ನಮ್ಮ ಚಿತ್ತವನ್ನುಟ್ಟು ಮುನ್ನಡೆಯೋಣ, ಸಿಎಂ ಸಿದ್ದರಾಮಯ್ಯನವರು, ಶಾಸಕರಾದ ಸಿ. ಪುಟ್ಟರಂಗಶೆಟ್ಟಿ, ಸಂಸದರು, ಉಸ್ತುವಾರಿ ಸಚಿವರು ಹಾಗೂ ರಾಜ್ಯದ ಸಚಿವರಿಗೆ ಸಂಘದ ಆಧ್ಯಕ್ಷನಾಗಿ ಅಭಿನಂದಿಸುವ ಸಲ್ಲಿಸುವ ಜೊತೆಗೆ ಸಂಘದ ಬೆಳವಣಿಗೆಗೆ ಪೂರಕವಾಗಿ ಅವರು ಸ್ಪಂದನೆ ಮಾಡುವ ವಿಶ್ವಾಸವನ್ನು ಸಭೆಯಲ್ಲಿ ವ್ಯಕ್ತಪಡಿಸಿದರು.

ಸಮಾಜದ ಪ್ರತಿಯೊಬ್ಬರನ್ನು ಆರ್ಥಿಕವಾಗಿ ಸಬಲರನ್ನಾಗಿಸಲು ಸಹಕಾರ ಸಂಘವನ್ನು ರಚನೆ ಮಾಡಿ, ಆ ಮೂಲಕ ಅವರಿಗೆ ಸಾಲ ಸೌಲಭ್ಯಗಳನ್ನು ನೀಡಿ, ಉದ್ಯಮ ಹಾಗು ವ್ಯವಹಾರಗಳಲ್ಲಿ ಅವರನ್ನು ಆರ್ಥಿಕ ಪ್ರಗತಿಗೊಳಿಸುವುದು, ಕನಕ ಭವನ ಕಲ್ಯಾಣ ಮಂಟಪ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಿ, ಲೋಕಾರ್ಪಣೆ ಮಾಡುವುದು , ನಗರದ ಹೊರ ವಲಯದಲ್ಲಿರುವ ಶಿರಗಳ್ಳಿ ಲಕ್ಷೀದೇವಿ ದೇವಸ್ಥಾನ ಅಭಿವೃದ್ದಿ, ಸಮಾಜದ ಮಕ್ಕಳ ಶಿಕ್ಷಣಕ್ಕೆ ಪ್ರಥಮ ಆದ್ಯತೆ. ರಾಜ್ಯದಲ್ಲಿಯೇ ಕುರುಬರ ಸಂಘ ಮಾದರಿಯನ್ನಾಗಿ ಮಾಡಲು ತಮ್ಮೆಲ್ಲರ ಸಹಕಾರ ಅತ್ಯಗತ್ಯವಾಗಿದೆ ಎಂದು ಉಮೇಶ್ ತಿಳಿಸಿದರು. ಸಂಘದ ನೂತನ ಪದಾಧಿಕಾರಿಗಳ ವಿವರ : ಅಧ್ಯಕ್ಷರಾಗಿ ಎಸ್‌ಪಿಕೆ ಉಮೇಶ್, ಗೌರವ ಅಧ್ಯಕ್ಷರಾಗಿ ಹಳೇಪುರ ಬೆಳ್ಳೇಗೌಡ, ಉಪಾಧ್ಯಕ್ಷರಾಗಿ ಹೆಬಚಳ್ಳಿ ಜಿ. ಮಹೇಶ್, ಪ್ರಧಾನ ಕಾರ್ಯದರ್ಶಿಯಾಗಿ ವಕೀಲ ಕೆ.ಪಿ. ನಾಗರಾಜು, ಸಹಕಾರ್ಯದರ್ಶಿ ಯಾಗಿ ಮಹದೇವಸ್ವಾಮಿ, ಖಜಾಂಚಿಯಾಗಿ ರಾಮಸಮುದ್ರದ ಮಹದೇವಸ್ವಾಮಿ, ಸಂಘಟನಾ ಕಾರ್ಯದರ್ಶಿಗಳಾಗಿ ಗೋವಿಂದ, ಪ್ರಭು, ಕೆ. ಪುನೀತ್‌ಕುಮಾರ್, ಡಿ. ಮಂಜು, ಚನ್ನೇಗೌಡ, ರಾಜೇಶ್ ಅವರು ಅವಿರೋಧವಾಗಿ ಆಯ್ಕೆಯಾದರು. ಸಭೆಯಲ್ಲಿ ನೂತನ ನಿರ್ದೇಶಕರಾದ ಮರಿಸ್ವಾಮಿ, ಜಯರಾಮ್, ಎಂ.ಪಿ.ರಾಜು, ಬಿ. ಮಂಜು, ಶಿವಸ್ವಾಮಿ, ಉಷಾ ಎಸ್, ಜಿ.ನಟರಾಜು, ಕೆ.ಎಸ್.ಕುಮಾರ್, ಚಿಕ್ಕರಾಜು, ಎನ್.ಚಂದ್ರ, ಎಚ್.ಎಂ. ಶಿವಕುಮಾರ್, ಎಂ.ಮಹೇಶ್, ರೇವಣ್ಣ, ರಾಜೇಶ್ ಕೆ. ಬಂಗಾರೇಗೌಡ, ಪಿ. ಬಸವಣ್ಣ, ಮಹದೇವ್, ಶಿವಕುಮಾರ್, ಮಹದೇವಸ್ವಾಮಿ ಹಾಗೂ ಮಾಜಿ ಗೌರವ ಅಧ್ಯಕ್ಷ ಸೋಮಣ್ಣೇಗೌಡ ಮುಖಂಡರು ಹಾಗೂ ಸಮಾಜದ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. -----------------------

4ಸಿಎಚ್ಎನ್‌16ಚಾಮರಾಜನಗರ ತಾಲೂಕು ಕುರುಬರ ಸಂಘದ ನೂತನ ಅಧ್ಯಕ್ಷರಾಗಿ ಎಸ್‌ಪಿಕೆ ಉಮೇಶ್, ಉಪಾಧ್ಯಕ್ಷರಾಗಿ ಜಿ. ಮಹೇಶ್ ಅವಿರೋಧವಾಗಿ ಆಯ್ಕೆಯಾದರು. ---------------------