ತಾಲೂಕಿನಲ್ಲಿ ಬಿಜೆಪಿ ಸಂಘಟನೆ ಬಲವರ್ಧನೆಗೊಳಿಸಲು ನೂತನ ಯುವ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದ್ದು, ಪಕ್ಷ ಸಂಘಟನೆಗೆ ಶಕ್ತಿಮೀರಿ ಶ್ರಮಿಸಬೇಕು. ಹೀಗಾದಲ್ಲಿ ಮುಂಬರುವ ಎಲ್ಲ ಚುನಾವಣೆಗಳಲ್ಲೂ ಬಿಜೆಪಿ ಅಧಿಕಾರ ಚುಕ್ಕಾಣಿ ಹಿಡಿಯಲಿದೆ ಎಂದು ಬಿಜೆಪಿ ಮಂಡಲ ಅಧ್ಯಕ್ಷ ಮರುಳಾರಾಧ್ಯ ಜಗಳೂರಲ್ಲಿ ಹೇಳಿದ್ದಾರೆ.

- ಬಿಜೆಪಿ ಸಂಘಟಿಸಿದಲ್ಲಿ ಎಲ್ಲ ಚುನಾವಣೆಗಳಲ್ಲಿ ಅಧಿಕಾರ: ಮಂಡಲ ಅಧ್ಯಕ್ಷ ಮರುಳಾರಾಧ್ಯ

- - -

ಕನ್ನಡಪ್ರಭ ವಾರ್ತೆ ಜಗಳೂರು

ತಾಲೂಕಿನಲ್ಲಿ ಬಿಜೆಪಿ ಸಂಘಟನೆ ಬಲವರ್ಧನೆಗೊಳಿಸಲು ನೂತನ ಯುವ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದ್ದು, ಪಕ್ಷ ಸಂಘಟನೆಗೆ ಶಕ್ತಿಮೀರಿ ಶ್ರಮಿಸಬೇಕು. ಹೀಗಾದಲ್ಲಿ ಮುಂಬರುವ ಎಲ್ಲ ಚುನಾವಣೆಗಳಲ್ಲೂ ಬಿಜೆಪಿ ಅಧಿಕಾರ ಚುಕ್ಕಾಣಿ ಹಿಡಿಯಲಿದೆ ಎಂದು ಬಿಜೆಪಿ ಮಂಡಲ ಅಧ್ಯಕ್ಷ ಮರುಳಾರಾಧ್ಯ ಹೇಳಿದರು.

ಪಟ್ಟಣದ ಪ್ರತಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣಾಧಿಕಾರಿ ಭೈರಪ್ಪ ಗುಬ್ಬಿ ಸೂಚನೆಯಂತೆ ಮಾಜಿ ಶಾಸಕರಾದ ಎಸ್.ವಿ ರಾಮಚಂದ್ರ, ಎಚ್.ಪಿ ರಾಜೇಶ್, ಜಿಲ್ಲಾಧ್ಯಕ್ಷ ರಾಜಶೇಖರ್ ನಾಗಪ್ಪ ಮಾರ್ಗದರ್ಶನದಲ್ಲಿ ಮಂಡಲದ ವಿವಿಧ ಹುದ್ದೆಗಳನ್ನು ನೀಡಲಾಗಿದೆ ಎಂದರು.

ಪಕ್ಷ ಸಂಘಟಿಸಲು ಉಪಾಧ್ಯಕ್ಷರಾಗಿ ಅರಸಿಕೆರೆ ಪ್ರಶಾಂತ್ ಪಾಟೀಲ್, ಜಗಳೂರು ಹುಲಿಕುಂಟ ಶ್ರೇಷ್ಠಿ, ತುಪ್ಪದಹಳ್ಳಿ ಸಿದ್ದಪ್ಪ, ಯರ್ಲಕಟ್ಟೆ ಎಸ್. ಕುಬೇರಪ್ಪ, ಬಿ.ಎಸ್. ಪ್ರಕಾಶ್ ಗೊಲ್ಲರಹಟ್ಟಿ, ಬಸಪ್ಪನಹಟ್ಟಿ ಆಶಾ ಕೆ.ಟಿ. ಬಡಯ್ಯ, ಪ್ರಧಾನ ಕಾರ್ಯದರ್ಶಿಗಳಾಗಿ ಕಂಬತ್ತಳ್ಳಿ ಕೆ.ಯು. ಮುರುಗೇಶ, ಹುಚ್ಚಂಗಿಪುರ ಧರ್ಮ ನಾಯ್ಕ, ಕಾರ್ಯದರ್ಶಿಗಳಾಗಿ ಸಿ.ಎಂ.ಹೊಳೆ ಎಸ್. ವೀರೇಶ್, ಹ.ಪು. ಗೊಲ್ಲರಹಟ್ಟಿ ಜಿ.ಶಿವಣ್ಣ, ಅಸಗೋಡು ಜೆ.ಎಂ. ರವಿಕುಮಾರ್, ತಮಲೇಹಳ್ಳಿ ಆರ್.ಮಾರುತೇಶ್, ಮಾಗಡಿ ಅ.ಗೊಲ್ಲರಹಟ್ಟಿ ರೂಪಾವತಿ ರಮೇಶ್, ಕೋಶಾಧ್ಯಕ್ಷರಾಗಿ ಜಗಳೂರು ಟೌನ್ ಬಿ.ಎಚ್. ಬಸವರಾಜ್ ಸೇರಿದಂತೆ ೪೮ ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ. ಎಲ್ಲ ಸಮುದಾಯಕ್ಕೆ ಸಾಮಾಜಿಕ ನ್ಯಾಯ ಕಲ್ಪಿಸಲಾಗಿದೆ ಎಂದು ಬಿಜೆಪಿ ಮಂಡಲ ಅಧ್ಯಕ್ಷ ಮರುಳಾರಾಧ್ಯ ಹೇಳಿದರು.

ಪಟ್ಟಣದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಿಂದ ಚಳ್ಳಕೆರೆ ಬೈಪಾಸ್ ರಸ್ತೆಯವರೆಗೂ ಕಳೆದೊಂದು ವರ್ಷಗಳಿಂದಲೂ ರಸ್ತೆ ವಿಸ್ತರಣೆ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದೆ. ತಾಲೂಕು ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಮಳಿಗೆಗಳು ಮರುಹರಾಜು ಪ್ರಕ್ರಿಯೆ ನಡೆಯಬೇಕಾಗಿತ್ತು. ಆದರೆ ತಾಪಂ ಇಒ ಕೆಂಚಪ್ಪ ಹಳೇ ಬಾಡಿಗೆದಾರರನ್ನು ಮುಂದುವರಿಸಿರುವುದು ಖಂಡನೀಯ. ಮರೇನಹಳ್ಳಿ ರಸ್ತೆಯಲ್ಲಿ ನಿರ್ಮಿಸಲು ಮುಂದಾಗಿರುವುದರಿಂದ ಸಮಸ್ಯೆ ಆಗಬಹುದು. ಅಧಿಕಾರಿಗಳು ಕೂಲಂಕುಶವಾಗಿ ಪರಿಶೀಲಿಸಿ ಒಳ್ಳೆಯ ನಿರ್ಧಾರವನ್ನು ತೆಗೆದುಕೊಳ್ಳಬೇಕು ಎಂದರು.

ಈ ಸಂದರ್ಭ ಪ.ಪಂ. ಮಾಜಿ ಅಧ್ಯಕ್ಷ ಜೆ.ವಿ. ನಾಗರಾಜ್, ಪ್ರಧಾನ ಕಾರ್ಯದರ್ಶಿ ಕೆ.ಯು. ಮುರುಗೇಶ್, ಧರ್ಮ ನಾಯ್ಕ ಕಾರ್ಯ, ಉಪಾಧ್ಯಕ್ಷ ಸಿದ್ದಪ್ಪ ಪೂಜಾರಿ ಮಾತನಾಡಿದರು.

ಉಪಾಧ್ಯಕ್ಷರಾದ ಬಿ.ಎಸ್ ಪ್ರಕಾಶ್, ಎಸ್. ಕುಬೇರಪ್ಪ, ಕಾರ್ಯದರ್ಶಿ ಜಿ.ಶಿವಣ್ಣ (ಲ್ಯಾಬ್), ಜೆ.ಎಂ. ರವಿಕುಮಾರ್, ಎಸ್.ವೀರೇಶ್, ಆರ್.ಮಾರುತೇಶ್, ಸತೀಶ್ ನಾಯ್ಕ, ಕೋಶಾಧ್ಯಕ್ಷ ಬಿ.ಎಚ್. ಬಸವರಾಜ್ ಮತ್ತಿತರರು ಇದ್ದರು.

- - -

-22ಜೆ.ಜಿ.ಎಲ್.1:

ಜಗಳೂರು ಪಟ್ಟಣದ ಪ್ರತಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಮರುಳಾರಾಧ್ಯ ಮಾತನಾಡಿದರು.