ಸ್ವಾಥ ಮನೋಭಾವ ಮಕ್ಕಳಿಗೆ ಆಸ್ತಿ ಮಾಡುವ ಪ್ರವೃತ್ತಿ ಹೆಚ್ಚಳ: ಸಾಹಿತಿ ಕೂಡ್ಲೂರು ವೆಂಕಟಪ್ಪ ಬೇಸರ

| Published : Aug 28 2024, 12:47 AM IST

ಸ್ವಾಥ ಮನೋಭಾವ ಮಕ್ಕಳಿಗೆ ಆಸ್ತಿ ಮಾಡುವ ಪ್ರವೃತ್ತಿ ಹೆಚ್ಚಳ: ಸಾಹಿತಿ ಕೂಡ್ಲೂರು ವೆಂಕಟಪ್ಪ ಬೇಸರ
Share this Article
  • FB
  • TW
  • Linkdin
  • Email

ಸಾರಾಂಶ

ಹಿಂದಿನ ಕಾಲದಲ್ಲಿ ನಾಟಕಗಳ ಮೂಲಕ ಜನರಿಗೆ ನ್ಯಾಯ, ನೀತಿ, ಧರ್ಮ ಬಗ್ಗೆ ತಿಳಿಸಿಕೊಡಲಾಗುತ್ತಿತ್ತು. ಆದರೆ, ಇಂದು ಚಲನಚಿತ್ರಗಳು, ಧಾರಾವಾಹಿಗಳು, ಸಾಮಾಜಿಕ ಜಾಲತಾಣಗಳಲ್ಲಿ ಸಮಾಜಕ್ಕೆ ದುಷ್ಪರಿಣಾಮ ಬೀರುವ ಚಿತ್ರಗಳನ್ನು ತೋರಿಸುವ ಮೂಲಕ ಸಮಾಜ ಯಾವ ದಾರಿಯಲ್ಲಿ ಸಾಗುತ್ತಿದೆ ಎಂದು ನಾವೇ ಪ್ರಶ್ನೆ ಮಾಡಿಕೊಳ್ಳಬೇಕಿದೆ.

ಕನ್ನಡಪ್ರಭ ವಾರ್ತೆ ಹಲಗೂರು

ಪ್ರಸ್ತುತ ದಿನಗಳಲ್ಲಿ ಸ್ವಾರ್ಥ ಮನೋಭಾವದಿಂದ ಪೋಷಕರು ಮಕ್ಕಳಿಗಾಗಿ ಆಸ್ತಿ ಮಾಡುವ ಪ್ರವೃತ್ತಿ ಹೆಚ್ಚಾಗುತ್ತಿದೆ ಎಂದು ಸಾಹಿತಿ ಕೂಡ್ಲೂರು ವೆಂಕಟಪ್ಪ ಬೇಸರ ವ್ಯಕ್ತಪಡಿಸಿದರು.

ಸಮೀಪದ ಚೆನ್ನೀಪುರ ಗ್ರಾಮದಲ್ಲಿ ಕರ್ನಾಟಕ ರಂಗ ಪರಿಷತ್ತು ಕೇಂದ್ರ ಸಮಿತಿ ಬೆಂಗಳೂರು ವತಿಯಿಂದ ಆಯೋಜಿಸಿದ್ದ ಎರಡು ದಿನಗಳ ಗ್ರಾಮ ವಿಕಾಸ ನಾಟಕೋತ್ಸವದಲ್ಲಿ ಮಾತನಾಡಿ, ಪೋಷಕರು ಸೇವಾ ಮನೋಭಾವ ರೂಢಿಸಿಕೊಂಡು ಆರೋಗ್ಯಕರ ವಾತಾವರಣ ನಿರ್ಮಿಸುವ ಜೊತೆಗೆ ಮಕ್ಕಳನ್ನು ದೇಶದ ಆಸ್ತಿಯನ್ನಾಗಿ ಮಾಡಬೇಕು ಎಂದು ಸಲಹೆ ನೀಡಿದರು.

ಹಿಂದಿನ ಕಾಲದಲ್ಲಿ ನಾಟಕಗಳ ಮೂಲಕ ಜನರಿಗೆ ನ್ಯಾಯ, ನೀತಿ, ಧರ್ಮ ಬಗ್ಗೆ ತಿಳಿಸಿಕೊಡಲಾಗುತ್ತಿತ್ತು. ಆದರೆ, ಇಂದು ಚಲನಚಿತ್ರಗಳು, ಧಾರಾವಾಹಿಗಳು, ಸಾಮಾಜಿಕ ಜಾಲತಾಣಗಳಲ್ಲಿ ಸಮಾಜಕ್ಕೆ ದುಷ್ಪರಿಣಾಮ ಬೀರುವ ಚಿತ್ರಗಳನ್ನು ತೋರಿಸುವ ಮೂಲಕ ಸಮಾಜ ಯಾವ ದಾರಿಯಲ್ಲಿ ಸಾಗುತ್ತಿದೆ ಎಂದು ನಾವೇ ಪ್ರಶ್ನೆ ಮಾಡಿಕೊಳ್ಳಬೇಕಿದೆ ಎಂದರು.

ಹಳ್ಳಿಗಾಡಿನಲ್ಲಿ ಹೆಚ್ಚಿನ ಪೌರಾಣಿಕ ನಾಟಕಗಳು ನಡೆಯಬೇಕು. ಈ ನಾಟಕಗಳು ನಾಲ್ಕು ಮಕ್ಕಳ ಮನ ಪರಿವರ್ತನೆ ಮಾಡಿದರೆ ಪ್ರದರ್ಶನ ಮಾಡಿದ ಕಲಾವಿದರ ಶ್ರಮ ಸಾರ್ಥಕವಾಗುತ್ತದೆ ಎಂದರು.

ರಂಗಭೂಮಿ ಕಲಾವಿದ ಸುರೇಶ್ ಮಾತನಾಡಿ, ಮಿತಿ ಮೀರಿದ ಪ್ಲಾಸ್ಟಿಕ್ ಬಳಕೆಯಿಂದ ಮನುಷ್ಯರು ಹಲವು ಬಗೆಯ ಮರಾಣಾಂತಿಕ ಕಾಯಿಲೆಗಳಿಂದ ಬಳಲುವ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಮನುಷ್ಯ ತನ್ನ ಅನುಕೂಲಕ್ಕಾಗಿ ಹೆಚ್ಚಾಗಿ ಪ್ಲಾಸ್ಟಿಕ್ ಬಳಕೆ ಮಾಡುತ್ತಿರುವುದರಿಂದ ಅದು ಕಂಟಕವಾಗಿ ಮಾರ್ಪಟ್ಟಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಪ್ರತಿಯೊಬ್ಬರು ಪ್ಲಾಸ್ಟಿಕ್ ಸಿಟಿ ನಾಟಕ ನೋಡಬೇಕು. ಪ್ಲಾಸ್ಟಿಕ್‌ನಿಂದ ಆಗುವ ಅನಾಹುತ ತಿಳಿದರೆ ಇದರಿಂದ ಮನಃ ಪರಿವರ್ತನೆ ಆಗಿ ಪ್ಲಾಸ್ಟಿಕ್ ಬಳಕೆಯಿಂದ ದೂರವಿರುವಂತೆ ಮಾಡಬಹುದು ಎಂದರು.

ಅಂತರಳ್ಳಿ ಎ.ಬಿ.ಚೇತನ್ ಕುಮಾರ್ ಮಾತನಾಡಿ, ಹಿರಿಯರು ನೂರು ವರ್ಷ ಬದುಕುತ್ತಿದ್ದರು. ಈಗಿನ ಯುವ ಪೀಳಿಗೆ 50 ವರ್ಷ ತುಂಬಿಸುವುದೆ ಕಷ್ಟವಾಗಿದೆ. ಇದಕ್ಕೆ ನಾನಾ ತರದ ರೋಗಗಳು ನಮಗೆ ಬರುತ್ತಿದೆ. ಎಲ್ಲದ್ದಕ್ಕೂ ಪ್ಲಾಸ್ಟಿಕ್ ಅತಿ ಹೆಚ್ಚು ಬಳಕೆ ಕಾರಣ. ಪ್ಲಾಸ್ಟಿಕ್ ಬಿಡಿ, ಬಟ್ಟೆ ಬ್ಯಾಗ್ ಬಳಸಿ ಮುಂದೆ ಬರುವ ಮಾರಕ ರೋಗ ದೂರ ಮಾಡುವಂತೆ ಸಲಹೆ ನೀಡಿದರು.

ಬಳ್ಳಾರಿ ಜೆಲ್ಲೆಯ ಸಿರಿಗೇರಿ ಧಾತ್ರಿ ರಂಗ ಸಂಸ್ಥೆಯ ಟಿ.ಎಂ.ವಿಜಯ್ ಕುಮಾರ್ ನೇತೃತ್ವದಲ್ಲಿ ಪ್ಲಾಸ್ಟಿಕ್ ಸಿಟಿ(ಪೊಪೆಟ್ ಶೋ) ಪ್ರದರ್ಶನ ನೀಡಿದರು. ಕರ್ನಾಟಕದ ಜಾನಪದ ಗೊಂಬೆ ಆಟ ರಂಗ ಪ್ರಕಾರಗಳಂತಹದ್ದೇ ಶೈಲಿಯ ಜಪಾನ್ ದೇಶದ ಬುನ್ರಾಕೋ ಪಪೆಟ್ ಆಟದ ಶೈಲಿಯಲ್ಲಿ ನಾಟಕ ಪ್ರಸ್ತುತ ಪಡಿಸಲಾಯಿತು. ಒಂದು ಗಂಟೆ ಕಾಲ ನಡೆದ ಜಾಗೃತಿ ನಾಟಕ ಗ್ರಾಮಸ್ಥರು ಮತ್ತು ಶಾಲಾ ಮಕ್ಕಳ ಗಮನವನ್ನು ಕೇಂದ್ರಿಕರಿಸುವಲ್ಲಿ ಯಶಸ್ವಿಯಾಯಿತು.

ಈ ವೇಳೆ ಕಲಾವಿದ ಸುರೇಶ್, ನರ್ಲಾಕ್ ರಮೇಶ್, ಉದ್ಯಮಿ ಎಚ್.ಎಸ್. ಲಿಂಗೇಶ್, ಸಿ.ಎಂ.ಶಿವರಾಜು. ಸಿ.ಎನ್.ಉಮೇಶ್, ಸಿ.ಸಿ. ರಾಜು, ಮಾದೇಗೌಡ, ಸಂತೋಷ ಸೇರಿದಂತೆ ಹಲವರು ಭಾಗವಹಿಸಿದ್ದರು.