ಸಾರಾಂಶ
ರಾಮನಗರ: ಹೊಲಿಗೆ ತರಬೇತಿ ಪಡೆದ ಮಹಿಳೆಯರು ಸ್ವ ಉದ್ಯೋಗದೊಂದಿಗೆ ಇತರರಿಗೂ ಉದ್ಯೋಗ ನೀಡಬಹುದಾದ ಉದ್ಯಮವಾಗಿ ಬೆಳೆಸಿಕೊಳ್ಳುವುದು ನಿಮ್ಮ ಕೈಯಲ್ಲಿದೆ ಎಂದು ಶ್ರೀ ಗಣೇಶ್ ಜ್ಯುವಲೆರ್ಸ್ ಮಾಲೀಕ ಹಾಗೂ ಸಮಾಜ ಸೇವಕ ಲಕ್ಷ್ಮಣ್ ಕಿವಿಮಾತು ಹೇಳಿದರು.
ನಗರದ ಕನ್ನಿಕಾ ಮಹಲ್‌ನಲ್ಲಿ ರೋಟರಿ ಸಿಲ್ಕ್ ಸಿಟಿ ಆಯೋಜಿಸಿದ್ದ ಹೊಲಿಗೆ ಯಂತ್ರ, ಬ್ಯೂಟಿ ಪಾರ್ಲರ್ ಸಾಮಗ್ರಿಗಳ ವಿತರಣೆ ಹಾಗೂ ಉಚಿತ ತರಬೇತಿ ಕಾರ್ಯಾಗಾರಗಳ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬನೆ ಸಾಧಿಸಲು ನಿರ್ಧಾರ ಮಾಡಿದ್ದೀರಿ. ನೀವೊಬ್ಬರು ಮಾತ್ರವಲ್ಲದೆ ನಿಮ್ಮೊಂದಿಗೆ ಇತರೆ ಮಹಿಳೆಯರನ್ನು ಸೇರಿಸಿಕೊಂಡು ಪ್ರಗತಿ ಸಾಧಿಸಬೇಕು. ಹೊಲಿಗೆ ಯಂತ್ರ, ಬ್ಯೂಟಿ ಪಾರ್ಲರ್ ಸಾಮಗ್ರಿ ಹಾಗೂ ಕುಚ್ಚು ಹಾಕುವ ಸಾಮಗ್ರಿಗಳ ಕಿಟ್‌ಗಳನ್ನು ಸದ್ಬಳಕೆ ಮಾಡಿಕೊಳ್ಳುವಂತೆ ತಿಳಿಸಿದರು.ರೋಟರಿ ಸಂಸ್ಥೆ ಸಮಾಜ ಸೇವೆ ಕಾರ್ಯಗಳು ನನಗೂ ಸ್ಪೂರ್ತಿಯಾಗಿವೆ. ಹಿರಿಯರ ಮಾರ್ಗದರ್ಶನದಲ್ಲಿ ನಾನು ರೋಟರಿ ಸದಸ್ಯನಾಗಿ ನನ್ನ ಕೈಲಾದ ಸೇವೆ ಮಾಡುವ ಆಶಯದಂತೆ ಮಹಿಳೆಯರಿಗೆ ನನ್ನ ಸ್ವಂತ ಹಣದಲ್ಲಿ 142 ಹೊಲಿಗೆ ಯಂತ್ರಗಳು, 101 ಫಲಾನುಭವಿಗಳಿಗೆ ಬ್ಯೂಟಿ ಪಾರ್ಲರ್ ಸಾಮಗ್ರಿ ಹಾಗೂ ಕುಚ್ಚು ಹಾಕುವ ಸಾಮಗ್ರಿಗಳ ಕಿಟ್ ಗಳನ್ನು ನೀಡುತ್ತಿರುವುದು ಸಂತಸ ತಂದಿದೆ. ಇವುಗಳಿಂದ ಬದುಕು ಕಟ್ಟಿಕೊಳ್ಳುವ ಜೊತೆಗೆ ಇತರರಿಗೆ ಮಾದರಿಯಾಗಿ ಎಂದು ಲಕ್ಷ್ಮಣ್ ಸಲಹೆ ನೀಡಿದರು.
ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ ಮಾತನಾಡಿ, ಸಮಾಜದಲ್ಲಿ ಮಹಿಳೆ ಅಬಲೆಯಲ್ಲ, ಸಬಲೆ. ಪುರುಷ ಪ್ರಧಾನ ಸಮಾಜದಲ್ಲಿ ನೂರಾರು ವರ್ಷಗಳಿಂದ ಮಹಿಳೆ ಹೆಸರಿಗೆ ಮಾತ್ರ ಪ್ರಾಧಾನ್ಯತೆ ನೀಡಿದ್ದೇವಷ್ಟೆ. ಮಹಿಳೆ ಮನುಷ್ಯನ ಜನನದಿಂದ ಮುಪ್ಪಿನವರೆಗೂ ಮಾರ್ಗದರ್ಶನ ತೋರುವ ಶಕ್ತಿ ಆಗಿದ್ದಾಳೆ. ಅಂತಹ ಮಹಿಳೆ ಕಳೆದ 40-50 ವರ್ಷಗಳಿಂದೀಚೆಗೆ ಸ್ವಂತ ಕಾಲ ಮೇಲೆ ನಿಲ್ಲುವ ಪ್ರಯತ್ನ ಮಾಡುತ್ತಿರುವುದು ಉತ್ತಮ ಬೆಳವಣಿಗೆ ಎಂದು ಹೇಳಿದರು.ಮಹಿಳೆಯರು ಸ್ವಂತ ಬಲದ ಮೇಲೆ ಜೀವನ ನಡೆಸಲು ರೋಟರಿ ಸಿಲ್ಕ್ ಸಿಟಿ ಅಧ್ಯಕ್ಷರು, ಸದಸ್ಯರು ಶಕ್ತಿ ತುಂಬುವ ಕೆಲಸ ಮಾಡುತ್ತಿರುವುದು ಉತ್ತಮ ಬೆಳವಣಿಗೆ. ಹೆಣ್ಣು ಮಕ್ಕಳ ಸಬಲೀಕರಣಕ್ಕೆ ಲಕ್ಷ್ಮಣ್ ಅವರ ಉದಾರ ನೆರವಿನಲ್ಲಿ ಅರ್ಥಪೂರ್ಣ ಸಹಕಾರ ಕೊಟ್ಟಿದ್ದು, ಫಲಾನುಭವಿಗಳು ಇದರ ಪ್ರಯೋಜನ ಪಡೆದು ಸಾರ್ಥಕ ಬದುಕು ನಡೆಸಿ ಎಂದು ಶುಭ ಕೋರಿದರು.
ಇದೇ ಸಂದರ್ಭದಲ್ಲಿ ಲಕ್ಷ್ಮಣ್ ದಂಪತಿಯನ್ನು ಸನ್ಮಾನಿಸಲಾಯಿತು. ನಗರಸಭೆ ಉಪಾಧ್ಯಕ್ಷೆ ಆಯಿಷಾಬಾನು, ರೋಟರಿ ಜಿಲ್ಲಾ ಪಾಲಕ ಸತೀಶ್ ಮಾಧವನ್, ರೋಟರಿ ಸಿಲ್ಕ್ ಸಿಟಿ ಅಧ್ಯಕ್ಷ ಕೆ.ಎನ್. ಶ್ರೀಧರ್, ಪ್ರಧಾನ ಕಾರ್ಯದರ್ಶಿ ಎಸ್.ರಾಮಲಿಂಗಯ್ಯ, ಜಿಲ್ಲಾ ವೃತ್ತಿಸೇವೆ ನಿರ್ದೇಶಕ ಆನಂದ್ ರಾಮಚಂದ್ರನ್, ಜಿಲ್ಲಾ ಮಹಿಳಾ ಸಬಲೀಕರಣ ನಿರ್ದೇಶಕಿ ಡಾ.ಅನುಪಮ ಆರ್.ಸವದಿ, ಜಿಲ್ಲಾ ಕಾರ್ಯದರ್ಶಿ ರಾಘವೇಂದ್ರ ಇನಾಮ್ದಾರ್, ರೋಟೆರಿಯನ್ ಗಳಾದ ಕುಮಾರಸ್ವಾಮಿ, ಮಲ್ಲೇಶ್, ಅರುಣ್ ಕುಮಾರ್, ಪ್ರಭಾಕರ್, ಗೋಪಾಲ್, ಮೂರ್ತಿ, ಪರಮೇಶ್, ಕಾಂತ ರಾಜು, ಸಿದ್ದಪ್ಪಾಜಿ, ರವಿಕುಮಾರ್, ಸೋಮಶೇಖರ್, ಎ.ಜೆ.ಸುರೇಶ್ ಇತರರಿದ್ದರು.3ಕೆಆರ್ ಎಂಎನ್ 1.ಜೆಪಿಜಿ
ರಾಮನಗರದ ಕನ್ನಿಕಾ ಮಹಲ್‌ನಲ್ಲಿ ರೋಟರಿ ಸಿಲ್ಕ್ ಸಿಟಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶ್ರೀ ಗಣೇಶ್ ಜ್ಯುವೆಲರ್ಸ್ ಮಾಲೀಕ ಲಕ್ಷ್ಮಣ್ ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ ವಿತರಿಸಿದರು.