ಸ್ವಾವಲಂಬಿಗಳಾಗಿ ಬದುಕುವ ಶಿಕ್ಷಣ ಅಗತ್ಯ: ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯರು

| Published : Nov 29 2024, 01:01 AM IST

ಸ್ವಾವಲಂಬಿಗಳಾಗಿ ಬದುಕುವ ಶಿಕ್ಷಣ ಅಗತ್ಯ: ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯರು
Share this Article
  • FB
  • TW
  • Linkdin
  • Email

ಸಾರಾಂಶ

ವಿದ್ಯೆಯನ್ನು ಬಳಸಿಕೊಂಡು ನೌಕರಿಗಾಗಿ ಕಾಯದೆ ಹಲವಾರು ಜನರಿಗೆ ಉದ್ಯೋಗದಾತರಾಗಬೇಕಾಗಿದೆ ಎಂದು ಕಾಶಿಪೀಠದ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯರು ನುಡಿದರು.

ರಾಣಿಬೆನ್ನೂರು: ಸಾವಯವ ಕೃಷಿ ಇಂದಿನ ಅಗತ್ಯವಾಗಿದ್ದು, ಭಗವಂತ ಕೊಟ್ಟಿರುವ ಈ ಭೂಮಿ ಹಾಗೂ ಸುತ್ತಮುತ್ತಲ ಪರಿಸರವನ್ನು ಬಳಸಿಕೊಂಡು ಶರಣರ ವಚನಗಳಂತೆ ಸ್ವರ್ಗಮಯವಾಗಿಸಿಕೊಳ್ಳಬೇಕು ಎಂದು ಕಾಶಿಪೀಠದ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯರು ನುಡಿದರು.

ಇಲ್ಲಿನ ಮೃತ್ಯುಂಜಯ ನಗರದ ಚೆನ್ನೇಶ್ವರ ಮಠದ ಶ್ರೀ ಜಗದ್ಗುರು ವಾಗೀಶ ಪಂಡಿತಾರಾಧ್ಯ ಸಮುದಾಯ ಭವನದಲ್ಲಿ ಬುಧವಾರ ರಾತ್ರಿ ಜಿಲ್ಲಾ ಮತ್ತು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಏರ್ಪಡಿಸಲಾಗಿದ್ದ ವಿವಿಧ ದತ್ತಿ ನಿಧಿ ದಾನಿಗಳ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ವೃತ್ತಿಪರ ಶಿಕ್ಷಣವನ್ನು ಕಲಿತ ಯುವಜನತೆಯ ದುಡಿಯುವ ಕೈಗಳಿಗೆ ದುಡಿಮೆ ಕೊಡುವ ಅವಶ್ಯಕತೆಯಿದೆ. ವಿದ್ಯೆಯನ್ನು ಬಳಸಿಕೊಂಡು ನೌಕರಿಗಾಗಿ ಕಾಯದೆ ಹಲವಾರು ಜನರಿಗೆ ಉದ್ಯೋಗದಾತರಾಗಬೇಕಾಗಿದೆ ಎಂದರು.

ಹೊನ್ನಾಳಿ ಹಿರೇಕಲ್ಮಠದ ಡಾ. ಒಡೆಯರ ಚೆನ್ನಮಲ್ಲಿಕಾರ್ಜುನ ಶಿವಾಚಾರ್ಯರು ಅಧ್ಯಕ್ಷತೆ ವಹಿಸಿದ್ದರು. ನೆಹರು ಮಾರ್ಕೆಟ್ ವರ್ತಕರ ಸಂಘದ ಅಧ್ಯಕ್ಷ ಬಸವರಾಜ ಪಟ್ಟಣಶೆಟ್ಟಿ, ಜಿಲ್ಲಾ ಕಸಾಪ ಅಧ್ಯಕ್ಷ ಲಿಂಗಯ್ಯ ಹಿರೇಮಠ, ತಾಲೂಕು ಕಸಾಪ ಅಧ್ಯಕ್ಷ ಪ್ರಭಾಕರ ಶಿಗ್ಲಿ, ಶ್ರೀ ಮಠದ ಕಾರ್ಯದರ್ಶಿ ಅಮೃತಗೌಡ ಹಿರೇಮಠ, ಜಗದೀಶ ಮಳಿಮಠ ಇದ್ದರು.

ವೃತ್ತಿ ಶಿಕ್ಷಣ ಮತ್ತು ವರ್ತಮಾನದ ಅಗತ್ಯ ವಿಷಯ ಕುರಿತು ವಿಶ್ರಾಂತ ಪ್ರಾಧ್ಯಾಪಕ ಡಾ. ಎಸ್.ಬಿ. ಮಲ್ಲೂರ, ವೀರಶೈವ ಧಾರ್ಮಿಕ ಆಚಾರ-ವಿಚಾರ, ಕೃಷಿಗೆ ಸಂಬಂಧಿಸಿದ ವಿಷಯ ಕುರಿತು ಹಾವೇರಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಅಧೀಕ್ಷಕ ಸೋಮಶೇಖರಯ್ಯ ಹಿರೇಮಠ ಉಪನ್ಯಾಸ ನೀಡಿದರು.

ಎಸ್.ಎಚ್. ಪಾಟೀಲ, ಗುಡ್ಡಪ್ಪ ಹಿಂದಿನಮನಿ, ರಜನಿ ಕರಿಗಾರ, ಬಿ.ಪಿ. ಶಿಡೇನೂರ, ಎ.ಬಿ. ರತ್ನಮ್ಮ, ವಿ.ವೀ ಹರಪನಹಳ್ಳಿ, ವಾಸುದೇವ ಗುಪ್ತಾ, ಉಮೇಶ ಗುಂಡಗಟ್ಟಿ, ಚಂದ್ರಪ್ಪ ಸೊಪ್ಪಿನ, ನಿತ್ಯಾನಂದ ಕುಂದಾಪುರ, ಕೆ.ಎಂ.ಹಾಲಸಿದ್ದಯ್ಯಸ್ವಾಮಿ, ಗೌರಿಶಂಕರ ಸ್ವಾಮಿ ನೆಗಳೂರಮಠ, ಸೋಮನಾಥ ಹಿರೇಮಠ, ಮೃತ್ಯುಂಜಯ ಪಾಟೀಲ, ಚಂದ್ರಶೇಖರ ಮಡಿವಾಳರ, ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು, ಶ್ರೀ ದಾನೇಶ್ವರಿ ಜಾಗೃತಿ ಅಕ್ಕನ ಬಳಗ ಹಾಗೂ ಕದಳಿ ವೇದಿಕೆಯ ಸರ್ವ ಪದಾಧಿಕಾರಿಗಳು ಮತ್ತಿತರರಿದ್ದರು.