ಸ್ವಾಭಿಮಾನವನ್ನು ಅಡವಿಟ್ಟು ಹಿಂಬಾಲಕರಾಗಿ ತಿರುಗುವ ಜನರಿಗೆ ಮನ್ನಣೆ, ಪಕ್ಷದ ಸಿದ್ಧಾಂತ ಬಿಟ್ಟು ಜಾತಿವಾರು ಸಭೆ ನಡೆಸುತ್ತಿರುವ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಹಾಗೂ ಪರಾಜಿತ ಅಭ್ಯರ್ಥಿ ತಮ್ಮ ನಡೆಯನ್ನು ತಿದ್ದಿಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಇದರ ಫಲವನ್ನು ಉಣ್ಣಬೇಕಾಗುತ್ತದೆ. ಇಂದು ಸಣ್ಣಸ್ವಾಮಿಯವರ ಮೇಲೆ ನಡೆದಿರುವ ಹಲ್ಲೆ ಮುಂದಿನ ದಿನಗಳಲ್ಲಿ ನಮ್ಮ ಮೇಲೆ ನಡೆಯುವುದಿಲ್ಲ ಎಂಬುದಕ್ಕೆ ಗ್ಯಾರಂಟಿ ಇಲ್ಲ. ಯಾವುದೇ ಪರಾಜಿತ ಅಭ್ಯರ್ಥಿ ಸಹ ದಬ್ಬಾಳಿಕೆ ನಡೆಸಿದ ಉದಾಹರಣೆ ಇಲ್ಲ. ಸೂಕ್ಷ್ಮ ಮನಸ್ಥಿತಿ ಹೊಂದಿರುವ ಮಲೆನಾಡ ಜನರು ದಬ್ಬಾಳಿಕೆಯನ್ನೂ ಎಂದಿಗೂ ಸಹಿಸುವುದಿಲ್ಲ ಎಂದು ಆಕ್ರೋಶ ಕೇಳಿ ಬಂದಿತು.
ಕನ್ನಡಪ್ರಭ ವಾರ್ತೆ ಸಕಲೇಶಪುರ
ತಾಲೂಕಿನಲ್ಲಿ ದಬ್ಬಾಳಿಕೆ ರಾಜಕೀಯ ನಡೆಯುವುದಿಲ್ಲ, ಇದನ್ನು ಜನರು ಸಹಿಸುವುದೂ ಇಲ್ಲ ಎಂದು ತಾಲೂಕು ಹಿರಿಯ ಕಾಂಗ್ರೆಸ್ ಮುಖಂಡರ ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಯಿತು.ಶುಕ್ರವಾರ ತಾಲೂಕಿನ ಮೂಗಲಿ ಗ್ರಾಮದಲ್ಲಿ ಸ್ವಾಭಿಮಾನಿ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಮುಖಂಡರು, ಕಳೆದ ಮೂರು ವರ್ಷಗಳಿಂದ ಪಕ್ಷ ಕಟ್ಟುವಂತ ಕೆಲಸವಾಗುತ್ತಿಲ್ಲ. ಕೇವಲ ತಮ್ಮ ಸುತ್ತ ಹೊಗಳು ಭಟರನ್ನು ಕಟ್ಟಿಕೊಂಡು ಪಕ್ಷ ಕಟ್ಟುತ್ತೇವೆ ಎಂಬುದು ಸುಳ್ಳು. ತಮ್ಮ ನಡೆಯನ್ನು ವಿರೋಧಿಸುವವರನ್ನು ದಬ್ಬಾಳಿಕೆ ಮೇಲೆ ಹತ್ತಿಕ್ಕುತ್ತೇವೆ ಎಂಬ ಭ್ರಮೆ ಬೇಡ. ಕಳೆದ ಹಲವು ವರ್ಷಗಳಿಂದ ತಾಲೂಕು ಸಮಿತಿಯೆ ಇಲ್ಲದಾಗಿದೆ. ಹಿರಿಯ ಕಾಂಗ್ರೇಸಿಗರನ್ನು ಕಡೆಗಣಿಸಿ ಇತ್ತೀಚೆಗೆ ಬಂದವರಿಗೆ ಮಣೆ ಹಾಕುತ್ತಿರುವುದು ತಪ್ಪು. ಪ್ರಭಾವಿಗಳು ಎಂದು ತಮ್ಮನ್ನು ತಾವೇ ಹೇಳಿಕೊಂಡು ಕ್ಷೇತ್ರದಲ್ಲಿ ಸಂಚರಿಸುತ್ತಿದ್ದಾರೆ. ನಾವು ಪ್ರತಿನಿಧಿಸುವ ಮತಗಟ್ಟೆಗಳಲ್ಲಿ ಬಿದ್ದಿರುವ ಮತ ಹಾಗೂ ಪ್ರಭಾವಿಗಳು ಎನಿಸಿಕೊಂಡಿರುವ ವ್ಯಕ್ತಿಗಳ ಪ್ರತಿನಿಧಿಸುವ ಮತಗಟ್ಟೆಗಳ ಮತವಿವರವನ್ನು ಸಂಗ್ರಹಿಸಿ ವರಿಷ್ಠರಿಗೆ ನೀಡೋಣ ಯಾರು ಯಾರನ್ನು ಪಕ್ಷದಿಂದ ಉಚ್ಚಾಟಿಸುತ್ತಾರೆ ನೋಡೋಣ. ಎಲ್ಲಿಂದಲೋ ಬಂದು ಇಲ್ಲಿ ಹುಟ್ಟಿ ಪಕ್ಷಕ್ಕಾಗಿ ದುಡಿದವರನ್ನು ಹೊರಹಾಕುತ್ತೇವೆ ಎಂಬ ಹಪಹಪಿಯ ಮಾತು ಕೇವಲ ಪ್ರಲಾಪವಾಗೇ ಉಳಿಯಲಿದೆ ಎಂದರು.
ಸ್ವಾಭಿಮಾನವನ್ನು ಅಡವಿಟ್ಟು ಹಿಂಬಾಲಕರಾಗಿ ತಿರುಗುವ ಜನರಿಗೆ ಮನ್ನಣೆ, ಪಕ್ಷದ ಸಿದ್ಧಾಂತ ಬಿಟ್ಟು ಜಾತಿವಾರು ಸಭೆ ನಡೆಸುತ್ತಿರುವ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಹಾಗೂ ಪರಾಜಿತ ಅಭ್ಯರ್ಥಿ ತಮ್ಮ ನಡೆಯನ್ನು ತಿದ್ದಿಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಇದರ ಫಲವನ್ನು ಉಣ್ಣಬೇಕಾಗುತ್ತದೆ. ಇಂದು ಸಣ್ಣಸ್ವಾಮಿಯವರ ಮೇಲೆ ನಡೆದಿರುವ ಹಲ್ಲೆ ಮುಂದಿನ ದಿನಗಳಲ್ಲಿ ನಮ್ಮ ಮೇಲೆ ನಡೆಯುವುದಿಲ್ಲ ಎಂಬುದಕ್ಕೆ ಗ್ಯಾರಂಟಿ ಇಲ್ಲ. ಹಿಂದೆ ಸಾಕಷ್ಟು ಜನರು ಪಕ್ಷಕ್ಕಾಗಿ ದುಡಿದು ಚುನಾವಣೆ ಎದುರಿಸಿದ ಉದಾಹರಣೆಗಳಿವೆ. ಆದರೆ, ಯಾವುದೇ ಪರಾಜಿತ ಅಭ್ಯರ್ಥಿ ಸಹ ದಬ್ಬಾಳಿಕೆ ನಡೆಸಿದ ಉದಾಹರಣೆ ಇಲ್ಲ. ಸೂಕ್ಷ್ಮ ಮನಸ್ಥಿತಿ ಹೊಂದಿರುವ ಮಲೆನಾಡ ಜನರು ದಬ್ಬಾಳಿಕೆಯನ್ನೂ ಎಂದಿಗೂ ಸಹಿಸುವುದಿಲ್ಲ ಎಂದು ಆಕ್ರೋಶ ಕೇಳಿ ಬಂದಿತು.ಸಭೆಯಲ್ಲಿ ಜಿಲ್ಲಾ ಕಾಂಗ್ರೆಸ್ ವಕ್ತಾರ ಕೊಲ್ಲಹಳ್ಳಿ ಸಲೀಂ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಹಾನುಬಾಳ್ ಭಾಸ್ಕರ್, ಯಡೇಹಳ್ಳಿ ಆರ್ ಮಂಜುನಾಥ್, ಬೆಳಗೋಡು ಗ್ರಾಪಂ ಅಧ್ಯಕ್ಷ ಭುವನಕ್ಷಾ, ಹೆಗ್ಗೂವೆ ಪುಟ್ಟರಾಜ್, ಬಾಗೆ ನೀಲಕಂಠ, ಪುರಸಭೆ ಮಾಜಿ ಉಪಾಧ್ಯಕ್ಷ ಶಬೀರ್ ಜಾನ್ ಸೇರಿದಂತೆ ಹಲವು ಮುಖಂಡರು ಭಾಗಿಯಾಗಿದ್ದರು.