ಸಾರಾಂಶ
ಹಾವೇರಿ: ಜಿಲ್ಲೆಯ ಜನತೆಗೆ ರೆಡ್‌ಕ್ರಾಸ್ ಸಂಸ್ಥೆಯ ಸೇವೆ ಹೆಚ್ಚಿನ ಪ್ರಮಾಣದಲ್ಲಿ ಒದಗಿಸುವ ನಿಟ್ಟಿನಲ್ಲಿ ಬ್ಲಡ್ ಬ್ಯಾಂಕ್ ಸ್ಥಾಪನೆಯ ಕಾರ್ಯ ಪ್ರಗತಿದಾಯಕವಾಗಲಿ ಎಂದು ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ರಾಜ್ಯ ಉಪಾಧ್ಯಕ್ಷ ಭಾಸ್ಕರರಾವ್ ತಿಳಿಸಿದರು.ಸ್ಥಳೀಯ ಜಿಲ್ಲಾಸ್ಪತ್ರೆಯ ಹಿಂಭಾಗದಲ್ಲಿರುವ ರೆಡ್‌ಕ್ರಾಸ್ ಸಂಸ್ಥೆ- ಡಿಡಿಆರ್‌ಸಿ ಕಚೇರಿಗೆ ಭೇಟಿ ನೀಡಿ ಜಿಲ್ಲಾಧಿಕಾರಿಗಳ ಹಾಗೂ ಜಿಲ್ಲಾ ಪದಾಧಿಕಾರಿಗಳ ಜತೆಗೆ ಸಭೆ ನಡೆಸಿ, ಬ್ಲಡ್ ಬ್ಯಾಂಕ್ ವಿಚಾರವಾಗಿ ಚರ್ಚಿಸಿ ಮಾತನಾಡಿದರು.ಪ್ರಪಂಚದ 190ಕ್ಕೂ ದೇಶಗಳಲ್ಲಿ ಶಾಖೆಗಳನ್ನು ಹೊಂದಿರುವ ರೆಡ್‌ಕ್ರಾಸ್ ಸಂಸ್ಥೆಯಲ್ಲಿ ನಿಸ್ವಾರ್ಥ ಸೇವೆ ಮಾಡುವುದೇ ಹೆಮ್ಮೆಯ ವಿಷಯವಾಗಿದೆ. ಇಲ್ಲಿ ಕೆಲಸ ಮಾಡುವ ಅವಕಾಶ ಪಡೆದಿರುವುದೇ ನಮ್ಮ ಭಾಗ್ಯವಾಗಿದೆ. ಈ ಸಂಸ್ಥೆಯಲ್ಲಿನ ಸೇವೆ ಜನತೆಗೆ ಮುಟ್ಟಲು ಪ್ರಾಮಾಣಿಕ ಪ್ರಯತ್ನ ಮಾಡಬೇಕಿದೆ. ರೆಡ್ ಸಂಸ್ಥೆಯ ವತಿಯಿಂದ ಬ್ಲಡ್ ಬ್ಯಾಂಕ್ ನಿರ್ಮಾಣಕ್ಕೆ ಈ ಹಿಂದೆ ಉಪಕರಣಗಳನ್ನು ಕಳುಹಿಸಲಾಗಿತ್ತು. ಬ್ಲಡ್ ಬ್ಯಾಂಕ್ ಮಾಡಲು ಎಲ್ಲ ರೀತಿಯ ಅವಕಾಶಗಳು ಇವೆ. ರಾಜ್ಯದಿಂದ ಇನ್ನೂ ಏನಾದರೂ ಸಹಾಯದ ಅಗತ್ಯವಿದ್ದರೆ ಸಹಕಾರ ನೀಡಲಾಗುವುದು ಎಂದರು.ರೆಡ್‌ಕ್ರಾಸ್ ಅಧ್ಯಕ್ಷ ಹಾಗೂ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಮಾತನಾಡಿ, ಬ್ಲಡ್ ಬ್ಯಾಂಕಿಗೆ ಬೇಕಾದ ಎಲ್ಲ ರೀತಿಯ ನೆರವನ್ನು ನೀಡಲಾಗುತ್ತಿದೆ. ಇನ್ನೂ ಎಲ್ಲ ರೀತಿಯ ಸಹಕಾರ ನೀಡಲಾಗುವುದು. ಶೀಘ್ರವಾಗಿ ಬ್ಲಡ್ ಬ್ಯಾಂಕ್ ಸ್ಥಾಪನೆಗೆ ಮುಂದಾಗುತ್ತೇವೆ ಎಂದರು.ಜಿಲ್ಲಾ ಗೌರವ ಕಾಯಾಧ್ಯಕ್ಷ ಸಂಜೀವಕುಮಾರ ನೀರಲಗಿ ಮಾತನಾಡಿ, ಜಿಲ್ಲೆಯಲ್ಲಿ ರೆಡ್‌ಕ್ರಾಸ್ ಸಂಸ್ಥೆ- ಡಿಡಿಆರ್‌ಸಿ ಕೆಲಸಗಳು ನಿರಂತರವಾಗಿ ಜರುಗುತ್ತಿವೆ. ಬ್ಲಡ್ ಬ್ಯಾಂಕ್ ಸ್ಥಾಪನೆಗೆ ಜಿಲ್ಲಾಧಿಕಾರಿಗಳು ಸಹಕಾರ ನೀಡುತ್ತಿದ್ದಾರೆ. ಶೀಘ್ರವಾಗಿ ಬ್ಲಡ್ ಬ್ಯಾಂಕ್ ಮಾಡುವ ತವಕದಲ್ಲಿ ಇದ್ದೇವೆ ಎಂದರು.
ರಾಜ್ಯ ಉಪಾಧ್ಯಕ್ಷ ಭಾಸ್ಕರ್‌ರಾವ್ ಹಾಗೂ ಸಹ ಕಾರ್ಯದರ್ಶಿ ಉಮಾಕಾಂತ್ ಅವರನ್ನು ಸನ್ಮಾನಿಸಲಾಯಿತು. ಬ್ಲಡ್ ಬ್ಯಾಂಕ್ ಮಾಡಲು ನಗರದ ಜಿಲ್ಲಾ ಗ್ರಂಥಾಲಯ ಹತ್ತಿರದ ನಗರಸಭೆ ಮಗಳಿಗಳನ್ನು ವೀಕ್ಷಣೆ ಮಾಡಲಾಯಿತು. ರಾಜ್ಯ ಉಪಾಧ್ಯಕ್ಷರಾದ ಭಾಸ್ಕರ್‌ರಾವ್ ಅವರು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಅಂಶುಕುಮಾರ ಅವರನ್ನು ಹಾಗೂ ಜಿಪಂ ಸಿಇಒ ರುಚಿ ಬಿಂದಲ್ ಅವರನ್ನು ಭೇಟಿ ಮಾಡಿದರು.ಸಭೆಯಲ್ಲಿ ರಾಜ್ಯ ಸಮಿತಿ ಸದಸ್ಯರಾದ ರವಿ ಮೆಣಸಿನಕಾಯಿ, ಗೌರವ ಕಾರ್ಯದರ್ಶಿ ಡಾ. ನೀಲೇಶ್ ಎಂ.ಎನ್., ಖಜಾಂಚಿ ಪ್ರಭು ಹಿಟ್ನಳ್ಳಿ, ವಿಕಲಚೇತನರ ಕಲ್ಯಾಣಾಧಿಕಾರಿ ಆಶುಬಾನು ನದಾಫ, ಜಿಲ್ಲಾ ಪದಾಧಿಕಾರಿಗಳಾದ ಹನುಮಂತಗೌಡ ಗೊಲ್ಲರ, ನಿಂಗಪ್ಪ ಆರೇರ, ಲಲಿತಾ ಹಿರೇಮಠ, ಉಡಚಪ್ಪ ಮಾಳಗಿ, ಕುಮಾರ ಹತ್ತಿಕಾಳ, ಡಾ. ಪ್ರದೀಪ ದೊಡ್ಡಗೌಡ್ರ, ರವಿ ಹಿಂಚಿಗೇರಿ, ನೋಡಲ್ ಅಧಿಕಾರಿ ಪೂರ್ಣಿಮಾ ಹಿರೇಮಠ ಸೇರಿದಂತೆ ಇತರರು ಇದ್ದರು.