ಗ್ರಾಹಕರಿಗೆ ಗುಣಮಟ್ಟದ ಔಷಧಿಗಳನ್ನು ಮಾರಾಟ ಮಾಡಿ: ಎಂ.ಪಿ.ಲೋಕಾನಂದ

| Published : Jan 02 2025, 12:30 AM IST

ಗ್ರಾಹಕರಿಗೆ ಗುಣಮಟ್ಟದ ಔಷಧಿಗಳನ್ನು ಮಾರಾಟ ಮಾಡಿ: ಎಂ.ಪಿ.ಲೋಕಾನಂದ
Share this Article
  • FB
  • TW
  • Linkdin
  • Email

ಸಾರಾಂಶ

ಔಷಧ ವ್ಯಾಪಾರಿಗಳು ಬಹಳಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಜೊತೆಗೆ ಆನ್‌ಲೈನ್ ವ್ಯಾಪಾರವೂ ಸಹ ನಮ್ಮಗಳ ಮೇಲೆ ಸಾಕಷ್ಟು ಪೆಟ್ಟು ನೀಡಿದೆ. ಈ ಎಲ್ಲ ಸವಾಲುಗಳನ್ನು ಸಮರ್ಥವಾಗಿ ಎದುರಿಸಿ ವ್ಯಾಪಾರ ಮಾಡಬೇಕು.

ಕನ್ನಡಪ್ರಭ ವಾರ್ತೆ ಮಂಡ್ಯ

ಸ್ಪರ್ಧಾತ್ಮಕ ಯುಗದಲ್ಲಿ ಔಷಧ ವ್ಯಾಪಾರಸ್ಥರಿಗೆ ಸಾಕಷ್ಟು ಹೊಡೆತ ಬಿದ್ದಿರುವ ಕಾರಣ ಕಾನೂನು ಪರಿಮಿತಿಯೊಳಗೆ ಗ್ರಾಹಕರಿಗೆ ಗುಣಮಟ್ಟದ ಔಷಧಗಳನ್ನು ಮಾರಾಟ ಮಾಡುವಂತೆ ಮಂಡ್ಯ ಜಿಲ್ಲಾ ಔಷಧ ವ್ಯಾಪಾರಿಗಳ ಸಂಘದ ಅಧ್ಯಕ್ಷ ಎಂ.ಪಿ.ಲೋಕಾನಂದ ಸಲಹೆ ನೀಡಿದರು.

ನಗರದ ಔಷಧ ಭವನದಲ್ಲಿ ಜಿಲ್ಲಾ ಔಷಧ ವ್ಯಾಪಾರಿಗಳ ಸಂಘದ ವಾರ್ಷಿಕ ಮಹಾ ಸಭೆಯಲ್ಲಿ ಮಾತನಾಡಿ, ಔಷಧ ವ್ಯಾಪಾರಿಗಳು ಬಹಳಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಜೊತೆಗೆ ಆನ್‌ಲೈನ್ ವ್ಯಾಪಾರವೂ ಸಹ ನಮ್ಮಗಳ ಮೇಲೆ ಸಾಕಷ್ಟು ಪೆಟ್ಟು ನೀಡಿದೆ. ಈ ಎಲ್ಲ ಸವಾಲುಗಳನ್ನು ಸಮರ್ಥವಾಗಿ ಎದುರಿಸಿ ವ್ಯಾಪಾರ ಮಾಡಬೇಕು ಎಂದರು.

ಯಾವುದೇ ಸಮಸ್ಯೆಗಳು ಎದುರಾದಲ್ಲಿ ತಕ್ಷಣ ಸಮಸ್ಯೆ ಬಗೆಹರಿಸಿಕೊಂಡು ವ್ಯಾಪಾರ ವಹಿವಾಟು ಮುಂದುವರಿಸಬೇಕು. ರೋಗಿಗಳು ಮತ್ತು ಸಾರ್ವಜನಿಕರೊಂದಿಗೆ ಸೌಜನ್ಯವಾಗಿ ವರ್ತಿಸುವುದರ ಮೂಲಕ ಅವರ ಆರೋಗ್ಯವೂ ಮುಖ್ಯವಾಗಿರುತ್ತದೆ ಎಂಬುದನ್ನು ಮನಗಾಣಬೇಕು ಎಂದರು.

ಔಷಧ ವ್ಯಾಪಾರದಲ್ಲಿ 25 ವರ್ಷ ಪೂರೈಸಿದ ಹಿರಿಯ ಸದಸ್ಯರು ಮತ್ತು ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಸಂಘದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಹಿರಿಯ ಸದಸ್ಯ ವೀರೇಗೌಡ ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆ ಮಾಡಿದರು. ಮುಂದಿನ ಮೂರು ವರ್ಷದ ಅವಧಿಗೆ ಆಡಳಿತ ಮಂಡಳಿಯನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.

ಅಧ್ಯಕ್ಷರಾಗಿ ಬಿ.ಟಿ.ನಾರಾಯಣ್, ಉಪಾಧ್ಯಕ್ಷರಾಗಿ ದ್ಯಾವೇಗೌಡ, ನಿರ್ಮಲ್‌ಕುಮಾರ್ ಜೈನ್, ಕಾರ್‍ಯದರ್ಶಿಯಾಗಿ ಬಿ. ನಂದೀಶ್, ಸಹ ಕಾರ್‍ಯದರ್ಶಿಯಾಗಿ ಎಸ್. ಲೋಕೇಶ್, ಎಸ್. ಮಹೇಶ್‌ಬಾಬು, ಖಜಾಂಚಿಯಾಗಿ ಬಿ. ಬಸವರಾಜು, ನಿರ್ದೇಶಕರಾಗಿ ಎಂ.ಪಿ. ಲೋಕಾನಂದ, ವಿ.ಆರ್. ಶ್ರೀನಿವಾಸ್, ಬಿ. ಮಂಜುನಾಥ್, ಡಿ.ಸಿ.ಅಶೋಕ್, ಡಿ. ಮಂಜುನಾಥ್, ವೇಣುಗೋಪಾಲ್, ಬಿ.ಕೃಷ್ಣ, ತ್ರಿಮೂರ್ತಿ, ಎ.ರಾಮಣ್ಣ, ಎಸ್.ಕೆ. ಸತೀಶ್, ಕೆ.ಬಿ. ಪುಟ್ಟಸ್ವಾಮಿ, ವಿ. ಅಶೋಕ, ಕೆ.ಎಸ್. ಯೋಗೇಶ್ ಮತ್ತು ಬಿ.ಎಲ್. ಚಂದುಶ್ರೀ ಅವರು ಆಯ್ಕೆಯಾಗಿದ್ದಾರೆ ಎಂದು ಸಂಘದ ಚುನಾವಣಾದಿಕಾರಿ ಎಚ್. ಪ್ರವೀಣ್‌ಕುಮಾರ್ ತಿಳಿಸಿದ್ದಾರೆ.