ಬಿ.ಸಿ.ರೋಡಿಗೆ ಸಮೀಪದ ಮೊಡಂಕಾಪು ವಿದ್ಯಾ ಸಂಸ್ಥೆಯಲ್ಲಿ ಸತತ 42 ವರ್ಷಗಳ ಕಾಲ ಅಕ್ಷರ ಜ್ಞಾನ ಬೆಳಗಿ, ನಾಲ್ಕು ವರ್ಷಗಳ ಕಾಲ ಶಾಲೆಯ ಮುಖ್ಯೋಪಾಧ್ಯಾಯಿನಿ ಯಾಗಿ ಸೇವೆ ಸಲ್ಲಿಸಿದ ತೆರೆಜಾ ಲೌವಂತಿ ಡಿಮೆಲ್ಲೊ ಅವರಿಗೆ ಸಂಸ್ಥೆಯ ವತಿಯಿಂದ ಹೃದಯಸ್ಪರ್ಶಿ ಬೀಳ್ಕೊಡುಗೆ ಹಾಗೂ ಅಭಿನಂದನಾ ಸಮಾರಂಭ ನಡೆಸಲಾಯಿತು.
ಬಂಟ್ವಾಳ: ಬಿ.ಸಿ.ರೋಡಿಗೆ ಸಮೀಪದ ಮೊಡಂಕಾಪು ವಿದ್ಯಾ ಸಂಸ್ಥೆಯಲ್ಲಿ ಸತತ 42 ವರ್ಷಗಳ ಕಾಲ ಅಕ್ಷರ ಜ್ಞಾನ ಬೆಳಗಿ, ನಾಲ್ಕು ವರ್ಷಗಳ ಕಾಲ ಶಾಲೆಯ ಮುಖ್ಯೋಪಾಧ್ಯಾಯಿನಿ ಯಾಗಿ ಸೇವೆ ಸಲ್ಲಿಸಿದ ತೆರೆಜಾ ಲೌವಂತಿ ಡಿಮೆಲ್ಲೊ ಅವರಿಗೆ ಸಂಸ್ಥೆಯ ವತಿಯಿಂದ ಹೃದಯಸ್ಪರ್ಶಿ ಬೀಳ್ಕೊಡುಗೆ ಹಾಗೂ ಅಭಿನಂದನಾ ಸಮಾರಂಭ ನಡೆಸಲಾಯಿತು.ಶಾಲೆಯ ಜೊತೆ ಕಾರ್ಯದರ್ಶಿಗಳಾದ ಅತೀ ವಂದನೀಯ ಸ್ವಾಮಿ ವಿಕ್ಟರ್ ಡಿಸೋಜ ಅಧ್ಯಕ್ಷತೆ ವಹಿಸಿದ್ದರು. ಶಾಲೆಯ ನಿಯೋಜಿತ ಮುಖ್ಯೋಪಾಧ್ಯಾಯ ಸುನಿಲ್ ಫ್ರಾನ್ಸಿಸ್ ಲೂವಿಸ್ ಮಾತನಾಡಿದರು.
ವಿದ್ಯಾರ್ಥಿ ನಾಯಕಿ ಫಾತಿಮ ಅಫಾ ವಿದ್ಯಾರ್ಥಿಗಳ ಪರವಾಗಿ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರೆ, ಪೋಷಕರ ಪರವಾಗಿ ಮಲ್ಲಿಕಾ ಶುಭ ಶಂಸನೆಗೈದರು.ಈ ಸಂದರ್ಭ ಮುಖ್ಯೋಪಾಧ್ಯಾಯಾನಿ ತೆರೆಜಾ ಲೌವಂತಿ ಡಿಮೆಲ್ಲೊ ಅವರನ್ನು ಸನ್ಮಾನಿಸಿ, ಗೌರವಪೂರ್ವಕವಾಗಿ ಬೀಳ್ಕೊಡಲಾಯಿತು. ಶಾಲಾ ವಿದ್ಯಾರ್ಥಿಗಳು ನೆನಪಿನ ಕಾಣಿಕೆಗಳನ್ನಿತ್ತರು. ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷರು, ನ್ಯಾಯವಾದಿ ಅರುಣ್ ರೋಶನ್ ಡಿಸೋಜ ಹಾಗೂ ಕಾರ್ಯದರ್ಶಿ ರಮಿತಾ ಉಪಸ್ಥಿತರಿದ್ದರು.ಶಿಕ್ಷಕಿ ಲೀನಾ ಡಿಮೆಲ್ಲೋ ಸ್ವಾಗತಿಸಿದರು. ಶಿಕ್ಷಕಿ ಗೀತಾ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಲವೀನಾ ಡಿಸೋಜ ವಂದಿಸಿದರು.