ಸಾರಾಂಶ
ಕನ್ನಡಪ್ರಭ ವಾರ್ತೆ ಚಿಕ್ಕೋಡಿ ಪಾಲಕರು ತಮ್ಮ ಮಕ್ಕಳನ್ನು ಕೃಷಿ ಕೆಲಸಕ್ಕೆ, ಅಪಾಯಕಾರಿ ಕೈಗಾರಿಕೆಗಳಲ್ಲಿ, ಹೋಟೆಲ್‌ಗಳಲ್ಲಿ ಕೆಲಸಕ್ಕೆ ಬಳಸಿಕೊಳ್ಳುತ್ತಿರುವುದು ಆತಂಕದ ಸಂಗತಿ ಎಂದು ಎನ್‌ಎಸ್‌ಎಸ್ ಕಾರ್ಯಕ್ರಮಾಧಿಕಾರಿ ಶ್ರೀಶೈಲ ಕೋಲಾರ ಹೇಳಿದರು.
ಕನ್ನಡಪ್ರಭ ವಾರ್ತೆ ಚಿಕ್ಕೋಡಿಪಾಲಕರು ತಮ್ಮ ಮಕ್ಕಳನ್ನು ಕೃಷಿ ಕೆಲಸಕ್ಕೆ, ಅಪಾಯಕಾರಿ ಕೈಗಾರಿಕೆಗಳಲ್ಲಿ, ಹೋಟೆಲ್‌ಗಳಲ್ಲಿ ಕೆಲಸಕ್ಕೆ ಬಳಸಿಕೊಳ್ಳುತ್ತಿರುವುದು ಆತಂಕದ ಸಂಗತಿ ಎಂದು ಎನ್‌ಎಸ್‌ಎಸ್ ಕಾರ್ಯಕ್ರಮಾಧಿಕಾರಿ ಶ್ರೀಶೈಲ ಕೋಲಾರ ಹೇಳಿದರು.
ತಾಲೂಕಿನ ಕೇರೂರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಎನ್ಎಸ್ಎಸ್ ಘಟಕ ಆಯೋಜಿಸಿದ್ದ ವಿಶ್ವ ಬಾಲ ಕಾರ್ಮಿಕ ವಿರೋಧಿ ದಿನ ಕಾರ್ಯಕ್ರಮದಲ್ಲಿ ಮಾತನಾಡಿ, ಪ್ರತಿಯೊಬ್ಬರ ಜೀವನದಲ್ಲಿ ಬಾಲ್ಯ ಎಂಬುದು ಮುಖ್ಯ. ತಿಂದು, ಉಂಡು, ಆಟವಾಡಿ , ಶಿಕ್ಷಣ ಪಡೆಯುವ ವಯಸ್ಸು ಇದು. ಬಹಳಷ್ಟು ಜನ ಸಾಹಿತಿಗಳು ವರ್ಣಿಸಿದಂತೆ ಬಾಲ್ಯಾವಸ್ಥೆಯ ಜೀವನ ಸ್ವರ್ಗವಿದ್ದಂತೆ, ಯಾವ ಆತಂಕ ಉದ್ವೇಗಗಳಿಲ್ಲದೇ ಸಂತೋಷ, ನಗು ಮತ್ತು ಉಲ್ಲಾಸ ಪಡುವಂತಹ ಸಮಯ. ಆದರೆ ಇಂದು ಕುಟುಂಬದ ಆರ್ಥಿಕ ಪರಿಸ್ಥಿತಿ ಸರಿ ಇಲ್ಲದಿರುವುದರಿಂದ ಮಕ್ಕಳು ಬಾಲಕಾರ್ಮಿಕರಾಗುತ್ತಿದ್ದಾರೆ ಎಂದರು.ಅತಿಥಿಗಳಾಗಿ ಆಗಮಿಸಿದ್ದ ಕನ್ನಡ ಉಪನ್ಯಾಸಕ ಡಾ.ನೀಲಕಂಠ ಪೂಜಾರಿ ಮಾತನಾಡಿ, 1986 ರಲ್ಲಿ ಬಾಲ ಕಾರ್ಮಿಕ ನಿಷೇಧ ಮತ್ತು ನಿಯಂತ್ರಣ ಕಾಯ್ದೆಯನ್ನು ಜಾರಿಗೊಳಿಸಲಾಯಿತು. ಇದರ ಅನ್ವಯ 14 ವರ್ಷದ ಒಳಗಿನ ಮಕ್ಕಳು ಹಾಗೂ 18 ವರ್ಷದ ಒಳಗಿನ ಕಿಶೋರಾವಸ್ಥೆಯ ಮಕ್ಕಳನ್ನು ಕೆಲಸಗಳಿಗೆ ನಿಯೋಜನೆ ಮಾಡುವುದು ಶಿಕ್ಷಾರ್ಹ ಅಪರಾಧವಾಗಿದೆ ಎಂದು ವಿವರಿಸಿದರು.ಬಾಲಕಾರ್ಮಿಕರು ಕಂಡುಬಂದರೆ 1098 ಸಹಾಯ ವಾಣಿಗೆ ಕರೆ ಮಾಡಿ ದೂರು ಕೊಡಬಹುದು. ಅಂತಹ ಪ್ರಕರಣದಲ್ಲಿ ಪಾಲ್ಗೊಂಡವರಿಗೆ ₹ 50 ಸಾವಿರ ದಂಡ, 2 ವರ್ಷ ಜೈಲು ಶಿಕ್ಷೆ ವಿಧಿಸಲಾಗುತ್ತಿದೆ. ಈ ಮೂಲಕ ನಮ್ಮ ಸಾಮಾಜಿಕ ಜವಾಬ್ದಾರಿಯನ್ನು ನಿರ್ವಹಿಸಬೇಕು ಎಂದು ಸಲಹೆ ನೀಡಿದರು.ಪ್ರಭಾರಿ ಪ್ರಾಚಾರ್ಯ ಶಂಕರ ತೇಲಿ, ಉಪನ್ಯಾಸಕ ಎಸ್.ಡಿ.ಮಾನೆ, ಎಸ್.ಎಂ.ಕುಲಕರ್ಣಿ, ಎ.ಟಿ.ಬಾನೆ, ಎ.ಡಿ.ದಾನೋಳೆ, ಕವಿತಾ ಮಾಲಬನ್ನವರ, ಗಣಪತಿ ಪಾಟೀಲ, ಸ್ವಾತಿ ಮಾಳಿ, ನಾಮದೇವ ಬಡಿಗೇರ ಇತರರು ಉಪಸ್ಥಿತರಿದ್ದರು.