ಹಿರಿಯ ಪತ್ರಕರ್ತ ಎಂ.ಬಿ. ಮರಮ್‌ ಕಲ್‌ ಗೆಸನ್ಮಾನ

| Published : Jul 03 2024, 12:16 AM IST

ಸಾರಾಂಶ

ಹಿರಿಯ ವಕೀಲರು ಹಾಗೂ ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ ಗೌರವ ಸಂಪಾದಕ ಎಚ್.ಎನ್. ವೆಂಕಟೇಶ್ ಅವರು ಎಂ.ಬಿ. ಮರಮ್ ಕಲ್ ಅವರಿಗೆ ಮೈಸೂರು ಪೇಟ ತೊಡಿಸಿ, ಶಾಲು ಹೊದಿಸಿ ಹಾರ ಹಾಕಿ ಗೌರವಿಸಿದರು.

ಕನ್ನಡಪ್ರಭ ವಾರ್ತೆ ಮೈಸೂರು

ಪತ್ರಿಕಾ ದಿನಾಚರಣೆ ಹಿನ್ನೆಲೆ ಹಿರಿಯ ಪತ್ರಕರ್ತರಾದ ಎಂ.ಬಿ. ಮರಮ್ ಕಲ್ ಅವರನ್ನು ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ ಬಳಗದ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಿತು.

ಹಿರಿಯ ವಕೀಲರು ಹಾಗೂ ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ ಗೌರವ ಸಂಪಾದಕ ಎಚ್.ಎನ್. ವೆಂಕಟೇಶ್ ಅವರು ಎಂ.ಬಿ. ಮರಮ್ ಕಲ್ ಅವರಿಗೆ ಮೈಸೂರು ಪೇಟ ತೊಡಿಸಿ, ಶಾಲು ಹೊದಿಸಿ ಹಾರ ಹಾಕಿ ಗೌರವಿಸಿದರು. ಹಿರಿಯ ಪತ್ರಕರ್ತರಾದ ಕೊಳ್ಳೇಗಾಲ ಮಹೇಶ್, ಕೆ.ಪಿ. ನಾಗರಾಜ್, ರಾಮ್ ಇದ್ದರು.