ಹಿರಿಯ ಸೇವೆ ದೇವರ ಸೇವೆ: ಗುರುಮಹಾಂತ ಶ್ರೀ

| Published : Oct 06 2024, 01:29 AM IST

ಸಾರಾಂಶ

ಇಂದು ನಾವುಗಳು ಮಾಡುವ ಹಿರಿಯ ಸೇವೆ ಒಂದು ದಿನ ನಮ್ಮನ್ನು ರಕ್ಷಣೆ ಮಾಡುತ್ತದೆ. ಪ್ರತಿಯೊಬ್ಬರು ಹಿರಿಯರ ಸೇವೆಯನ್ನು ಮಾಡ ಬೇಕು ಎಂದು ಗುರುಮಹಾಂತ ಶ್ರೀಗಳು ನುಡಿದರು.

ಕನ್ನಡಪ್ರಭ ವಾರ್ತೆ ಇಳಕಲ್ಲ

ಇಂದು ನಾವುಗಳು ಮಾಡುವ ಹಿರಿಯ ಸೇವೆ ಒಂದು ದಿನ ನಮ್ಮನ್ನು ರಕ್ಷಣೆ ಮಾಡುತ್ತದೆ. ಪ್ರತಿಯೊಬ್ಬರು ಹಿರಿಯರ ಸೇವೆಯನ್ನು ಮಾಡ ಬೇಕು ಎಂದು ಗುರುಮಹಾಂತ ಶ್ರೀಗಳು ನುಡಿದರು.

ನಗರದ ಸುರಕ್ಷಾ ಸೇವಾ ಸಂಸ್ಥೆಯಲ್ಲಿ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಹಾಗೂ ನೂತನ ಕೊಠಡಿಯ ಉದ್ಘಾಟನೆ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಜೀವನದ ಸಂದ್ಯಾ ಕಾಲದಲ್ಲಿ ನೊಂದ ಹಿರಿಯ ಜೀವಿಗಳಿಗೆ ನೆಮ್ಮದಿ ನೀಡುತ್ತಿರುವ ಈ ಸುರಕ್ಷಾ ಸೇವಾ ಸಂಸ್ಥೆಯ ಕಾರ್ಯ ಅಭಿನಂದನೀಯ ಎಂದರು.ವಿಜಯಪುರ ಜಿಲ್ಲೆಯ ಬುರಣಾಪುರ ಗ್ರಾಮದ ಸಿದ್ಧಾರೂಢ ಮಠದ ಯೋಗೇಶ್ವರಿ ಮಾತಾಜಿ ಮಾತನಾಡಿ, ಇಳಿ ವಯಸ್ಸಿನಲ್ಲಿ ಮನೆಯ ಮಂದಿಯ ಸಹಕಾರ ಅತೀ ಅವಶ್ಯ. ಆದರೆ, ಇವರನ್ನು ಅನಾಥ ಮಾಡಿದವರಿಗೆ ಒಳ್ಳೆಯದಾಗುವುದಿಲ್ಲ. ಇಂಥ ಅನಾಥ ವೃದ್ಧರನ್ನು ತಮ್ಮ ಮಕ್ಕಳಂತೆ ಸಾಕುತ್ತಿರುವ ಪುರುಷೋತ್ತಮ ದರಕ ಕಾರ್ಯ ಶಾಘ್ಲಿನಿಯ ಎಂದರು. ಇದೇ ವೇಳೆಯಲ್ಲಿ ನೂತನ ಕೊಠಡಿಯನ್ನು ಉದ್ಘಾಟನೆ ಮಾಡಿದ ಗಣ್ಯರು ಪುರುಷೋತ್ತಮ ದರಕ ಅವರನ್ನು ಗೌರವಿಸಿ ಸತ್ಕರಿಸಿದರು. ಸಮಾರಂಭದಲ್ಲಿ ಹಿರಿಯರಾದ ಡಾ.ಆರ್‌.ಎಂ.ಕುಲಕರ್ಣಿ, ವಿ.ಎನ್.ಹಂಚಾಟೆ, ಬಾಳಕೃಷ್ಣ ಗಜೇಂದ್ರಗಡ ಹಾಗೂ ಇತರರು ಉಪಸ್ಥಿತರಿದ್ದರು.