ವಕೀಲರ ಸಂಘಕ್ಕೆ ಸೇವಾ ಹಿರಿತನ ನಿರ್ಲಕ್ಷ್ಯ: ಸೈಯದ್ ಗೌಸ್

| Published : Nov 16 2025, 02:00 AM IST

ವಕೀಲರ ಸಂಘಕ್ಕೆ ಸೇವಾ ಹಿರಿತನ ನಿರ್ಲಕ್ಷ್ಯ: ಸೈಯದ್ ಗೌಸ್
Share this Article
  • FB
  • TW
  • Linkdin
  • Email

ಸಾರಾಂಶ

ಈ ಬಾರಿ ಸೇವಾ ಹಿರಿತನವಿರುವ ತನ್ನನ್ನು ಅಲ್ಪಸಂಖ್ಯಾತ ವರ್ಗಕ್ಕೆ ಸೇರಿದವನ್ನು ಎನ್ನುವ ಕಾರಣಕ್ಕೆ ತನ್ನನ್ನು ಕಡೆಗಣಿಸಿ ವಕೀಲರ ಸಂಘಕ್ಕೆ ಚುನಾವಣೆ ಮೂಲಕ ಅಧ್ಯಕ್ಷರನ್ನು ಅಯ್ಕೆ ಮಾಡಲು ಹುನ್ನಾರ ನಡೆಸಿರುವುದು ಖಂಡನೀಯ ಎಂದು ಹಿರಿಯ ವಕೀಲ ಸೈಯದ್ ಗೌಸ್ ಆರೋಪಿಸಿದರು.

ಕನ್ನಡಪ್ರಭ ವಾರ್ತೆ ಹೊನ್ನಾಳಿ

ಹೊನ್ನಾಳಿ ವಕೀಲರ ಸಂಘದಿಂದ (ಬಾರ್ ಕೌನ್ಸಿಲ್) ಅಧ್ಯಕ್ಷರನ್ನು ಹಲವಾರು ವರ್ಷಗಳಿಂದ ಸೇವಾ ಹಿರಿತನವನ್ನು ಆಧರಿಸಿ ಅಧ್ಯಕ್ಷರನ್ನು ಆಯ್ಕೆ ಮಾಡಿಕೊಂಡು ಬರಲಾಗುತ್ತಿತ್ತು, ಆದರೆ, ಈ ಬಾರಿ ಸೇವಾ ಹಿರಿತನವಿರುವ ತನ್ನನ್ನು ಅಲ್ಪಸಂಖ್ಯಾತ ವರ್ಗಕ್ಕೆ ಸೇರಿದವನ್ನು ಎನ್ನುವ ಕಾರಣಕ್ಕೆ ತನ್ನನ್ನು ಕಡೆಗಣಿಸಿ ವಕೀಲರ ಸಂಘಕ್ಕೆ ಚುನಾವಣೆ ಮೂಲಕ ಅಧ್ಯಕ್ಷರನ್ನು ಅಯ್ಕೆ ಮಾಡಲು ಹುನ್ನಾರ ನಡೆಸಿರುವುದು ಖಂಡನೀಯ ಎಂದು ಹಿರಿಯ ವಕೀಲ ಸೈಯದ್ ಗೌಸ್ ಆರೋಪಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬುಧವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ಎರಡು ವರ್ಷಗಳ ಅವಧಿಗೆ ವಕೀಲರ ಸಂಘದಿಂದ ಅಧ್ಯಕ್ಷರನ್ನು ಆಯ್ಕೆಮಾಡಿಕೊಂಡು ಬರುತ್ತಿದ್ದು, ವಕೀಲರ ಸಮೂಹದಲ್ಲಿ ಸೇವಾ ಹಿರಿತನದ (ಸಿನಿಯಾರಿಟಿ) ಅಧಾರ ಮೇಲೆ ಯಾರು ಅತ್ಯಂತ ಹಿರಿಯ ವಕೀಲರು ಇದ್ದಾರೆಯೋ ಅವರನ್ನು ಸರ್ವಾನುಮತದಿಂದ ನೂತನ ಅಧ್ಯಕ್ಷರನ್ನಾಗಿ ಆಯ್ಕೆಮಾಡಿಕೊಂಡು ಬರಲಾಗುತ್ತಿತ್ತು ಎಂದರು,

ಇದೀಗ 2025-2026ರಿಂದ 2026-2027 ಎರಡು ವರ್ಷಗಳ ಅವಧಿಗೆ ನೂತನ ಅಧ್ಯಕ್ಷರನ್ನು ಆಯ್ಕೆ ಮಾಡಬೇಕಾಗಿದ್ದು, ಈ ಹಿಂದಿನಂತೆ ಸೇವಾ ಹಿರಿತನದಲ್ಲಿ ತಾನು ಇದ್ದು, ಅಧ್ಯಕ್ಷ ಸ್ಥಾನಕ್ಕೆ ಹಿರಿಯನಾದ ತನ್ನನ್ನು ಆಯ್ಕೆ ಮಾಡಬೇಕಾಗಿತ್ತು. ಆದರೆ, ಸಿರಿಯಾರಿಟಿ ಇದ್ದರೂ ಕೂಡ ತನ್ನನ್ನು ಕಡೆ ಗಣಿಸಿ ಇದೂವರೆಗೆ ಪಾಲಿಸಿಕೊಂಡು ಬರುತ್ತಿದ್ದ ಪದ್ದತಿಯನ್ನು ಗಾಳಿಗೆ ತೂರಿ ಕೆಲ ವಕೀಲರು ಸೇರಿಕೊಂಡು ಚುನಾವಣೆ ಮೂಲಕ ಸಂಘದ ಅಧ್ಯಕ್ಷರನ್ನು ಆಯ್ಕೆ ಮಾಡಲು ಹೊರಟಿರುವುದು ಖಂಡನೀಯ ಕ್ರಮವಾಗಿದೆ ಎಂದು ಹೇಳಿದರು.

ಈ ಮಧ್ಯೆ ತಾಲೂಕು ವಕೀಲರ ಸಂಘ 2017ರಿಂದ ಇಲ್ಲಿಯವರೆಗೆ ಸಂಘದ ನೋಂದಣೆ ನವೀಕರಣವಾಗಿರುವುದಿಲ್ಲ, ಹಾಗೂ ಸಂಘದ ಲೆಕ್ಕಪತ್ರಗಳು ಅಡಿಟ್ ಅಗಿರುವುದಿಲ್ಲ, ಬ್ಯಾಂಕ್ ಖಾತೆಯನ್ನು ಸರಿಯಾಗಿ ನಿರ್ವಹಣೆ ಮಾಡಿರುವುದಿಲ್ಲ ಈ ಎಲ್ಲಾ ಅಂಶಗಳನ್ನು ಕಡೆಗಣಿಸಿ ವಕೀಲರ ಸಂಘಕ್ಕೆ ನೂತನ ಅಧ್ಯಕ್ಷರಿಗಾಗಿ ಚುನಾವಣೆ ಮಾಡಲು ಹೊರಟಿದ್ದಾರೆ ಎಂದು ದೂರಿದರು.

ಕಾನೂನನ್ನು ಗಾಳಿಗೆ ತೂರಿ ಚುನಾವಣೆ ನಡೆಸಲು ಹೊರಟಿರುವ ವಿಷಯದ ಬಗ್ಗೆ ಬೆಂಗಳೂರು ಬಾರ್‌ ಕೌನ್ಸಿಲ್‌ ಅಧ್ಯಕ್ಷರು, ಹಾಗೂ ದಾವಣಗೆರೆ ಜಿಲ್ಲಾ ನೋಂದಣಾಧಿಕಾರಿ ದಾವಣಗೆರೆ ಇವರಿಗೆ ದೂರನ್ನು ನೀಡಿ ಸಂಬಂಧಿಸಿದವರ ಮೇಲೆ ಕ್ರಮ ತೆಗೆದುಕೊಳ್ಳುವಂತೆ ಮನವಿ ಮಾಡಿದ್ದೇನೆ ಎಂದರು.

ವಕೀಲರ ಸಂಘದ ಅಧ್ಯಕ್ಷ ಕೆ.ಪಿ.ಜಯಪ್ಪ, ಕಾರ್ಯದರ್ಶಿ ಡಿ.ಎಂ.ಪುರುಷೋತ್ತಮ್, ಚಂದ್ರಪ್ಪಮಡಿವಾಳ ಇತರರು ಇದ್ದರು.