ಸಾರಾಂಶ
ಕನ್ನಡಪ್ರಭ ವಾರ್ತೆ ರಾಯಚೂರು/ಸಿಂಧನೂರುಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಬಗ್ಗೆ ಗೃಹ ಮಂತ್ರಿ ಅಮಿತ್ ಶಾ ಅವರು ರಾಜ್ಯಸಭೆ ಕಲಾಪದಲ್ಲಿ ನೀಡಿದ ಹೇಳಿಕೆ ಖಂಡಿಸಿ ರಾಯಚೂರು ಮತ್ತು ಸಿಂಧನೂರು ನಗರದಲ್ಲಿ ಗುರುವಾರ ಪ್ರತ್ಯೇಕವಾಗಿ ಪ್ರತಿಭಟನೆಯನ್ನು ನಡೆಸಲಾಯಿತು.ರಾಯಚೂರು ನಗರದ ಜಿಲ್ಲಾಧಿಕಾರಿ ಕಚೇರಿ ಮುಂದೆ ಅಂಬೇಡ್ಕರ್ ಸೇನೆ ನೇತೃತ್ವದಲ್ಲಿ ಹೋರಾಟ ನಡೆಸಲಾಯಿತು, ಅದೇ ರೀತಿ ಸಿಂಧನೂರಿನಲ್ಲಿ ಸಿಪಿಐ ಎಂಎಲ್ ಲಿಬರೇಶನ್ ಪಾರ್ಟಿಯಿಂದ ನಗರದಲ್ಲಿ ಪ್ರತಿಭಟನೆ ನಡೆಸಿ ತಹಶೀಲ್ದಾರ್ ಮೂಲಕ ರಾಷ್ಟ್ರಪತಿಗಳಿಗೆ ಗುರುವಾರ ಮನವಿ ಪತ್ರ ರವಾನಿಸ ಲಾಯಿತು.ಅಂಬೇಡ್ಕರ್ ಹೆಸರು ಹೇಳುವುದು ಈಗ ಶೋಕಿ ಆಗಿ ಬಿಟ್ಟಿದೆ. ಇಷ್ಟೊಂದು ಬಾರಿ ದೇವರು ಹೆಸರು ಹೇಳಿದ್ದರೆ ಏಳು ಜನ್ಮಗಳವರೆಗೆ ಸ್ವರ್ಗ ಪ್ರಾಪ್ತಿ ಆಗುತ್ತಿತ್ತು ಎಂದು ಗೃಹ ಸಚಿವ ಅಮಿತ್ ಶಾ ರಾಜ್ಯಸಭೆ ಕಲಾಪದಲ್ಲಿ ನಾಲಿಗೆ ಹರಿಬಿಟ್ಟು ಬಾಬಾಸಾಹೇಬರಿಗೆ ಅವಮಾನ ಮಾಡುವ ಮೂಲಕ ರಾಷ್ಟ್ರದ್ರೋಹ ಕೃತ್ಯ ಎಸಗಿದ್ದಾರೆ. ಆರ್ಎಸ್ಎಸ್ ಕೂಸಾದ ಬಿಜೆಪಿಯು ದೇಶದ ಜನರ ಮೇಲೆ ಮನುವಾದ ಹೇರಲು ಹೊರಟಿದೆ. ಕೂಡಲೇ ಅಮಿತ್ ಶಾ ಬೇಷರತ್ ಕ್ಷಮೆಯಾಚಿಸಿ ಸಚಿವ ಸ್ಥಾನದಿಂದ ಕೆಳಗಿಳಿಯಬೇಕು ಎಂದು ಆಗ್ರಹಿಸಿದರು.ರಾಯಚೂರಿನ ಹೋರಾಟದಲ್ಲಿ ಸಂಘದ ಮುಖಂಡರಾದ ವಿಶ್ವನಾಥ ಪಟ್ಟಿ, ಮಹೇಶ ಕುಮಾರ, ಬಂದೇನವಾಜ್, ಕುಮಾರಸ್ವಾಮಿ, ಅಂಬಾಜಿರಾವ್, ತಮ್ಮಣ್ಣ ವಕೀಲ, ಮಂಜುನಾಥ, ಬಸವ ಆರೋಪಿ. ಶಬ್ಬೀರ ಅಲಿ ಇದ್ದರು.ಸಿಂಧನೂರಿನ ಪ್ರತಿಭಟನೆಯಲ್ಲಿ ಮುಖಂಡರಾದ ನಾಗರಾಜ್ ಪೂಜಾರ್,ಬಸವರಾಜ ಎಕ್ಕಿ, ಬಸವರಾಜ ಕೊಂಡೆ, ಬಸವರಾಜ ಬೆಳಗುರ್ಕಿ, ಶ್ರೀನಿವಾಸ ಬುಕ್ಕನಹಟ್ಟಿ, ರಾಘವೇಂದ್ರ ಉಪ್ಪಳ, ಹುಲುಗಪ್ಪ ಹುಲುಗುಂಚಿ, ಶೇಕ್ಷಾವಲಿ, ಮಂಜುನಾಥ, ಹನುಮಂತ ಬೂದಿವಾಳ ಕ್ಯಾಂಪ್, ಕಂಠೆಪ್ಪ ರೈತನಗರ ಕ್ಯಾಂಪ್, ಮಲ್ಲಿಕಾರ್ಜುನ ರೈತನಗರ ಇದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))